ಬಿಜೆಪಿ ಇಂಡಿ ಮಂಡಲದಿಂದ 18 ಕಿ.ಮೀ. ಪಾದಯಾತ್ರೆ
Team Udayavani, Jan 19, 2018, 12:47 PM IST
ಇಂಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವಿಕಾಂತ ಬಗಲಿ ನೇತೃತ್ವದಲ್ಲಿ ಕಾರ್ಯಕರ್ತರು ತಾಲೂಕಿನ ತಡವಲಗಾ ಗ್ರಾಮದಿಂದ ಇಂಡಿ ನಗರದವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿ, ಕಂದಾಯ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಡವಲಗಾ ಗ್ರಾಮದ ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ನಂತರ ಸುಮಾರು 18 ಕಿ.ಮೀ. ಪಾದಯಾತ್ರೆ ಕೈಗೊಂಡರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿದ್ರಾವ್ಯವಸ್ಥೆಯಲ್ಲಿ ಆಡಳಿತ ನಡೆಸುತ್ತಿದೆ. ರೈತ ವಿರೋಧಿ ಯಾಗಿ, ಹಿಂದೂ ವಿರೋಧಿಯಾಗಿ ಕಾರ್ಯ ಮಾಡುತ್ತಿದೆ.
ಈ ಭಾಗದಲ್ಲಿ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಿಲ್ಲ. ರಾಜ್ಯಾದ್ಯಂತ ಇಂತಹ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಅಗತ್ಯವಾದ ಪರಿಹಾರ ನೀಡಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಶೀಘ್ರವೇ ನೀರು ಹರಿಸಬೇಕು, ಏತ ನೀರಾವರಿಗೆ ಸ್ವಾ
ಧೀನಪಡಿಸಿಕೊಂಡ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು, ಇಂಡಿ ಶಾಖಾ ಕಾಲುವೆಯ ಉಪ ಕಾಲುವೆ ಸಂಖ್ಯೆ 18ಎ, 19ಬಿ ಮತ್ತು 24 ಇವುಗಳಿಗೆ ಸರಿಯಾಗಿ ನೀರು ಪೂರೈಸಬೇಕು, ನಿಂಬೆ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರಾರಂಭಿಸಿ ನಿಂಬೆ ಬೆಳೆಯುವ ರೈತರಿಗೆ ನ್ಯಾಯ ಒದಗಿಸಬೇಕು, ತಾಲೂಕಿನ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕು, ತೊಗರಿ ಖರೀದಿ ಕೇಂದ್ರಗಳಲ್ಲಿ ಸ್ಥಗಿತಗೊಳಿಸಿದ ನೋಂದಣಿ ಕಾರ್ಯ ಶೀಘ್ರವೇ ಪ್ರಾರಂಭಿಸಬೇಕು, ತೊಗರಿ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಪ್ರತೀ ರೈತರಿಗೆ 20 ಕ್ವಿಂಟಲ್ ಬದಲು 50 ಕ್ವಿಂಟಲ್ ವರೆಗೂ ಖರೀದಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರಾದಾರ, ರವಿಕಾಂತ ಬಗಲಿ, ವಿರಾಜ ಪಾಟೀಲ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ, ಅನಿಲ ಜಮಾದಾರ, ಮುತ್ತಿ ದೇಸಾಯಿ, ಪಾಪು ಕಿತ್ತಲಿ, ಸಿದ್ದಲಿಂಗ ಹಂಜಗಿ, ಅಪ್ಪುಗೌಡ ಪಾಟೀಲ, ಮಂಜುನಾಥ ವಂದಾಲ, ಶಿವಯೋಗಿ ರೂಗಿಮಠ, ರವಿ ಖಾನಾಪುರ, ಅನಿಲಗೌಡ ಬಿರಾದಾರ, ಸಂಜು ದಶವಂತ, ಭೀಮ ಪ್ರಚಂಡಿ, ಬುದ್ದುಗೌಡ
ಪಾಟೀಲ, ರಾಮಸಿಂಗ ಕನ್ನೊಳ್ಳಿ, ಪುಟ್ಟಣಗೌಡ ಪಾಟೀಲ, ಸುನೀಲ ರಬಶೆಟ್ಟಿ, ಸತೀಶ ಕುಂಬಾರ, ಸುನಂದಾ ವಾಲೀಕಾರ, ಅನಸೂಯಾ ಮದರಿ, ಗುರುಬಾಯಿ ಬಂಡಿ, ಅದೃಶ್ಯಪಪ ವಾಲಿ, ಭೀಮಸಿಂಗ ರಾಠೊಡ, ಮಲ್ಲಿಕಾರ್ಜುನ ಕಿವುಡೆ, ಸೋಮು ಕುಂಬಾರ, ಗಣಪತಿ ಬಾಣಿಕೋಲ, ದೇವೇಂದ್ರ ಕುಂಬಾರ, ಶಾಂತು ಕಂಬಾರ, ಮಚೇಂದ್ರ ಕದಮ್, ಧರ್ಮು ಮದರಖಂಡಿ, ಪ್ರಕಾಶ ಗವಳಿ ಸೇರಿದಂತೆ 500 ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.