ಹಫೀಜ್ ಸಹಿತ 12 ಉಗ್ರರ ವಿರುದ್ಧ ದೇಶದ್ರೋಹ ಕೆೇಸ್
Team Udayavani, Jan 19, 2018, 8:32 AM IST
ಹೊಸದಿಲ್ಲಿ: ಲಷ್ಕರ್-ಎ-ತಯ್ನಾಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಹಿಜ್ಬುಲ್ ಮುಜಾ ಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಸಹಿತ 12 ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಇವರು ಉಗ್ರ ಚಟುವಟಿಕೆಗಳನ್ನು ನಡೆಸಿದ್ದಾಗಿ ಹೇಳಿದ್ದು, ದೇಶದ್ರೋಹ ಪ್ರಕರಣವನ್ನೂ ದಾಖಲಿಸಿದೆ.
ಎನ್‌ಐಎ 12,794 ಪುಟಗಳ ಸುದೀರ್ಘ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸುವಿಕೆ ಕುರಿತಂತೆ ತನಿಖೆಯನ್ನು ಮುಂದುವರಿಸಲು ಅನುಮತಿ ಕೋರಿದೆ. 12 ಉಗ್ರರ ವಿರುದ್ಧ ದೇಶದ್ರೋಹ, ಅಪರಾಧ ಚಟುವಟಿಕೆಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ನಡೆಸಿರುವ ಆರೋಪ ಮಾಡಿದೆ. ತನಿಖೆ ವೇಳೆ ಸಾಕಷ್ಟು ಗುರುತರ ಸಾಕ್ಷ್ಯಗಳು ಲಭ್ಯವಾಗಿವೆ. 60 ಕಡೆಗಳಲ್ಲಿ ದಾಳಿ ಮಾಡಿ, 950 ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ 300 ಸಾಕ್ಷಿಗಳಿದ್ದಾರೆ ಎಂದು ವರದಿಯಲ್ಲಿ ಎನ್‌ಐಎ ವಿವರಿಸಿದೆ.
ಪ್ರತ್ಯೇಕತಾವಾದಿಗಳಿಗೂ ಕಾದಿದೆ ಆತಂಕ: ಕೇವಲ ಪಾಕಿಸ್ಥಾನದಲ್ಲಿ ಅಡಗಿರುವ ಉಗ್ರರನ್ನು ಮಾತ್ರವಲ್ಲ, ಕಾಶ್ಮೀರದಲ್ಲಿನ ಪ್ರತ್ಯೇಕ ತಾವಾದಿಗಳನ್ನೂ ಎನ್‌ಐಎ ಉಲ್ಲೇ ಖೀಸಿದ್ದು, ಇವರ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದೆ. ಸೈಯದ್ ಅಲಿ ಶಾ ಗೀಲಾನಿ, ಬಶೀರ್ ಅಹಮದ್ ಭಟ್, ಉದ್ಯಮಿ ಝಹೂರ್ ಅಹಮದ್ ಶಾ ವತಾಲಿ ಮತ್ತು ಫೋಟೋ ಜರ್ನಲಿಸ್ಟ್ ಕಮ್ರನ್ ಯೂಸುಫ್ ವಿರುದ್ಧವೂ ಚಾರ್ಜ್ ಶೀಟ್ ದಾಖಲಿಸಿದೆ. ಈ ಹಿಂದೆ ಕಲ್ಲು ಎಸೆತದ ಪ್ರಕರಣದಲ್ಲಿ ಜಾವೇದ್ ಅಹಮದ್ ಭಟ್ ಜತೆಗೆ ಯೂಸುಫ್ ಕೂಡ ಕಾಣಿಸಿ ಕೊಂಡಿದ್ದರು. ಹುರಿಯತ್ ಮುಖಂಡರು ಹಫೀಜ್ ಮತ್ತು ಸಲಾಹುದ್ದೀನ್ ಮಾರ್ಗ ದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿ ದ್ದಾರೆ ಎಂದು ವಿವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್
Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ
MAHE Convocation: ಕ್ಲಿಕ್ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್ ಭಟ್ಟಾಚಾರ್ಯ ಸಲಹೆ
Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್ ಶಾ
GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.