ವೃದ್ಧೆಯನ್ನು ಕೊಂದು ಚಿನ್ನ ಲೂಟಿ ಮಾಡಿದ ಆರೋಪಿ ಸೆರೆ
Team Udayavani, Jan 19, 2018, 3:29 PM IST
ಕೊಯಮುತ್ತೂರು : ಹತ್ತು ದಿನಗಳ ಹಿಂದೆ ಸೆಲ್ವಪುರಂನಲ್ಲಿ 77 ವರ್ಷ ಪ್ರಾಯದ ಮಹಿಳೆಯನ್ನು ಕೊಲೆಗೈದು ಆಕೆಯ ಚಿನ್ನಾಭರಣಗಳನ್ನು ಲೂಟಿ ಮಾಡಿದ್ದ 27ರ ಹರೆಯದ ಶೇಖರ್ ಬಾಬು ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ವಾಹನಗಳನ್ನು ತಪಾಸಣೆ ಮಾಡುವ ವೇಳೆ ಬೈಕ್ ಚಲಾಯಿಸಿಕೊಂಡು ಬಂದಿದ್ದ ಶೇಖರ್ ಬಾಬು ನನ್ನು ಪೊಲೀಸರು ತಡೆದು ನಿಲ್ಲಿಸಿದರು. ಆತನ ಬೈಕನ್ನು ಶೋಧಿಸಿದಾಗ ಅವರಿಗೆ 15 ಸೊವರೀನ್ ಚಿನ್ನಾಭರಣಗಳು ಸಿಕ್ಕಿದವು. ಪೊಲೀಸರು ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ಎಸಗಿದ್ದ ಕೊಲೆ, ಲೂಟಿ ಕೃತ್ಯ ಹೊರಬಿತ್ತು.
ಆರೋಪಿ ಶೇಖರ್ ಬಾಬು, ಕಳೆದ ಜನವರಿ 9ರಂದು 77ರ ಹರೆಯದ ಮಹಿಳೆಯನ್ನು ಕತ್ತು ಹಿಸುಕಿ ಕೊಂದಿದ್ದ ಎಂದಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.