ಐವರು ಹಂಚಿಕೊಳ್ತೇವೆ ಬರ್ತೀಯಾ ಎಂದಿದ್ದ ನಿರ್ಮಾಪಕ !
Team Udayavani, Jan 19, 2018, 10:38 AM IST
ಹೈದರಾಬಾದ್ : ನಾನು 18 ವರ್ಷದವಳಿದ್ದಾಗ ಕನ್ನಡದ ನಿರ್ಮಾಪಕನೊಬ್ಬ ಇತರ ನಾಲ್ವರೊಂದಿಗೆ ನಿನ್ನನ್ನು ಹಂಚಿಕೊಳ್ತೇನೆ ಬರ್ತೀಯಾ ಎಂದು ಕರೆದಿದ್ದ ಎಂದು ನಟಿ ಶೃತಿ ಹರಹರನ್ ಹೇಳಿಕೊಂಡಿದ್ದಾರೆ.
ಇಂಡಿಯಾ ಟುಡೇ ವಾಹಿನಿ ದಕ್ಷಿಣ ಭಾರತದ ನಟಿಯರಿಗಾಗಿ ನಡೆಸಿದ ”ಸೆಕ್ಸಿಸಂ ಇನ್ ಸಿನಿಮಾ” ಮಾತುಕತೆಯಲ್ಲಿ ನಟಿ ಶೃತಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ.
‘ನನಗೆ 18 ವರ್ಷವಿದ್ದಾಗ ಮೊದಲ ಕನ್ನಡ ಚಿತ್ರ ಮಾಡುತ್ತಿದ್ದ ಕಾಲದಲ್ಲಿ ತಮಿಳಿನ ನಿರ್ಮಾಪಕನೊಬ್ಬ ನನಗೆ ಅವಕಾಶ ನೀಡಲು ಮುಂದಾಗಿ ನಾವು ಐದು ಮಂದಿ ಇದ್ದೇವೆ, ನಮಗೆ ಬೇಕಾದಾಗೆಲ್ಲ ನಿನ್ನನ್ನು ಬಳಿಸಿಕೊಳ್ಳುತ್ತೇವೆ ಎಂದಿದ್ದ. ಅದಕ್ಕೆ ನಾನು, ನನ್ನ ಕಾಲಿನಲ್ಲಿರುವ ಚಪ್ಪಲಿ ಕೈಗೆ ಬರುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದೆ ಎಂದರು.
‘ನಾನು ನಡೆದ ವಿಚಾರವನ್ನು ನನ್ನ ನೃತ್ಯ ನಿರ್ದೇಶಕರ ಬಳಿ ಹೇಳಿಕೊಂಡಿದ್ದೆ, ಅದಕ್ಕವರು ನಿನಗೆ ಈ ವಿಚಾರ ನಿಭಾಯಿಸಲು ಸಾಧ್ಯವಾಗದಿದ್ದರೆ ಅವಕಾಶವನ್ನು ಬಿಟ್ಟುಬಿಡು ಎಂದಿದ್ದರು’ ಎಂದು ಹೇಳಿದರು.
‘ಘಟನೆಯ ಬಳಿಕ ನನಗೆ ತಮಿಳಿನಿಂದ ಮತ್ತು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದ ಉತ್ತಮ ಅವಕಾಶಗಳು ಕಡಿಮೆಯಾದವು. ಅದರ ಪರಿಣಾಮವನ್ನು ನಾನು ಅನುಭವಿಸಬೇಕಾಯಿತು’ ಎಂದರು.
28 ರ ಹರೆಯದ ಶೃತಿ ಕೇರಳದ ಪಾಲ್ಘಾಟ್ನ ತಮಿಳು ಕುಟುಂಬದಲ್ಲಿ ಜನಿಸಿದ್ದರು. ಮಲಾಯಾಳಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಲೂಸಿಯಾ ಅವರ ಮೊದಲ ಕನ್ನಡ ಚಿತ್ರ. ದ್ರಾವ್ರೇ, ಸವಾರಿ 2 , ಸೇರಿದಂತೆ 10 ಕ್ಕೂ ಹೆಚ್ಚು ಕನ್ನಡ , ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಉತ್ತಮ ನಟಿ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.