ದೇವಾಲಯ ಭೇಟಿಯೇ ಮೃದು ಹಿಂದುತ್ವವೇ?


Team Udayavani, Jan 18, 2018, 7:26 AM IST

18-33.jpg

ದೇವಸ್ಥಾನಗಳಿಗೆ ಭೇಟಿ ನೀಡಿದ ಕೂಡಲೇ ಅದು ಮೃದು ಹಿಂದುತ್ವ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಬೇಕಿಲ್ಲ. ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳು. ಇಲ್ಲಿ ಭಕ್ತರು ಮಾನಸಿಕ ಶಾಂತಿ ಪಡೆದುಕೊಳ್ಳುತ್ತಾರೆ. ಅದು ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸುವ ಕೇಂದ್ರವಲ್ಲ.

ದೇಶಾದ್ಯಂತ ಮತ್ತೆ ಹಿಂದುತ್ವದ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಹಿಂದೆ ಹಲವಾರು ಬಾರಿ ಈ ಕುರಿತು ಚರ್ಚೆ, ವಾದ- ವಿವಾದಗಳು ನಡೆದಿದ್ದವು. ಹಿಂದುತ್ವ ಅಥವಾ ಹಿಂದೂ ನಂಬಿಕೆಗಳು ಚರ್ಚೆಗೆ ಬಂದಾಗಲೆಲ್ಲ ಬಿಜೆಪಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಿತ್ತು. ಈ ವಿಚಾರದಲ್ಲಿ ಇತರ ಪಕ್ಷಗಳ ದೃಷ್ಟಿಯಲ್ಲಿ ಅದು ಅಪರಾಧಿ ಸ್ಥಾನ ದಲ್ಲಿ ನಿಂತದ್ದೂ ಇದೆ. ಬಿಜೆಪಿ ರಾಷ್ಟ್ರಾದ್ಯಂತ ಅಧಿಕಾರಕ್ಕೆ ಬಂದುದೇ ಧಾರ್ಮಿಕ ವಾದವನ್ನು ಮುಂದಿರಿಸಿ ಎಂಬ ಚರ್ಚೆಗಳ ನಡುವೆಯೇ ಇಂದು ಇತರ ರಾಷ್ಟ್ರೀಯ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಹಿಂದುತ್ವ ಸಿದ್ಧಾಂತವನ್ನು ಯಾವುದೇ ಮಡಿವಂತಿಕೆ ಇಲ್ಲದೆ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿರುವುದು ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ರಾಜಕೀಯ ಪಂಡಿತರ ವಿಶ್ಲೇಷಣೆಗಳು ಈ ವಿಚಾರದಲ್ಲಿ ಅಗತ್ಯವಿಲ್ಲ.

ಅಸ್ತಿತ್ವಕ್ಕಾಗಿ ಹಿಂದುತ್ವವನ್ನು ಬಳಸಿ, ಮತ್ತೆ ಮೂಲೆಗೆ ಸರಿಸಿ ಇತರ ಮತಧರ್ಮೀಯರ ಓಲೈಕೆಗೆ ಮುಂದಾಗುವುದು ಕಾಂಗ್ರೆಸ್‌ನಲ್ಲಿ ರಕ್ತಗತವಾಗಿ ಬಂದಿದೆ. ಈಗ ರಾಹುಲ್‌ ಗಾಂಧಿ ಅವರ ಹೊಸ “ಮೃದು ಹಿಂದುತ್ವ’ ಚಿಂತನೆ ದೇಶಾದ್ಯಂತ ಕಾಂಗ್ರೆಸ್‌ ನಾಯಕರಲ್ಲಿ ಒಂದು ಸಣ್ಣ ಸಂಚಲನವನ್ನು ಮೂಡಿಸಿದೆ. 2014ರಲ್ಲಿ ಕಾಂಗ್ರೆಸ್‌ ಎದುರಿಸಿದ ಹೀನಾಯ ಸೋಲು ಹಿಂದುತ್ವ ಧೋರಣೆಯನ್ನು ಈಗ ಒಪ್ಪಿಕೊಳ್ಳಲು ಕಾರಣ. ಹೀಗಾಗಿ ಇದನ್ನು “ಮೃದು ಹಿಂದುತ್ವ’ ಎನ್ನುವ ಬದಲು “ರಾಜಕೀಯಕ್ಕಾಗಿ ಹಿಂದುತ್ವ’ ಎನ್ನಬಹುದೇನೋ?
ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಬಿಜೆಪಿ ಮತ ಗಳಿಸುತ್ತಿದೆ ಎಂದು ದಶಕಗಳಿಂದ ಆಪಾದನೆ ಮಾಡುತ್ತಾ ಬಂದಿರುವ ಕಾಂಗ್ರೆಸ್‌ ಈಗ “ಮೃದು ಹಿಂದುತ್ವ’ದ ಹೆಸರಿನಲ್ಲಿ “ಧರ್ಮ ಪ್ರವೇಶ’ ಮಾಡಿರುವುದು ಒಂದು ರೀತಿಯ ಆತ್ಮ ವಂಚನೆ ಎಂದು ಒಬ್ಬ ಸಾಮಾನ್ಯ ಪ್ರಜೆಗೆ ಅನಿಸದಿರುತ್ತದೆಯೇ? ಹಾಗೆಂದು ಹಿಂದುತ್ವ ಧೋರಣೆಯನ್ನು ಯಾರೂ ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ಈ ಧೋರಣೆಯನ್ನು ಅಪ್ಪಿಕೊಳ್ಳುವ ಮತ್ತು ಅನುಸರಿಸುವ ಎಲ್ಲ ಹಕ್ಕುಗಳು ಇತರ ರಾಜಕೀಯ ಪಕ್ಷಗಳಿಗಿದೆ. ಇಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕಾದ ವಿಷಯ ವೆಂದರೆ ಹಿಂದುತ್ವ ಧೋರಣೆಯನ್ನು ಅಪ್ಪಿಕೊಳ್ಳುವುದಕ್ಕೆ ಕಾಂಗ್ರೆಸ್‌ ನೀಡುವ ಸಮರ್ಥನೆ ಏನು ಎಂಬುದು. 

ಮಾಜಿ ಪ್ರಧಾನಿ ಇಂದಿರಾ ಕಾಲದಿಂದೀಚೆಗೆ ಕಾಂಗ್ರೆಸ್‌ನ ಉನ್ನತ ನಾಯಕರು ಅಥವಾ “ಹೈಕಮಾಂಡ್‌’ ತನಗೆ ಅಗತ್ಯ ಸಂದರ್ಭ ಎದುರಾಗದಾಗಲೆಲ್ಲ ಮತ್ತು ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಉಂಟಾದಾಗಲೆಲ್ಲ ದೇವಾಲಯಗಳಿಗೆ, ಮಠ , ಮಂದಿರಗಳಿಗೆ ಭೇಟಿ ನೀಡಿ ದೇಶದ ಗಮನ ಸೆಳೆದ ಎಷ್ಟೋ ನಿದರ್ಶನಗಳಿವೆ. ಇಂದಿರಾಗಾಂಧಿ ಶೃಂಗೇರಿ ಶಾರದಾ ಪೀಠಕ್ಕೆ ಅತ್ಯಂತ ಗೌರವ ನೀಡುತ್ತಿದ್ದವರು. ಅವರು ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿವೆ. 

ಅನಂತರ ರಾಜೀವ ಗಾಂಧಿ ಅವರು ಪ್ರಧಾನಿಯಾದ ನಂತರವೂ ಇದೇ ನೀತಿ ಮುಂದುವರಿಸಿದ್ದರು. ಆದರೆ ರಾಜೀವ್‌ ಗಾಂಧಿ ಅವರು ಇಂದಿರಾ ಗಾಂಧಿ ಅವರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಯೋಧ್ಯೆಯ ಶ್ರೀರಾಮ ದೇಗುಲಕ್ಕೆ ಹಾಕಿದ ಬೀಗ ತೆಗೆಯಿಸಿ ಮಂದಿರ ನಿರ್ಮಾಣ ಹೋರಾಟ ಇನ್ನಷ್ಟು ವೇಗ ಪಡೆಯಲು ಕಾರಣರಾದರು. ದುರಂತವೆಂದರೆ ರಾಜೀವ ಗಾಂಧಿ ಅವರ ಈ ಕ್ರಮಕ್ಕೆ ಕಾಂಗ್ರೆಸ್‌ಗೆ ಒಳಗಿನಿಂದಲೇ ವಿರೋಧ ವ್ಯಕ್ತವಾಗಿತ್ತು. ಇಂದಿಗೂ ಕಾಂಗ್ರೆಸ್‌ ನಾಯಕರು ಅಯೋಧ್ಯೆ ವಿಚಾರವಾಗಿ ರಾಜೀವ್‌ ಗಾಂಧಿ ತೆಗೆದುಕೊಂಡ ದಿಟ್ಟ ಕ್ರಮದ ಕುರಿತು ಚರ್ಚಿಸಲು ಮತ್ತು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಇಷ್ಟು ಮಾತ್ರವಲ್ಲದೆ ರಾಜೀವ್‌ ಆಧುನಿಕ ವಿಜ್ಞಾನದೊಂದಿಗೆ ಋಷಿ ವಾಕ್ಯವನ್ನು ಜತೆಗೂಡಿಸಿ ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದರು. ಆದರೆ ಅವರು ತನ್ನ ಎಡಬಲದಲ್ಲಿದ್ದ ಭಟ್ಟಂಗಿಗಳು, ಆಪೆ¤àಷ್ಟರು ಮತ್ತು ಸ್ವಹಿತಾಸಕ್ತಿಯ ಸಲಹೆಗಾರರನ್ನು ನಂಬಿ ಹಗರಣ, ವಿವಾದಗಳಲ್ಲಿ ಸಿಲುಕಿ ರಾಜಕೀಯವಾಗಿ ಸೋಲು ಅನುಭವಿಸ ಬೇಕಾಯಿತು. ರಾಜೀವ್‌ ಗಾಂಧಿ ಕೂಡ ಶೃಂಗೇರಿ ಜಗದ್ಗುರು ಪೀಠವನ್ನು ಬಹಳ ಗೌರವದಿಂದ ಕಾಣುತ್ತಿದ್ದವರು. ಗಮನಿಸಬೇಕಾದ ಅಂಶವೆಂದರೆ, ಇವರಿಬ್ಬರೂ ಹೊರಜಗತ್ತಿಗೆ ತಿಳಿಯದಂತೆ (ವೈಯಕ್ತಿಕ ನೆಲೆಯಲ್ಲಿ) ಧರ್ಮ ಹಾಗೂ ಧರ್ಮ ಕೇಂದ್ರಗಳು ದೇಶದ ಆತ್ಮಸಾಕ್ಷಿ, ದೇಶದ ಪ್ರಜ್ಞೆ ಎಂದು ಗೌರವಿಸುತ್ತಿದ್ದವರು.

ಯಾಕೆ ಈ ಗತಕಾಲದ ನೆನಪು?
ರಾಜೀವ ಗಾಂಧಿ ಅವರ ಮರಣ ಸಂಭವಿಸಿ ಸುಮಾರು 27 ವರ್ಷಗಳು ಸಂದವು. ಪಕ್ಷ ತನ್ನ ಹಿರೀಕರು ಹಾಕಿಕೊಟ್ಟ ದೇಶದ ಆತ್ಮಸಾಕ್ಷಿ ಮತ್ತು ದೇಶದ ಪ್ರಜ್ಞೆಯನ್ನು ಬದಿಗೆ ಸರಿಸಿ ಓಲೈಕೆಯ ರಾಜಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಕೈ ಹಾಕಿ ಬಹಳ ಕಾಲವಾಗಿದೆ. ಅದರಿಂದ ಆರಂಭದ ಹಂತದಲ್ಲಿ ಆ ಪಕ್ಷಕ್ಕೆ ಬಹಳವಾಗಿ ಲಾಭವೇ ಆಯಿತು. ಆದರೆ ಓಲೈಕೆಯ ರಾಜಕಾರಣ ಹೆಚ್ಚು ಕಾಲ ನಡೆಯುವುದಿಲ್ಲ ಮತ್ತು ಇದು ರಾಜಕೀಯದಲ್ಲಿನ ಬಹು ದೊಡ್ಡ ಮೋಸ ಮತ್ತು ವಂಚನೆ ಎಂಬುದು ಓಲೈಕೆಗೊಳಗಾದವರಿಗೂ ಈಗ ಮನವರಿಕೆಯಾಗಿದೆ. ಜತೆಗೆ ಈ ಓಲೈಕೆ ರಾಜಕಾರಣದಿಂದ ತೊಂದರೆಗೊಳಗಾದವರೂ ಆ ಪಕ್ಷದಿಂದ ನಿರ್ದಯವಾಗಿ ಹೊರ ಬಂದಿದ್ದಾರೆ ಮತ್ತು ಈ ಪ್ರಕ್ರಿಯೆ ಮುಂದುವರಿಯುತ್ತಲೂ ಇದೆ. ಇದರ ಪರಿಣಾಮ 2014ರ ಮಹಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಂಡುಬಂತು. ಪಕ್ಷದ ನಾಯಕತ್ವ ರಚಿಸಿದ್ದ ಸಲಹಾ ಸಮಿತಿ ಕೂಡ ಓಲೈಕೆ ರಾಜಕಾರಣವನ್ನು ಕೈಬಿಡುವ ಪರೋಕ್ಷ ಸಲಹೆಯನ್ನು ನೀಡಿತು ಮಾತ್ರವಲ್ಲದೆ, ಪಕ್ಷ ಮತ್ತೆ ಹಿಂದುತ್ವ ಧೋರಣೆಯನ್ನು ಅನುಸರಿಸಬೇಕೆಂಬ ಸೂಚನೆಯನ್ನೂ ನೀಡಿತು.

ಇದಾದ ಅನಂತರವೇ ಮೃದು ಹಿಂದುತ್ವವನ್ನು ಅನುಸರಿಸ ಬೇಕೆಂದು ಕಾಂಗ್ರೆಸ್‌ ನಾಯಕತ್ವ ಫ‌ರ್ಮಾನು ಹೊರಡಿಸಿದ್ದು. ರಾಹುಲ್‌ ಗಾಂಧಿ ಅವರು ಗುಜರಾತ್‌ ಚುನಾವಣೆ ವೇಳೆ ದೇವಾಲಯ ಭೇಟಿ ಆಂದೋಲನವನ್ನೇ ಮಾಡಿದರು. ಅದರಿಂದ ಲಾಭ ಎಷ್ಟಾಯಿತೋ ಗೊತ್ತಿಲ್ಲ. ಗುಜರಾತಿನ ಆಂತರಿಕ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಲಭಿಸಿದವು. ಈ ರಾಜಕೀಯ ಗೆಲುವಿನಿಂದ ಪ್ರೇರಿತರಾಗಿ ಮುಂದಿನ ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ ದೇವಾಲಯಗಳ ಭೇಟಿ ಕಾರ್ಯಕ್ರಮವನ್ನು ರಾಹುಲ್‌ ಗಾಂಧಿ ಈಗಾಗಲೇ ಆರಂಭಿಸಿದ್ದಾರೆ. ಇಲ್ಲಿ ನಮ್ಮ ಮುಂದಿರುವ ಪ್ರಶ್ನೆ ದೇವಾಲಯಗಳಿಗೆ ಭೇಟಿ ನೀಡುವುದು ಮಾತ್ರ ಮೃದು ಹಿಂದುತ್ವವೇ ಎಂಬುದು. ರಾಜಕೀಯ ನಾಯಕರು ಹಿಂದುತ್ವದ (ಮೃದು ಹಿಂದುತ್ವ, ಕಠಿನ ಹಿಂದುತ್ವ – ಯಾವುದೇ ಇರಲಿ) ಹೆಸರಿನಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಮತದಾರರನ್ನು ಓಲೈಸಬಹುದು ಎಂದು ತಿಳಿದಿದ್ದರೆ ಅದು ಮೂರ್ಖತನದ ಪರಮಾವಧಿಯೇ ಸರಿ. ದೇವಾಲಯದಿಂದ ಹೊರಬಂದು ಹಿಂದುತ್ವದ ಧೋರಣೆಯನ್ನು ಅನುಸರಿಸಲಿ. ಆದರೆ ಓಲೈಕೆಯ ರಾಜಕಾರಣಕ್ಕೆ ಕೊನೆಹಾಡುವ ಧೈರ್ಯ ಕಾಂಗ್ರೆಸ್‌ಗೆ ಇದೆಯೇ ಎಂಬುದು ಪ್ರಶ್ನೆ.

ದೇವಾಲಯಗಳಿಗೆ ಭೇಟಿ ನೀಡುವುದು, ಶತ್ರು ಪರಾಜಯ ಹೋಮ ಮಾಡಿಸುವುದು, “ನಮ್ಮವರು’ ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಉತ್ತರ ಕರ್ನಾಟಕದ ಯಾವುದೋ ದೇವಾಲ ಯದಲ್ಲಿ ತೆಂಗಿನಕಾಯಿ ಕಟ್ಟಿ ಬರುವುದು, ನಾಡದೇವತೆಗೆ ಸೀರೆ ಸಮರ್ಪಿಸುವುದು, ಜ್ಯೋತಿಷ್ಯರು ಸಲಹೆ ನೀಡಿದರೆಂದು ರಾಜ್ಯದ ಇನ್ನಾವುದೋ ದೇವಸ್ಥಾನದಲ್ಲಿ ಚಂಡಿಕಾಹೋಮ ಮಾಡಿಸುವುದು, ದೇಶದ ಖಜಾನೆಗೆ ಕನ್ನ ಹಾಕಿ ಕೋಟಿಗಟ್ಟಲೆ ಹಣವನ್ನು ಜೇಬಿಗಿಳಿಸಿದ ಪ್ರಕರಣಗಳನ್ನು ಮುಚ್ಚಿ ಹಾಕುವಂತೆ ಹರಕೆ ಹೊತ್ತು ಯಾವುದೋ ದೇವಸ್ಥಾನಗಳಲ್ಲಿ 42-48 ದಿನ ಪೂಜೆ ಮಾಡಿಸುವುದು ಇವುಗಳೆಲ್ಲ ಮೃದು ಹಿಂದುತ್ವ ಧೋರಣೆಯಲ್ಲ. ಇವೆಲ್ಲ ವೈಯಕ್ತಿಕ ಹಿತಾಸಕ್ತಿಯ ಧೋರಣೆಗಳು. ಇಲ್ಲಿ ದೇಶ ಅಥವಾ ಪಕ್ಷಕ್ಕಿಂತ ವೈಯಕ್ತಿಕ ಗುರಿಸಾಧನೆಯೇ ಮುಖ್ಯವಾಗು ತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಿದ ಕೂಡಲೇ ಅದು ಮೃದು ಹಿಂದುತ್ವ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಬೇಕಿಲ್ಲ. ದೇವಸ್ಥಾನಗಳು ಶ್ರದ್ಧಾ ಕೇಂದ್ರಗಳು. ಇಲ್ಲಿ ಭಕ್ತರು ತಮ್ಮ ನೋವು ನಲಿವನ್ನು ದೇವರೊಂದಿಗೆ ಹಂಚಿಕೊಳ್ಳುತ್ತಾರೆ, ಮಾನಸಿಕ ಶಾಂತಿ ಪಡೆದುಕೊಳ್ಳುತ್ತಾರೆ. ಅದು ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸುವ ಕೇಂದ್ರವಲ್ಲ. ಮೋಸ-ವಂಚನೆಗಳನ್ನು ಮುಚ್ಚಿಹಾಕುವುದಕ್ಕಾಗಿ ಇರುವ ಕೇಂದ್ರವೂ ಅಲ್ಲ.

ಎ.ವಿ.ಬಾಲಕೃಷ್ಣ

ಟಾಪ್ ನ್ಯೂಸ್

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

MM-Singh-Sonia

Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್‌ ಸಿಂಗ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.