ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಔಟ್‌


Team Udayavani, Jan 18, 2018, 12:46 PM IST

18-26.jpg

ಮೌಂಟ್‌ ಮಾಂಗನಿ: ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ನುಗಳ ಸೋಲನುಭವಿಸಿದ ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಕೂಟದಿಂದ ಹೊರಬಿದ್ದಿದೆ. ಇದು ವಿಂಡೀಸಿಗೆ ಎದುರಾದ ಸತತ 2ನೇ ಸೋಲು. “ಎ’ ವಿಭಾಗದಲ್ಲಿ ಸತತ 2 ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್‌ ನಾಕೌಟ್‌ ಪ್ರವೇಶಿಸಿವೆ. 

ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 282 ರನ್‌ ಪೇರಿಸಿದರೆ, ವೆಸ್ಟ್‌ ಇಂಡೀಸ್‌ 45.3 ಓವರ್‌ಗಳಲ್ಲಿ 206 ರನ್ನಿಗೆ ಕುಸಿಯಿತು. ವಿಜೇತ ತಂಡದ ಪರ ಕೀಪರ್‌ ಮ್ಯಾಕ್ವೆಟು ಅಜೇಯ 99 ರನ್‌ ಹೊಡೆದರೆ, ರಾಲ್ಫೆಸ್‌ 33 ರನ್ನಿತ್ತು 4 ವಿಕೆಟ್‌ ಉಡಾಯಿಸಿದರು. ಅಲಿಕ್‌ ಅತನೇಜ್‌ (76) ಮತ್ತು ಕರ್ಸ್ಟನ್‌ ಕಾಳೀಚರಣ್‌ (44) ಸೇರಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಹೋರಾಟವೊಂದನ್ನು ಸಂಘಟಿಸಿದರೂ ವಿಂಡೀಸಿಗೆ ಲಾಭವಾಗಲಿಲ್ಲ. ಕೊನೆಯ 6 ವಿಕೆಟ್‌ಗಳು 29 ರನ್‌ ಅಂತರದಲ್ಲಿ ಹಾರಿ ಹೋದವು!

ಅಫ್ಘಾನಿಸ್ಥಾನ ಗೆಲುವಿನ ಓಟ
ವಾಂಗರಿ: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ “ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಸುದ್ದಿಯಾಗಿದ್ದ ಅಫ್ಘಾನಿಸ್ಥಾನ, ಬುಧವಾರದ ದ್ವಿತೀಯ ಮುಖಾಮುಖೀಯಲ್ಲಿ ಏಷ್ಯಾದ ಮತ್ತೂಂದು ಬಲಿಷ್ಠ ತಂಡವಾದ ಶ್ರೀಲಂಕಾವನ್ನು 32 ರನ್ನುಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ ಸ್ಥಾನವನ್ನು ಖಚಿತಪಡಿಸಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 7 ವಿಕೆಟಿಗೆ 284 ರನ್ನುಗಳ ಬೃಹತ್‌ ಮೊತ್ತ ಒಟ್ಟುಗೂಡಿಸಿದರೆ, ಶ್ರೀಲಂಕಾ ಚೇಸಿಂಗ್‌ ವೇಳೆ ಮಳೆ ಸುರಿಯಿತು. ಹೀಗಾಗಿ 38 ಓವರ್‌ಗಳಲ್ಲಿ 235 ರನ್ನುಗಳ ಗುರಿ ನಿಗದಿಗೊಳಿಸಲಾಯಿತು. ಆದರೆ ಕಮಿಂಡು ಮೆಂಡಿಸ್‌ ಪಡೆ 37.3 ಓವರ್‌ಗಳಲ್ಲಿ 202 ರನ್ನಿಗೆ ಆಲೌಟ್‌ ಆಯಿತು.

ಅಫ್ಘಾನ್‌ ಪರ ಇಬ್ರಾಹಿಂ ಜದ್ರಾನ್‌ 86, ದಾರ್ವಿಶ್‌ ರಸೂಲ್‌ 63, ಇಕ್ರಮ್‌ ಅಲಿ ಖೀಲ್‌ 55 ರನ್‌ ಬಾರಿಸಿದರು. ನವೀದ್‌ ಉಲ್‌ ಹಕ್‌ 4 ವಿಕೆಟ್‌ ಹಾರಿಸಿ ಲಂಕೆಗೆ ಕಂಟಕವಾಗಿ ಪರಿಣಮಿಸಿದರು.

ನ್ಯೂಜಿಲ್ಯಾಂಡ್‌ ಬೃಹತ್‌ ಮೊತ್ತ
ಕ್ರೈಸ್ಟ್‌ಚರ್ಚ್‌:
ಕೀನ್ಯಾ ವಿರುದ್ಧ ನ್ಯೂಜಿಲ್ಯಾಂಡ್‌ 243 ರನ್ನುಗಳ ಪ್ರಚಂಡ ಜಯಭೇರಿ ಮೊಳಗಿಸಿದೆ. ಕಿವೀಸ್‌ 4 ವಿಕೆಟಿಗೆ 436 ರನ್‌ ಪೇರಿಸಿತು. ಇದು ಅಂಡರ್‌-19 ವಿಶ್ವಕಪ್‌ ಇತಿಹಾಸದ 2ನೇ ಸರ್ವಾಧಿಕ ಮೊತ್ತ. ಜವಾಬಿತ್ತ ಕೀನ್ಯಾ ಪೂರ್ತಿ 50 ಓವರ್‌ ಆಡಿ 4 ವಿಕೆಟಿಗೆ 193 ರನ್‌ ಗಳಿಸಿ ಶರಣಾಯಿತು. ನ್ಯೂಜಿಲ್ಯಾಂಡ್‌ ಪರ ಆರಂಭಿಕರಾದ ಜೇಕಬ್‌ ಭುಲ 180 ಹಾಗೂ ರಚಿನ್‌ ರವೀಂದ್ರ 117 ರನ್‌ ಹೊಡೆದರು. ನ್ಯೂಜಿಲ್ಯಾಂಡ್‌ ಎರಡೂ ಪಂದ್ಯಗಳನ್ನು ಗೆದ್ದಿದ್ದು, ನಾಕೌಟ್‌ಗೆ ಲಗ್ಗೆ ಇರಿಸಿದೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

1-weewq

Ranji; ಬಂಗಾಲ ಬಿಗಿ ಹಿಡಿತ : ಇನ್ನಿಂಗ್ಸ್‌ ಜಯದತ್ತ ಮುಂಬಯಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

1-ewewq

ODI; ಹ್ಯಾರಿಸ್‌ ರೌಫ್ ಗೆ ಹೆದರಿದ ಆಸೀಸ್‌ : 9 ವಿಕೆಟ್‌ಗಳಿಂದ ಗೆದ್ದ ಪಾಕಿಸ್ಥಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.