ಕುತೂಹಲಕಾರಿ “ನ್ಯಾಯ’ಕದನದಲ್ಲಿ ಕ್ರಿಕೆಟಿಗ ಗಂಭೀರ್!
Team Udayavani, Jan 18, 2018, 11:30 AM IST
ನವದೆಹಲಿ: ಭಾರತದ ಖ್ಯಾತ ಕ್ರಿಕೆಟಿಗರಲ್ಲೊಬ್ಬರಾದ ಗೌತಮ್ ಗಂಭೀರ್ ಕುತೂಹಲಕಾರಿ ಪ್ರಕರಣವೊಂದರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ದೆಹಲಿ ಗುಂಗ್ರೂ ಆ್ಯಂಡ್ ಹವಾಲತ್ ಎಂಬ ಪಬ್‌ನ ಅಡಿಬರಹದಲ್ಲಿ ಗೌತಮ್ ಗಂಭೀರ್ ಹೆಸರನ್ನು ಬಳಕೆ ಮಾಡಲಾಗಿದೆ. ಇದು ತಪ್ಪು, ನನ್ನ ಹೆಸರನ್ನು ತಮ್ಮ ಜನಪ್ರಿಯತೆಗಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಗಂಭೀರ್ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಏಕಸದಸ್ಯ ಪೀಠದಲ್ಲಿ ಅವರಿಗೆ ಸೋಲಾಗಿತ್ತು. ಇದೀಗ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಬಾರ್ ಮುಖ್ಯಸ್ಥನಿಗೆ ನೋಟಿಸ್ ನೀಡಲಾಗಿದೆ. ಈ ಬಾರ್‌ಗಳನ್ನು ನಡೆಸುತ್ತಿರುವುದು ಡಿಎಪಿ ಮತ್ತು ಸಮೂಹ. ವಿಶೇಷವೆಂದರೆ ಈ ಸಮೂಹದ ಮುಖ್ಯಸ್ಥರ ಹೆಸರೂ ಗೌತಮ್ ಗಂಭೀರ್ ಎಂದೇ. ಆದ್ದರಿಂದ ಅವರು ತಮ್ಮ ಹೆಸರನ್ನು ಟ್ಯಾಗ್‌ಲೈನ್ ಆಗಿ ಬಳಸಿದ್ದಾರೆ. ಇದು ನ್ಯಾಯಪೀಠ ಮತ್ತು ಗಂಭೀರ್ ಇಬ್ಬರನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ತಾಂತ್ರಿಕವಾಗಿ ನೋಡಿದರೆ ಇಲ್ಲಿ ಬಾರ್ ಮಾಲಿಕರದ್ದು ಯಾವುದೇ ತಪ್ಪಿಲ್ಲ. ಆದ್ದರಿಂದಲೇ ಮೊದಲ ತೀರ್ಪಿನಲ್ಲಿ ಮಾಲಿಕರ ಪರವಾಗಿ ತೀರ್ಪು ಬಂದಿದೆ. ಆದರೆ ಗಂಭೀರ್ ಮಾತ್ರ ತನ್ನ ಹೆಸರನ್ನು ತಮ್ಮ ಬಾರ್ ಜನಪ್ರಿಯತೆಗಾಗಿ ಬಳಸಿ ಕೊಳ್ಳಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ. ಈ ಪ್ರಕರಣ ಎಲ್ಲಿಗೆ ಮುಟ್ಟುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi: ಯೋಧಾಸ್‌ಗೆ ತಲೈವಾಸ್ ಆಘಾತ
Hockey: ಇಂದಿನಿಂದ ಜೂ. ಏಷ್ಯಾ ಕಪ್ ಹಾಕಿ; ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.