ಚುನಾವಣೆ ಯುವಜನತೆಗೆ ಕೊಡುಗ
Team Udayavani, Jan 19, 2018, 11:24 AM IST
ಕಲಬುರಗಿ: ಸರಕಾರಗಳು ಉದ್ಯೋಗ ಸೃಷ್ಟಿಗೆ ಪ್ರಯತ್ನಿಸದೇ ಕೇವಲ ಭರವಸೆ ನೀಡಿ ನಮ್ಮ ದಾರಿ ತಪ್ಪಿಸಿವೆ. ಆದ್ದರಿಂದ ಈ ಬಾರಿ ನನ್ನ ಮತ ಉದ್ಯೋಗಕ್ಕಾಗಿ ಎನ್ನುವ ಪ್ರಮಾಣದೊಂದಿಗೆ ನಿರುದ್ಯೋಗಿ ಯುವಕರು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಬೆಂಗಳೂರಿನ ಲೇಖಕ ಬಿ. ಶ್ರೀಪಾದ ಭಟ್ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆ ಹಮ್ಮಿಕೊಂಡಿದ್ದ ಉದ್ಯೋಗ ಸೃಷ್ಟಿಯ ಸಾಧ್ಯತೆ ಮತ್ತು ಸವಾಲುಗಳು ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿನ ದೊಡ್ಡ ಸಮಸ್ಯೆಗಳಲ್ಲಿ ನಿದ್ಯೋಗವು ಒಂದಾಗಿದೆ. ಆಡಳಿತಕ್ಕೆ ಬರುವ ಸರಕಾರಗಳು, ಮತ ಕೇಳುವ ಪಕ್ಷಗಳು ಯುವಜನರನ್ನು ಸ್ಪಂದಿಸಲು ವಿಫಲವಾಗಿವೆ. ಹೀಗಾಗಿ ಇಂದಿನ ತುರ್ತು ಅವಶ್ಯಕತೆಗಳಲ್ಲಿ ಉದ್ಯೋಗ ಪಡೆದುಕೊಳ್ಳುವುದು ಒಂದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆ ಯುವಜನತೆಗೆ ದೊಡ್ಡ ಕೊಡುಗೆಯಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯುವಕರು ಹಾಗೂ ಪಾಲಕರು ನಿರ್ಣಾಯಕ ನಿರ್ಧಾರ ಪ್ರಕಟಿಸಬೇಕು ಎಂದರು.
ಉದ್ಯೋಗ ಸಿಗದ ಯುವಜನರು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೊಡ್ಡ ಅಪಾಯವಿದೆ. ಇನ್ನೊಂದೆಡೆ ಕೌಶಲ್ಯಾಭಿವೃದ್ಧಿ ಸಚಿವರೇ ತಮ್ಮ ಖಾತೆಯನ್ನು ನೀರಿಲ್ಲದ ಬಾವಿಗೆ ಹೋಲಿಸಿದ್ದಾರೆ. ಅದರಿಂದ ಅವರ ಬೇಜವಾಬ್ದಾರಿ ಗೊತ್ತಾಗುತ್ತದೆ. ಹೀಗಾಗಿ ಈ ಸಮಸ್ಯೆಗಳಿಂದ ಮುಕ್ತವಾಗಲು
ಚುನಾವಣೆಯನ್ನು ಅಸ್ತ್ರವಾಗಿಸಬೇಕು ಎಂದರು.
ವೇದಿಕೆ ಸಂಚಾಲಕ ಮುತ್ತುರಾಜು ಮಾತನಾಡಿ, ನಾವು ಕೈಗೊಂಡಿರುವ ಈ ಆಂದೋಲನದಿಂದ ಯುವ ಜನರಲ್ಲಿ ಚಿಂತನೆಗಳು ಶುರುವಾಗಿವೆ. ಈ ಬಾರಿ ಚುನಾವಣೆ ಜಾತಿ, ಧರ್ಮ, ಹಣ ಹಾಗೂ ತಂತ್ರಗಳನ್ನು ಹೊರತುಪಡಿಸಿ ಕೇವಲ ಉದ್ಯೋಗ ಮತ್ತು ಅವಕಾಶಗಳಿಗಾಗಿ ನಡೆಯಬೇಕು.
ಇದು ಭಾರತದ, ಕರ್ನಾಟಕದ ಭವಿಷ್ಯ ಬದಲಿಸಲಿದೆ. ಆಂದೋಲನದ ಅಂಗವಾಗಿ 100 ವಿಧಾನಸಭೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಹಿ ಸಂಗ್ರಹವನ್ನು ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರಗಳಿಗೆ ನುಗ್ಗಲು ಎರಡು ಸಾವಿರ ಕಾರ್ಯಕರ್ತರು ತಯಾರಾಗಿದ್ದಾರೆ. ಲಕ್ಷ ಯುವಜನರನ್ನು ವೇದಿಕೆಯ ಸದಸ್ಯರನ್ನಾಗಿಸಲು ಯೋಜಿಸಲಾಗಿದೆ. ಫೆ.18ರಂದು ಬೆಂಗಳೂರಿನಲ್ಲಿ ಯುವ ಅಧಿವೇಶನದಲ್ಲಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದರು. ಸೈಬಣ್ಣಾ ಜಮಾದಾರ ನಿರೂಪಿಸಿದರು. ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಸ್ವಾಗತಿಸಿದರು. ನಿರುದ್ಯೋಗಿ ಯುವಕ, ಯುವತಿಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.