ನಾಲ್ವರು ನ್ಯಾಯಮೂರ್ತಿಗಳ ಜತೆ ಸಿಜೆಐ ಮಿಶ್ರಾ ಮಾತುಕತೆ
Team Udayavani, Jan 19, 2018, 9:03 AM IST
ಹೊಸದಿಲ್ಲಿ: ಕಳೆದ ಶುಕ್ರವಾರ ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿ ಅತೃಪ್ತಿ ವ್ಯಕ್ತಪಡಿಸಿದ್ದ ನಾಲ್ವರು ನ್ಯಾಯಮೂರ್ತಿಗಳ ಜತೆ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮಾತುಕತೆ ನಡೆಸಿದ್ದಾರೆ. ಗುರುವಾರ ಕೋರ್ಟ್ ಕಲಾಪಗಳು ಆರಂಭವಾಗುವ ಮುನ್ನ 15 ನಿಮಿಷ ಐವರು ಮಾತುಕತೆ ನಡೆಸಿದರು. ಅವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಬುಧವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾ.ಜೆ.ಚಲಮೇಶ್ವರ್ ಕರ್ತವ್ಯಕ್ಕೆ ಹಾಜರಾಗದ್ದರಿಂದ ಭೇಟಿ ನಡೆದಿರಲಿಲ್ಲ.
ಮತ್ತೂಂದು ಬೆಳವಣಿಗೆಯಲ್ಲಿ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿದ ಬಳಿಕದ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ರೀತಿ ಸುದ್ದಿ, ವಿಶ್ಲೇಷಣೆ, ಚರ್ಚೆ ಪ್ರಕಟಿಸಲು ಅನುಮತಿ ನೀಡಬಾರದು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಮನವಿ ಬಂದಾಗ, ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅರ್ಜಿಯನ್ನು ಸ್ವೀಕರಿಸಿ, ವಿಚಾರಣೆಗೆ ದಿನ ನಿಗದಿ ಮಾಡಿದಾಗ ಮಾತ್ರ ಅದನ್ನು ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.