ಐ ಲೀಗ್ ಫುಟ್‌ಬಾಲ್‌ನಲ್ಲಿ ಫಿಕ್ಸಿಂಗ್ ಆರೋಪ
Team Udayavani, Jan 19, 2018, 12:14 PM IST
ಹೊಸದಿಲ್ಲಿ: ಫಿಕ್ಸಿಂಗ್ ಭೂತವೀಗ ಮತ್ತೆ ತಲೆಯೆತ್ತಿದೆ. ಐ ಲೀಗ್ ಕ್ಲಬ್ ಮಿನರ್ವ ತಂಡದ ಫುಟ್‌ಬಾಲ್ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್ ಸಲುವಾಗಿ ಬುಕ್ಕಿಗಳು ಸಂಪರ್ಕಿಸಿದ್ದಾರೆ ಎಂದು ತಂಡದ ಮಾಲಕ ರಂಜಿತ್ ಬಜಾಜ್ ಆರೋಪಿಸಿದ್ದಾರೆ.
ಮಿನರ್ವ ಮಾಲಕ ರಂಜಿತ್ ಪ್ರತಿಕ್ರಿಯಿಸಿ, “ಬುಕ್ಕಿಗಳು ಸಂಪರ್ಕಿಸಿದವರಲ್ಲಿ ಒಬ್ಬ ಆಟಗಾರ ಭಾರತದನಾಗಿದ್ದು, ಇನ್ನೊಬ್ಬ ವಿದೇಶಿಗ. ಬುಕ್ಕಿಗಳು ವೈಯಕ್ತಿಕವಾಗಿ ಆಟಗಾರರನ್ನು ಸಂಪರ್ಕಿಸಿ, 30 ಲಕ್ಷ ರೂ.ಗೆ ಫಿಕ್ಸಿಂಗ್ ಮಾತುಕತೆ ನಡೆಸಿದ್ದಾರೆ’ ಎಂದಿದ್ದಾರೆ. ಫಿಕ್ಸಿಂಗ್ ವಿಚಾರವನ್ನು ರಂಜಿತ್ ಧೃಢಪಡಿಸಿದರೂ ಆಟಗಾರರ ಹೆಸರನ್ನು ಬಹಿರಂಗಪಡಿಸಿಲ್ಲ.
“ಇಬ್ಬರು ಬುಕ್ಕಿಗಳು ನನ್ನ ತಂಡದ ಇಬ್ಬರು ಆಟಗಾರರನ್ನು ಸಂಪರ್ಕಿಸಿದ್ದಾರೆ. ಒಬ್ಬ ಬುಕ್ಕಿ ಮೂಲತಃ ದಿಲ್ಲಿಯವನಾಗಿದ್ದು, ಇನ್ನೊಬ್ಬ ಪಂಜಾಬಿನವ. ಫೇಸ್‌ಬುಕ್ ಮೂಲಕ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸಿದ್ದು, ಬುಕ್ಕಿಯಿಂದ ಒಬ್ಬ ಆಟಗಾರ ದೂರವಾಣಿ ಕರೆಯನ್ನೂ ಸ್ವೀಕರಿಸಿದ್ದಾನೆ. ಫಿಕ್ಸಿಂಗ್ ಯತ್ನದ ಬಗ್ಗೆ ತಂಡದ ಇಬ್ಬರೂ ಆಟಗಾರರೂ ಮೊಬೈಲ್‌ನ ಸ್ಕ್ರೀನ್‌ಶಾಟ್ ಮೂಲಕ ನನಗೆ ಮಾಹಿತಿ ನೀಡಿದ್ದಾರೆ’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.