ಎನ್‌ಪಿಎಸ್ ವಿರೋಧಿಸಿ ಪ್ರತಿಭಟನೆ-ಮನವಿ
Team Udayavani, Jan 19, 2018, 1:31 PM IST
ನಿಡಗುಂದಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ವಿರೋಧಿಸಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿ ವಿಶೇಷ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ವಿವಿಧ ಇಲಾಖೆ ಸರಕಾರಿ ನೌಕರರು ಪಟ್ಟಣದ ಎಂಪಿಎಸ್ ಶಾಲೆಯಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ವಿಶೇಷ ತಹಶೀಲ್ದಾರ್ ಕಚೇರಿ ಎದುರು ಸಭೆ ಸೇರಿದರು.
ಎನ್‌ಪಿಎಸ್ ನೌಕರರ ವಿರೋಧಿಯಾಗಿದೆ. ನಮ್ಮ ಒಟ್ಟು ವೇತನದ ಶೇ.10ರಷ್ಟು ಹಣವನ್ನು ಕಟಾವು ಮಾಡಿ, ಅದನ್ನು ಖಾಸಗಿ ಸಂಸ್ಥೆಯಡಿ ಹೂಡಿಕೆ ಮಾಡಲಾಗುತ್ತಿದೆ. ಅದರಿಂದಾಗುವ ಲಾಭದ ಕುರಿತು ಮಾಹಿತಿ ಇಲ್ಲ, ನಿವೃತ್ತಿಯಾದ ನಂತರ ಮೊದಲು ಪಿಂಚಣಿ ನೀಡಲಾಗುತ್ತಿತ್ತು. ಆದರೆ ನಾವು ಹಾಕಿದ ಹಣದಲ್ಲಿಯೇ ಬಡ್ಡಿಯಾಗಿ ಪಿಂಚಣಿ ನೀಡುವ ಎನ್ ಪಿಎಸ್ ಇಡೀ ರಾಷ್ಟ್ರಾದ್ಯಂತ ಜಾರಿಯಲ್ಲಿದೆ. ಪಿಂಚಣಿ ಇಲ್ಲಿ ಅನಿಶ್ಚಿತವಾಗಿದೆ. ಹೊಸ ಪಿಂಚಣಿ ಯೋಜನೆ
ರದ್ದುಗೊಳಿಸಿ ಮೊದಲಿನ ಪಿಂಚಣಿ ವ್ಯವಸ್ಥೆ ಜಾರಿಗೆ ಬರಬೇಕು. ಇಲ್ಲಿಯವರೆಗೆ ಎನ್‌ಪಿಎಸ್‌ಗೆ ಕಟಾವು ಮಾಡಿರುವ ಹಣದ ಮಾಹಿತಿ ಮತ್ತು ಹೂಡಿಕೆ ಕುರಿತು ವಿವರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಿಶೇಷ ತಹಶೀಲ್ದಾರ್ ಎಂ.ಬಿ. ನಾಗಠಾಣ ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಟಿ. ಗೌಡರ, ಎಂ.ಎಂ. ಮುಲ್ಲಾ, ಸಲೀಂ ದಡೇದ, ಆರ್. ಬಿ. ಗೌಡರ, ಮುತ್ತು ಹೆಬ್ಟಾಳ, ಎಂ.ಬಿ. ಬಲಕುಂದಿ, ಎಚ್.ಎಚ್. ದೊಡಮನಿ, ಎಂ.ಬಿ. ರಕರೆಡ್ಡಿ, ಬಿ.ಡಿ. ಚಲವಾದಿ, ವಿ.ಕೆ. ಮಸೂತಿ, ಎಸ್.ಬಿ. ಕೊಲ್ಹಾರ, ಎಂ.ಆರ್. ಮಕಾನದಾರ, ಎಸ್.ಎಸ್. ಹುಬ್ಬಳ್ಳಿ, ಭಾಷಾ ಮನಗೂಳಿ, ಕೆ.ಎಂ.ಬಾಗೇವಾಡಿ, ಎಸ್.ಬಿ. ಕೋನರೆಡ್ಡಿ, ಆರ್.ಎಸ್.ವಂದಗನೂರ ಇದ್ದರು.
ಬಸವನಬಾಗೇವಾಡಿ: ಹಳೆ ಪಿಂಚಣಿ ಯೋಜನೆ ಅನುಷ್ಠಾನಕ್ಕಾಗಿ ಒತ್ತಾಯಿಸಿ ಗುರುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ನೌಕರರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಶಿರಸ್ತೇದಾರ ಅಮೃತಾ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 1.80 ಲಕ್ಷ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಭವಿಷ್ಯದ ದಿನಗಳಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಸುದಿಧೀರ್ಘ ಅಧ್ಯಯನ ನಡೆಸಿದೆ ಎಂದು ಹೇಳಿದರು.
ಜಿ.ಬಿ. ಬಾಬಾನಗರ ಮತ್ತು ಎಸ್.ಎಸ್. ಚಿಮ್ಮಲಗಿ ಮಾತನಾಡಿ, ಎನ್‌ಪಿಎಸ್ ನೌಕರರ ಎದುರಿಸುವ ಸಮಸ್ಯೆಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ಅವಲೋಕಿಸಿ ನೂತನ ಪಿಂಚಣಿ ಯೋಜನೆ ರದ್ದು ಪಡಿಸಬೇಕು. ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪದ್ಧತಿಯನ್ನೇ ಜಾರಿಗೊಳಿಸಬೇಕು ಎಂದರು.
ಎಸ್.ವಿ. ಮಠ, ಎಚ್.ಬಿ. ಬಾರಿಕಾಯಿ, ಚಿದಾನಂದ ಹೂಗಾರ, ವಿ.ಎಂ. ರಾಠೊಡ, ಆರ್. ಎಂ. ಬೆಳ್ಳುಬ್ಬಿ, ಎಸ್.ಜಿ. ಪರಗೊಂಡ, ಬಿ.ಜಿ. ಗೋಣಿ, ಜ್ಯೋತಿ ಶಿಂಧೆ, ರೇಣುಕಾ ಚವ್ಹಾಣ, ಎ.ಬಿ. ಕಲಾದಗಿ, ಎಸ್.ಐ. ರೇವೂರಕರ, ಸಿದ್ಧಾರ್ಥ ಕಳ್ಳಿಮನಿ, ಎ.ಎಂ. ಹಳ್ಳೂರ, ಶರಣಪ್ಪ ಮಾದರ, ಅನಿಲ ಬಬಲೇಶ್ವರ, ಮಹೇಂದ್ರ ಬಡಿಗೇರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿ: ನೂತನ ಪಿಂಚಣಿ ಯೋಜನೆಯಿಂದ ಬಾಧಿ ತರಾಗಿರುವ ನೌಕರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಮತ್ತು ಆರನೇ ವೇತನ ಆಯೋಗಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಶಿರಸ್ತೇದಾರ ಪಿ.ಎಚ್. ಗಲಗಲಿ ಅವರಿಗೆ ಸಲ್ಲಿಸಿದರು.
ಈ ವೇಳೆ ನೌಕರರ ಸಂಘದ ತಾಲೂಕಾಧ್ಯಕ್ಷ ಬಸವರಾಜ ರಾವೂರ ಮಾತನಾಡಿ, ಕೇಂದ್ರ ಸರ್ಕಾರ 2004ರಲ್ಲಿ ಅವೈಜ್ಞಾನಿಕ ಸಿದ್ಧಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್‌ಪಿಎಸ್ ಯೋಜನೆಯನ್ನು ಜಾರಿಗೊಳಿಸಿದ ತರುವಾಯ
ಈ ಯೋಜನೆಯನ್ನು ಪಶ್ಚಿಮ ಬಂಗಾಳ ಮತ್ತು ತ್ರಿಪುರಾ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯ ಸರ್ಕಾರಗಳು ನೂತನ ಪಿಂಚಣಿ ಯೋಜನೆ ಅಳವಡಿಸಿಕೊಂಡಿರುತ್ತವೆ.
ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.80 ಲಕ್ಷ ನೌಕರರು ಈ ಪಿಂಚಣಿ ಯೋಜನೆಯಿಂದ ದೂರ ಉಳಿದಿದ್ದು ಅವರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ನೌಕರರಿಗೆ ಪಿಂಚಣಿ ದೊರೆಯುವಂತೆ ಮಾಡಲು ಆರನೇ ವೇತನ ಆಯೋಗದ ಮುಂದೆ ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬಿ.ಎ.ರಾವೂರ, ಪಿ.ಜೆ. ಕೊಡಹೊನ್ನ, ಅಂಬಣ್ಣ ಸುಣಗಾರ, ಎಸ್.ವೈ. ಹರಳಯ್ಯ, ಐ.ಸಿ.ಕಂಬಾರ, ಎಸ್.ಆರ್. ಪಾಟೀಲ, ಎ.ಎ. ಬಿರಾದಾರ, ಪಿ.ಎಸ್. ಚಾಂದಕವಟೆ, ಎಸ್. ಕೆ. ಸೊನಕನಳ್ಳಿ, ಎಸ್.ಬಿ. ಝಳಕಿ, ಪ್ರಭು ಹೂಗಾರ, ಪಂಡಿತ ಕೊಡಹೊನ್ನ, ಎ.ಎಸ್. ಸರಸಂಬಿ, ಎಸ್. ಎನ್. ಕೋಳೇಕರ, ಆರ್.ಜಿ. ಬಂಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.