ಖಾಸಗಿ ಐಟಿಐಗಳಿಗೆ ಸರಕಾರ ವೇತನಾನುದಾನ ನೀಡಲು ಮನವಿ
Team Udayavani, Jan 18, 2018, 4:42 PM IST
ಬಂಟ್ವಾಳ: ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘ ಹುಬ್ಬಳ್ಳಿ ಇದರ ದ.ಕ. ಜಿಲ್ಲಾ ಘಟಕವು, ಸಂಯೋಜನೆ
ಪಡೆದು 7 ವರ್ಷ ಪೂರೈಸಿರುವ ಖಾಸಗಿ ಐಟಿಐಗಳಿಗೆ ಸರಕಾರ ವೇತನಾನುದಾನ ನೀಡುವ ಕುರಿತಾಗಿ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಈ ಬಗ್ಗೆ ಗಮನಹರಿಸಿ, ಮುಖ್ಯ ಮಂತ್ರಿಗಳಿಗೆ ಕೂಡಲೇ ಮಾಹಿತಿ ನೀಡುವುದಾಗಿ ತಿಳಿಸಿದರು.
ಮನವಿ ಸಲ್ಲಿಸಿದ ದ.ಕ. ಜಿಲ್ಲಾ ಖಾಸಗಿ ಐಟಿಐಗಳ ಪ್ರತಿನಿಧಿ ಹಾಗೂ ರಾಜ್ಯ ಸಂಘದ ಕಾರ್ಯದರ್ಶಿ ತುಂಬೆ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನವೀನ್ ಕುಮಾರ್ ಕೆ.ಎಸ್. ಖಾಸಗಿ ಐಟಿಐಗಳಿಗೆ ಅನುದಾನ ನೀಡುವ ಕೋರಿಕೆಯ ಬಗ್ಗೆ ಮಾಹಿತಿ ನೀಡಿದರು.
ಸುಳ್ಯ ನಿಂತಿಕಲ್ ಎಸ್ಪಿಪಿ ಐಟಿಐ ನ ಪ್ರಾಚಾರ್ಯ ಪ್ರಾಣೇಶ್ ಕುಮಾರ್ ಭಕ್ತ ಹಾಗೂ ಜಿಲ್ಲೆಯ ಇತರ ಖಾಸಗಿ ಅನುದಾನ
ರಹಿತ ಐಟಿಐಗಳ ಅನೇಕ ಕಿರಿಯ ತರಬೇತಿ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.