ಶ್ರದ್ಧಾಭಕ್ತಿ, ದೃಢ ನಂಬಿಕೆ, ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ಲಭ್ಯ
Team Udayavani, Jan 19, 2018, 10:12 AM IST
ಉಡುಪಿ: ವ್ಯಕ್ತಿ ಪ್ರಗತಿ ಸಾಧಿಸಿದ್ದಾನೆ ಎಂದರೆ ಆತನು ದೇವರ ಮೇಲೆ ಶ್ರದ್ಧಾಭಕ್ತಿ, ದೃಢ ನಂಬಿಕೆ ಮತ್ತು ಆತ್ಮವಿಶ್ವಾಸಗಳಿಂದ ಕಠಿನ ಪರಿಶ್ರಮದ ಮೂಲಕ ಕಾರ್ಯಪ್ರವೃತ್ತನಾಗಿದ್ದಾನೆ ಎಂದೇ ಅರ್ಥ. ಇದರಿಂದ ಯಶಸ್ಸು ಲಭಿಸಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಹೃದಯ ಭಾಗದಲ್ಲಿರುವ ಕಿದಿಯೂರು ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಿಸಲಾದ “ಕಿದಿಯೂರು ಹೆರಿಟೇಜ್ ಆಯುರ್ವೇದಿಕ್ ಹೆಲ್ತ್‌ಕೇರ್ ಮತ್ತು ಸ್ಪಾ’ ಇದನ್ನು ಅವರು ಗುರುವಾರ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆಯಿಂದ ಕಾಯಿಲೆ ಬಾರದು ಆಯುರ್ವೇದ ಚಿಕಿತ್ಸೆಗೆ ಮೊರೆ ಹೋದರೆ ಕಾಯಿಲೆ ಬರುವುದಿಲ್ಲ. ಗ್ರಾಹಕರ ಸೇವೆಗೆ ಸಿದ್ಧಗೊಂಡ ಸ್ಪಾದ ಮೂಲಕ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು. ಈ ನೂತನ ಉದ್ಯಮವು ಯಶಸ್ಸು ಪಡೆಯಲಿ ಎಂದು ಆಶೀರ್ವಚನ ನೀಡಿದರು.
ಮಾಂಡವಿ ಡೆವಲಪರ್ನ ಜೆರ್ರಿ ವಿನ್ಸೆಂಟ್ ಡಯಾಸ್ ಶುಭ ಹಾರೈಸಿದರು. ಡಾ| ಮಹಮ್ಮದ್ ರಫೀಕ್, ಹೊಟೇಲ್ ಉದ್ಯಮಿಗಳಾದ ರಾಮಣ್ಣ ಶೇರಿಗಾರ್, ವಾಸುದೇವ ಆಚಾರ್ಯ, ಹೀರಾ ಕಿದಿಯೂರು, ಡಾ| ಯಜ್ಞೆಶ್ ಕಿದಿ ಯೂರು, ಜಿತೇಶ್ ಕಿದಿಯೂರು ಮತ್ತು ಕುಟುಂಬಸ್ಥರು, ಗಣ್ಯರು, ಹಿತೈಷಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಸಮ್ಮಾನ
ಇದೇ ಸಂದರ್ಭ ಶ್ರೀಪಾದರು ಕಿದಿಯೂರು ಹೊಟೇಲ್ ನಾಗಬನದಲ್ಲಿ ಪೂಜೆ ಸಲ್ಲಿಸಿದರು. ಕಿದಿಯೂರು ಹೊಟೇಲ್ ಎಂಡಿ ಭುವನೇಂದ್ರ ಕಿದಿಯೂರು ಮತ್ತು ಕುಟುಂಬ ಸದಸ್ಯರು ಶ್ರೀಪಾದರ ಪಾದಪೂಜೆ ನೆರವೇರಿಸಿ ಸಮ್ಮಾನಿಸಿದರು. ಜೆರ್ರಿ ವಿನ್ಸೆಂಟ್ ಡಯಾಸ್, ಮಹಮ್ಮದ್ ರಫೀಕ್ ಅವರನ್ನು ಗೌರವಿಸಲಾಯಿತು. ಕಬಿಯಾಡಿ ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪೇಜಾವರ ಶ್ರೀ ಆಶೀರ್ವಾದ
31 ವರ್ಷಗಳ ಹಿಂದೆ ಪೇಜಾವರ ಶ್ರೀಗಳ ಆಶೀರ್ವಾದದಿಂದಲೇ ಉದ್ಘಾಟಿಸಲ್ಪಟ್ಟ ಈ ಸಂಸ್ಥೆ ಇದೀಗ ಅಭಿವೃದ್ಧಿಯತ್ತ ಸಾಗುತ್ತಿದೆ. ನನ್ನ ಉದ್ಯಮದ ಯಶಸ್ಸಿನ ಹಿಂದೆ ಶ್ರೀಪಾದರ ಅನುಗ್ರಹ ಸದಾ ಇರುವುದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಪ್ರಸಿದ್ಧ ತಜ್ಞ ಡಾ| ಮಹಮ್ಮದ್ ರಫೀಕ್ ಅವರ ಮಾರ್ಗದರ್ಶನದಲ್ಲಿ ನುರಿತ ಅನುಭವಿ ಆಯುರ್ವೇದ ತಜ್ಞರಾದ ಡಾ| ಸುಹಾನ ಎಸ್. ರೈ ಅವರು ಸೇವೆಗೆ ಲಭ್ಯವಿರುತ್ತಾರೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಥೆರಪಿ ನಡೆಸಲಾಗುವುದು ಎಂದು ಕಿದಿಯೂರು ಹೊಟೇಲ್‌ಎಂಡಿ ಭುವನೇಂದ್ರ ಕಿದಿಯೂರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.