ಲೋಕಾ ಸೂಚನೆ ಪಾಲಿಸದ ಪಾಲಿಕೆ
Team Udayavani, Jan 17, 2018, 12:07 PM IST
ಬೆಂಗಳೂರು: ಪ್ರತಿಷ್ಠಿತ ಜಯನಗರ 4ನೇ ಬ್ಲಾಕ್‌ನಲ್ಲಿ ಬಿಡಿಎ ಹೊಸದಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ (ಶಾಪಿಂಗ್ ಕಾಂಪ್ಲೆಕ್ಸ್) ಅನ್ನು ಬಿಡಿಎಯಿಂದ ವಶಕ್ಕೆ ಪಡೆದು, ಬಾಡಿಗೆ ವಸೂಲಿ ಮಾಡುವಂತೆ ಹಾಗೂ ಮಳಿಗೆಗಳನ್ನು ಅರ್ಹರಿಗೆ ಹಂಚಿಕೆ ಮಾಡಿ ಆದಾಯ ಪಡೆಯುವಂತೆ ಲೋಕಾಯುಕ್ತ ಸಂಸ್ಥೆ ಸೂಚಿಸಿ ಮೂರು ತಿಂಗಳು ಕಳೆದರೂ, ಆ ನಿಟ್ಟಿನಲ್ಲಿ ಪಾಲಿಕೆ ಕಾರ್ಯಪ್ರವೃತ್ತವಾಗಿಲ್ಲ.
ಮೂರು ವರ್ಷಗಳ ಹಿಂದೆ ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣದಲ್ಲಿ 205 ಮಳಿಗೆಗಳಿವೆ. ಹಂಚಿಕೆ ಪ್ರಕ್ರಿಯೆ ವಿಳಂಬದಿಂದಾಗಿ ಪಾಲಿಕೆ, ಬಿಡಿಎಗೆ ಬಿಡಿಗಾಸು ವರಮಾನ ಬರದಂತಾಗಿದೆ. ಇನ್ನೊಂದೆಡೆ ಮಳಿಗೆ ಹಂಚಿಕೆಯಾದರೂ ಮಳಿಗೆದಾರರು ಸ್ಥಳಾಂತರಗೊಳ್ಳದೆ ಬೀದಿ ಬದಿ ವ್ಯಾಪಾರ ಮುಂದುವರಿಸಿದ್ದಾರೆ. ಲೋಕಾಯುಕ್ತರ ಸೂಚನೆ ಹೊರತಾಗಿಯೂ ಪಾಲಿಕೆ ಕಾರ್ಯೋನ್ಮುಖವಾಗದಿರುವುದು ಚರ್ಚೆಗೆ ಕಾರಣವಾಗಿದೆ.
ಬಿಡಿಎ ವಾಣಿಜ್ಯ ಸಂಕೀರ್ಣದ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಜತೆಗೆ ಮಳಿಗೆಗಳ ಹಂಚಿಕೆಗೆ ಅರ್ಹ ಫಲಾನುಭವಿಗಳ ಪಟ್ಟಿಯೂ ಸಿದ್ಧವಿದೆ. ಆದರೆ, ಮೂರು ವರ್ಷಗಳಿಂದ ಬಿಡಿಎ ಅಥವಾ ಪಾಲಿಕೆಯು ಮಳಿಗೆಗಳನ್ನು ಹಂಚಿಕೆ ಮಾಡದ ಕಾರಣ ಪಾಲಿಕೆಗೆ ಬರಬೇಕಾದ ಆದಾಯ ತಪ್ಪಿದಂತಾಗಿದೆ.
ಸಾರ್ವಜನಿಕರ ದೂರಿನ ಅನ್ವಯ ಪಾಲಿಕೆ ಅಧಿಕಾರಿಗಳ ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಎರಡು ತಿಂಗಳಲ್ಲಿ ಮಳಿಗೆ ಹಂಚಿಕೆ ಮಾಡಿ ಬಾಡಿಗೆ ಸಂಗ್ರಹಿಸುವಂತೆ ಸೂಚಿಸಿದ್ದರು. ಮಳಿಗೆ ಹಂಚಿಕೆಯಾದವರು ಕೂಡಲೇ ಸಂಕೀರ್ಣದಲ್ಲಿ ವ್ಯಾಪಾರ ಆರಂಭಿಸಲು ನೋಟಿಸ್ ಜಾರಿಗೊಳಿಸಬೇಕು.
ಒಂದೊಮ್ಮೆ ವ್ಯಾಪಾರ ಆರಂಭಿಸದಿದ್ದರೆ ಆ ಮಳಿಗೆಯನ್ನು ಬೇರೊಬ್ಬರಿಗಾದರೂ ಹಂಚಿಕೆ ಮಾಡುವಂತೆಯೂ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದರು. ಈ ಸಂಬಂಧ ಪಾಲಿಕೆಯಿಂದ ಕೈಗೊಂಡ ಕ್ರಮಗಳ ಕುರಿತು ಎರಡು ತಿಂಗಳಲ್ಲಿ ವರದಿ ನೀಡುವಂತೆ ಅಕ್ಟೋಬರ್‌ನಲ್ಲೇ ಸೂಚನೆ ನೀಡಿದ್ದರು.
ಸಂಕೀರ್ಣದ ವೆಚ್ಚ ಪಾವತಿಸಿ: ಜಯನಗರದಲ್ಲಿ ಒಟ್ಟು 4 ಬ್ಲಾಕ್ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಬಿಬಿಎಂಪಿ, ಬಿಡಿಎ ನಡುವೆ ಒಪ್ಪಂದವಾಗಿತ್ತು. ಅದರಂತೆ ಕಟ್ಟಡ ನಿರ್ಮಾಣದ ವೆಚ್ಚವನ್ನು ಬಿಡಿಎ ಭರಿಸಿ, ಕಟ್ಟಡಗಳಿಂದ ಬರುವ ಬಾಡಿಗೆಯಿಂದ ಪಡೆಯುವುದು ಒಪ್ಪಂದದ ಸಾರವಾಗಿತ್ತು.
ಆದರೆ, ಸದ್ಯ ಪೂರ್ಣಗೊಂಡಿರುವ ವಾಣಿಜ್ಯ ಸಂಕೀರ್ಣದ ಮಳಿಗೆಗಳು ಹಂಚಿಕೆಯಾಗದ ಕಾರಣ ಮೂರು ವರ್ಷಗಳಿಂದ ಆದಾಯ ಬಾರದ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ಕಟ್ಟಡ ನಿರ್ಮಾಣಕ್ಕೆ ತಗಲಿರುವ 56.63 ಕೋಟಿ ರೂ. ವೆಚ್ಚವನ್ನು ಪಾವತಿಸುವಂತೆ ಮತ್ತು ಉಳಿದ ಕಟ್ಟಡಗಳ ಕಾಮಗಾರಿಯನ್ನು ಪಾಲಿಕೆ ವತಿಯಿಂದಲೇ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ಮೂರು ಸಂಕೀರ್ಣ ನಿರ್ಮಾಣ: ಬಿಡಿಎ ಮತ್ತು ಬಿಬಿಎಂಪಿ ನಾಲ್ಕು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದವು. ಅದರಂತೆ ಇದೀಗ ಬ್ಲಾಕ್-1 ವಾಣಿಜ್ಯ ಸಂಕೀರ್ಣದ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಬ್ಲಾಕ್‌ಗಳಲ್ಲಿರುವ ವ್ಯಾಪಾರಿಗಳು ಬ್ಲಾಕ್ -1ರ ಮಳಿಗೆಗಳಿಗೆ ಸ್ಥಳಾಂತರಗೊಂಡರೆ, ಉಳಿದ ಮೂರು ಬ್ಲಾಕ್‌ಗಳಲ್ಲಿನ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಸಂಕೀರ್ಣ ನಿರ್ಮಿಸಲು ಪಾಲಿಕೆಯ ಅಧಿಕಾರಿಗಳು ಚಿಂತಿಸಿದ್ದಾರೆ.
ಜಯನಗರ 4ನೇ ಬ್ಲಾಕ್ ವಾಣಿಜ್ಯ ಸಂಕೀರ್ಣ ವಶಕ್ಕೆ ಪಡೆದು ಮಳಿಗೆಗಳ ಹಂಚಿಕೆ ಮಾಡುವಂತೆ ಲೋಕಾಯುಕ್ತರು ನೀಡಿರುವ ಸೂಚನೆಯಲ್ಲಿನ ಅಂಶಗಳನ್ನು ಪಾಲಿಸಲು ಒಪ್ಪಿಗೆ ಪಡೆಯುವ ಸಂಬಂಧ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಡಲಾಗಿದೆ. ಮೂರು ಬಾರಿ ಪ್ರಸ್ತಾವನೆಯನ್ನು ಸಭೆಯ ಮುಂದಿಡಲಾಗಿದ್ದು, ಈ ವಿಷಯದ ಕುರಿತು ಚರ್ಚೆಯಾಗಿಲ್ಲ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.