ಫೆ. 5-7: ರಾಜ್ಯಮಟ್ಟದ ಯುವಜನ ಮೇಳ


Team Udayavani, Jan 17, 2018, 2:45 PM IST

18-Jan-14.jpg

ಪುತ್ತೂರು: ಪುತ್ತೂರಿನಲ್ಲಿ ರಾಜ್ಯಮಟ್ಟದ ಯುವಜನ ಮೇಳವು ಫೆ. 5ರಿಂದ 7ರ ತನಕ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ
ನಗರದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಭಾಭವನದಲ್ಲಿ ಸಮಾಲೋಚನ ಸಭೆ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಪನಿರ್ದೇಶಕ ಪ್ರದೀಪ್‌ ಡಿ’ಸೋಜ, ಪ್ರತಿ ಜಿಲ್ಲೆಯಿಂದ 192 ಜನರಂತೆ ಒಟ್ಟು 6 ಸಾವಿರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಊಟ, ವಸತಿ ಸಹಿತ ಎಲ್ಲ ವ್ಯವಸ್ಥೆಗಳಿಗೆ 75 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ. ರಾಜ್ಯ ಸರಕಾರದಿಂದ 40 ಲಕ್ಷ ರೂ. ಅನುದಾನ ಲಭಿಸುತ್ತದೆ ಎಂದು ಮಾಹಿತಿ ನೀಡಿದರು.

ಪ್ರಥಮ ಬಾರಿಗೆ 40 ಲಕ್ಷ ರೂ.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಯುವಜನ ಮೇಳಕ್ಕೆ ಸರಕಾರದಿಂದ 40 ಲಕ್ಷ ರೂ. ಲಭಿಸುತ್ತಿದೆ. ಕಳೆದ ಬಾರಿ ವಿಟ್ಲದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆದಿತ್ತು. 25 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಬೇಕಾಗುತ್ತದೆ. ಊಟದ ವ್ಯವಸ್ಥೆಗೆ 30 ಲಕ್ಷ ರೂ.ನ ಟೆಂಡರ್‌ ಆಗುತ್ತದೆ. 6 ಸಾವಿರ ಮಂದಿಗೆ ವಸತಿ ವ್ಯವಸ್ಥೆಯನ್ನೂ ಮಾಡಬೇಕಾಗುತ್ತದೆ. ಉಳಿದ ಹಣವನ್ನು ಭರಿಸಬೇಕಾದ
ಜವಾಬ್ದಾರಿ ಇದೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಸುತ್ತೋಲೆ
ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘ‌ ಚರ್ಚೆ ನಡೆಯಿತು. ಗ್ರಾ.ಪಂ., ಜಿ.ಪಂ., ತಾ.ಪಂ.ನಿಂದ
ಅನುದಾನ ಕೇಳಲು ನಿರ್ಧರಿಸಲಾಯಿತು. ಜಿಲ್ಲೆಯ ಪ್ರತಿ ಗ್ರಾ.ಪಂ.ಗಳಿಂದ ತಲಾ 5 ಸಾವಿರ ರೂ. ಹಾಗೂ ತಾ.ಪಂ.ಗಳಿಂದ ತಲಾ 25 ಸಾವಿರ ರೂ. ಸಹಾಯ ಕೇಳಲು ಹಾಗೂ ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರಿಂದ ಸುತ್ತೋಲೆಗಳನ್ನು ಕಳುಹಿಸಲು ಶಾಸಕರು ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದರು.

ಮಂಗಳೂರು ಮಹಾನಗರಪಾಲಿಕೆಯಿಂದ 5 ಲಕ್ಷ ರೂ. ಕೇಳಲು ಶಾಸ ಕರು ಸೂಚಿಸಿದರು. ಎನ್‌ಜಿಒಗಳಿಂದ, ಎಂಆರ್‌ ಪಿಎಲ್‌, ಕ್ಯಾಂಪ್ಕೋ, ಎಸ್‌ ಸಿಡಿಸಿಸಿ ಬ್ಯಾಂಕ್‌ ಸಹಿತ ಹಲವು ಮೂಲಗಳಿಂದ ಸಹಾಯ ಕೇಳಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಎಲ್ಲ ಇಲಾಖೆಗಳ ಸಭೆ ಕರೆಯುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್‌ ರೈ ಸೂಡಿ ಮುಳ್ಳು ಮಾತನಾಡಿ, ರಾಜ್ಯ ಒಕ್ಕೂಟದ ಸಭೆಯೂ ಅಂದೇ ನಡೆಯಲಿದೆ ಎಂದು ತಿಳಿಸಿದರು.

ಸಮಿತಿಗಳ ರಚನೆ
ಶಾಸಕರ ಗೌರವಾಧ್ಯಕ್ಷತೆ, ಸಹಾಯಕ ಆಯುಕ್ತರ ಅಧ್ಯಕ್ಷತೆಯ ಆರ್ಥಿಕ ಸಮಿತಿ ಕರಡನ್ನು ರಚಿಸಲಾಯಿತು. ಉಳಿದ ಸಮಿತಿಗಳನ್ನೂ ರಚಿಸಿ ಆಯಾ ಸಮಿತಿಯಲ್ಲಿ ಒಬ್ಬರಿಗೆ ಜವಾಬ್ದಾರಿ ಹಂಚಿಕೆ ಮಾಡುವಂತೆ ಶಾಸಕರು ಸೂಚಿಸಿದರು. ಕಾರ್ಯಕ್ರಮಕ್ಕೆ ಮೊದಲು ಎಲ್ಲ ಸಮಿತಿಗಳ ಸಭೆ ನಡೆಸಲು ನಿರ್ಧರಿಸಲಾಯಿತು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಪ್ರಮೀಳಾ ಜನಾರ್ದನ, ಶಯನಾ ಜಯಾನಂದ, ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಇಒ ಜಗದೀಶ್‌, ತಾ| ಯುವಜನ ಒಕ್ಕೂಟದ ಕಾರ್ಯದರ್ಶಿ ಸುಬ್ರಹ್ಮಣ್ಯ ಕರಂಬಾರು, ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ವಂ| ವಿಜಯ ಹಾರ್ವಿನ್‌, ಪತ್ರಕರ್ತ ಯು.ಪಿ. ಶಿವಾನಂದ, ಅರುಣ್‌ ಕುಮಾರ್‌ ಪುತ್ತಿಲ, ಸಾಜ ರಾಧಾಕೃಷ್ಣ ಆಳ್ವ, ಶಿವನಾಥ ರೈ ಮೇಗಿನಗುತ್ತು, ಮೊದಲಾದವರು ಉಪಸ್ಥಿತರಿದ್ದರು. ತಾ| ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್‌ ನಿರೂಸಿದರು.

ಪುತ್ತೂರಿನ ಹಬ್ಬ
ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎಂ. ಮಾಮಚ್ಚನ್‌ ಮಾತನಾಡಿ, ಪುತ್ತೂರಿನ
ಎಲ್ಲ ಸಂಘ- ಸಂಸ್ಥೆಗಳು, ಯುವ ಸಂಘಟನೆಗಳು ಸಂಘಟಿತವಾಗಿ ಕಾರ್ಯಕ್ರಮ ಆಯೋಜಿಸಬೇಕು. ಇದು ಪುತ್ತೂರಿನ ಹಬ್ಬವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

KUNDAPURA-BOA

Kundapura: ಮುಳುಗುತ್ತಿದ್ದ ಬೋಟ್‌ ರಕ್ಷಣೆ: 6 ಮೀನುಗಾರರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Aranthodu: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದು ಹಲ್ಲೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Fraud: ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಶನ್‌ ಹೆಸರಲ್ಲಿ ವಂಚನೆ

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

subharamaya-Swamiji

Thirupathi: ಲಡ್ಡು ಪ್ರಸಾದಕ್ಕೆ ಕಲಬೆರಕೆ ಪದಾರ್ಥಗಳ ಬಳಕೆ: ಸುಬ್ರಹ್ಮಣ್ಯ ಸ್ವಾಮೀಜಿ ಕಳವಳ

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ

mlr-mangalore

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.