ಉಡುಪಿ ಶ್ರೀಕೃಷ್ಣಮಠದಲ್ಲಿ ಪಲಿಮಾರು ಶ್ರೀಗಳ ಪರ್ವ
Team Udayavani, Jan 19, 2018, 6:00 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳ ಪರ್ಯಾಯ ವ್ಯವಸ್ಥೆಯಲ್ಲಿ 32ನೇ ಪರ್ಯಾಯ ಚಕ್ರ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ಆರಂಭಗೊಂಡಿದೆ. 1522ರಲ್ಲಿ ಆರಂಭಗೊಂಡ ಈ ವ್ಯವಸ್ಥೆಯಲ್ಲಿ 249ನೇ ಪರ್ಯಾಯೋತ್ಸವದ ಶ್ರೀಕೃಷ್ಣ ಮಠದ ಪೂಜಾಧಿಕಾರವನ್ನು ಐದನೇ ಬಾರಿಗೆ ಪರ್ಯಾಯ ಪೀಠವನ್ನು ಅಲಂಕರಿಸಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಗುರುವಾರ ಮುಂಜಾನೆ ವಹಿಸಿಕೊಂಡರು.
ನಿಗದಿತ ವೇಳೆಗಿಂತ ಸ್ವಲ್ಪ ತಡವಾಗಿ ಜೋಡುಕಟ್ಟೆಯಿಂದ ಮೆರವಣಿಗೆ ಹೊರಟು ನಿಗದಿತ ಸಮಯಕ್ಕೆ ಸರಿಯಾಗಿ ಸರ್ವಜ್ಞ ಪೀಠಾರೋಹಣ ಮಾಡಿದರು. ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನ, ಶ್ರೀಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದರು. ಪೂಜಾಧಿಕಾರದ ಸಂಕೇತವಾಗಿ ಅಕ್ಷಯ ಪಾತ್ರೆ, ಸೌಟು, ಕೀಲಿ ಕೈಗಳನ್ನು ಪೇಜಾವರ ಶ್ರೀಗಳಿಂದ ಸ್ವೀಕರಿಸಿದ ಪಲಿಮಾರು ಶ್ರೀಗಳು ಬಳಿಕ ಬಡಗುಮಾಳಿಗೆಯಲ್ಲಿ ಗಂಧಾದಿ ಉಪಚಾರಗಳನ್ನು ಇತರ ಸ್ವಾಮೀಜಿಯವರಿಗೆ ಸಲ್ಲಿಸಿದರು.
“”ಪ್ರತಿಯೊಬ್ಬರಲ್ಲೂ ಭಗವಂತನ ಅನುಸಂಧಾನವಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಗಳನ್ನು ಪರ್ಯಾಯೋತ್ಸವಕ್ಕಾಗಿ ನೀಡಿದ್ದಾರೆ” ಎಂದು ಪಲಿಮಾರು ಶ್ರೀಗಳು ತಿಳಿಸಿದರು.
ಪೇಜಾವರರಿಗೆ “ಯತಿಕುಲತಿಲಕ’ ಬಿರುದು:
ಪೇಜಾವರ ಶ್ರೀಗಳು ಐದನೆಯ ಬಾರಿಗೆ ಪರ್ಯಾಯ ಪೂಜೆ ಮಾಡಿದ ಹಿನ್ನೆಲೆಯಲ್ಲಿ ಪಲಿಮಾರು ಶ್ರೀಗಳು “ಯತಿಕುಲತಿಲಕ’ ಬಿರುದು ನೀಡಿ ಅಭಿನಂದಿಸಿದರು. ಪೇಜಾವರ ಶ್ರೀಗಳಲ್ಲಿ ಭಗವಂತ, ಪ್ರಾಣದೇವರು, ಆಚಾರ್ಯ ಮಧ್ವರ ವಿಶೇಷ ಸನ್ನಿಧಾನವಿದೆ ಎಂದು ಪಲಿಮಾರು ಶ್ರೀಗಳು ಬಣ್ಣಿಸಿದರು.
“”ಆಚಾರ್ಯ ಮಧ್ವರು ಹೇಗಿದ್ದರೆಂದು ನೋಡಲು ಸಾಧ್ಯವಿಲ್ಲ. ಅವರನ್ನು ನೋಡಬೇಕೆನಿಸಿದರೆ ಈಗ ನಾವು ನೋಡಲು ಸಾಧ್ಯವಿರುವುದು ಪೇಜಾವರ ಶ್ರೀಗಳನ್ನು. ಪೇಜಾವರ ಶ್ರೀಗಳ ತೇಜಸ್ಸು ಅಂಥದ್ದು” ಎಂದು ಅದಮಾರು ಮಠದ ಕಿರಿಯ ಶ್ರೀಗಳು ತಿಳಿಸಿದರು. ಪಲಿಮಾರು ಶ್ರೀಗಳ ತುಳಸಿ ಅರ್ಚನೆ ಯೋಜನೆಗೆ ಎಲ್ಲರೂ ಕೈಲಾದಷ್ಟು ಸಹಕಾರ ನೀಡಬಹುದು ಎಂದರು.
ಚಿನ್ನದ ಗೋಪುರಕ್ಕೆ ನಿರ್ಧಾರ:
ತಿರುಪತಿ ಕಾಂಚನ ಬ್ರಹ್ಮ, ಪಂಢರಪುರ ನಾದಬ್ರಹ್ಮ, ಉಡುಪಿ ಅನ್ನಬ್ರಹ್ಮ ಎಂದು ಕರೆಯುತ್ತಾರೆ. ತಿರುಪತಿಯ ಚಿನ್ನದ ಗೋಪುರದಂತೆ ಉಡುಪಿಯಲ್ಲಿಯೂ ಚಿನ್ನದ ಗೋಪುರ ಮಾಡಲು ಪಲಿಮಾರು ಶ್ರೀಗಳು ನಿರ್ಧರಿಸಿದ್ದಾರೆ. ಪಂಢರಪುರದಂತೆ ನಿರಂತರ ಭಜನೆಯನ್ನೂ ಕೈಗೆತ್ತಿಕೊಂಡಿದ್ದಾರೆ. ಇವು ಮೂರೂ ಒಂದೆಡೆ ಸಮ್ಮಿಲನಗೊಳ್ಳಲಿವೆ ಎಂದು ಶ್ರೀ ಸೋದೆ ಸ್ವಾಮೀಜಿ ತಿಳಿಸಿದರು.
ಪೇಜಾವರ ಶ್ರೀಗಳು ಐದನೇ ಪರ್ಯಾಯದಿಂದ ನಿರ್ಗಮಿಸುವ ಬೇಸರ, ಪಲಿಮಾರು ಶ್ರೀಗಳು ಪರ್ಯಾಯ ಪೀಠಕ್ಕೇರುವ ಸಂತೋಷದ ಸಮಾಗಮದಲ್ಲಿ ನಾವಿದ್ದೇವೆ ಎಂದು ಶ್ರೀ ಕಾಣಿಯೂರು ಸ್ವಾಮೀಜಿ ತಿಳಿಸಿದರು.
ಎಲ್ಲ ಧರ್ಮಕ್ಕಿಂತಲೂ ಪುಂಡರೀಕಾಕ್ಷನನ್ನು ಸ್ತೋತ್ರದೊಂದಿಗೆ ಅರ್ಚಿಸುವುದೇ ಶ್ರೇಷ್ಠ ಎಂದು ಭೀಷ್ಮರು ವಿಷ್ಣುಸಹಸ್ರನಾಮ ಉಪದೇಶ ಮಾಡಿದರು. ಪಲಿಮಾರು ಶ್ರೀಗಳು ವಿಷ್ಣುಸಹಸ್ರನಾಮದಿಂದ ಅರ್ಚಿಸಲು ನಿರ್ಧರಿಸಿದ್ದಾರೆಂದು ಪೇಜಾವರ ಕಿರಿಯ ಶ್ರೀಗಳು ಹೇಳಿದರು.
ಭಗವಂತ ವಿವಿಧ ಅವತಾರಗಳನ್ನು ತಳೆದಿದ್ದಾನೆ. ವಾಮನರೂಪಿಯಾದ ಪೇಜಾವರ ಶ್ರೀಗಳ ಪರ್ಯಾಯ ಮುಗಿದರೆ ಈಗ ತ್ರಿವಿಕ್ರಮರೂಪಿ ಪಲಿಮಾರು ಶ್ರೀಗಳ ಪರ್ಯಾಯ ಆರಂಭವಾಗಿದೆ ಎಂದು ಶೀರೂರು ಸ್ವಾಮೀಜಿ ಬಣ್ಣಿಸಿದರು. ನಮ್ಮ ಬಯಕೆಯನ್ನೇ ಭಗವಂತ ಪೇಜಾವರ ಶ್ರೀಗಳ ಮೂಲಕ ಪೂಜೆ ಮಾಡಿಸಿಕೊಂಡ ಎಂದು ಕೃಷ್ಣಾಪುರ ಶ್ರೀಗಳು ಹೇಳಿದರು.
ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಕಾರ್ಯಕ್ರಮ ನಿರ್ವಹಿಸಿದರು.
ಯಶೋದೆಗೆ ಕೃಷ್ಣನ ಮೇಲೆ ಪ್ರೇಮವಿತ್ತು. ಜ್ಞಾನವೂ ಇರಲಿಲ್ಲ, ವೈರಾಗ್ಯವೂ ಇರಲಿಲ್ಲ. ಹೀಗಾಗಿ ಕೃಷ್ಣನನ್ನು ಕಟ್ಟುವಾಗ ಹಗ್ಗ ಎರಡು ಅಂಗುಲ ಕಡಿಮೆಯಾಯಿತು. ವಾದಿರಾಜರು ಇದನ್ನು “ನಮಗೂ ಜ್ಞಾನ, ಭಕ್ತಿ, ವೈರಾಗ್ಯವಿದೆ. ಆದರೆ ಅದಲು ಬದಲು ಆಗಿದೆ. ದ್ರವ್ಯ ಸಂಪಾದನೆಯಲ್ಲಿ ಜ್ಞಾನ, ಸಂಸಾರದಲ್ಲಿ ಭಕ್ತಿ, ದೇವರಲ್ಲಿ ವೈರಾಗ್ಯವಿದೆ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಪ್ರಪಂಚದ ಮೇಲೆ ವೈರಾಗ್ಯ, ದೇವರಲ್ಲಿ ಭಕ್ತಿ ಮತ್ತು ಜ್ಞಾನ ಇರಬೇಕು.
– ಪೇಜಾವರ ಶ್ರೀಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.