ಜಾತಿ ಪ್ರಮಾಣಪತ್ರ ಕೊಡಿ
Team Udayavani, Jan 19, 2018, 3:35 PM IST
ದೇವದುರ್ಗ: ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಲು ಆಗ್ರಹಿಸಿ ಬೇಡ ಜಂಗಮ ಸಮಾಜದ ತಾಲೂಕು ಪದಾಧಿಕಾರಿಗಳು ಗುರುವಾರ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ ಶಿವಶರಣಪ್ಪ ಕಟ್ಟೋಳಿ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಬೂದಿ ಬಸವೇಶ್ವರ ಮಠದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿದ ಬೇಡ ಜಂಗಮ ಸಮಾಜ ಬಾಂಧವರು ಮಿನಿ ವಿಧಾನಸೌಧವರೆಗೆ ರ್ಯಾಲಿ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರಕಾರ ವೀರಶೈವ ಧರ್ಮದ ಜಂಗಮರೇ ಬೇಡ ಜಂಗಮರೆಂದು ಗೆಜೆಟ್ ವರದಿಯಲ್ಲಿ ಜಾರಿ ಮಾಡಲಾಗಿದೆ. ಜಾತಿ ಪ್ರಮಾಣಪತ್ರ ನೀಡಲು ಜಿಲ್ಲಾಧಿಕಾರಿಗಳು ಮಾರ್ಗಸೂಚಿ ಆದೇಶ ನೀಡಿದ್ದಾರೆ. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸ್ಥಳ ಸಮೀಕ್ಷೆ ನಡೆಸದೇ ಸರಕಾರಿ ಸುತ್ತೋಲೆಗಳನ್ನು ನೋಡದೇ ಎಲ್ಲೋ ಕುಳಿತು ಇವರು ಬೇಡ ಜಂಗಮರಲ್ಲ. ಈ ಭಾಗದಲ್ಲಿ ಬೇಡ ಜಂಗಮರು ವಾಸವಾಗಿಲ್ಲ ಎಂದು ತಪ್ಪು ಮಾಹಿತಿ ನೀಡಿ ಕರ್ತವ್ಯಲೋಪ ಎಸೆಗಿದ್ದಾರೆ. ಕಂದಾಯ ನಿರೀಕ್ಷಕರಿಗೆ ಬೇಡ ಜಂಗಮರ ಸ್ಥಳ ತನಿಖೆ ನಡೆಸಿ ಸರಕಾರದ ಮಾರ್ಗಸೂಚಿ ಪ್ರಕಾರ ಪಂಚನಾಮೆ ಮಾಡಲು ಆದೇಶ ನೀಡಬೇಕು. ಇಲ್ಲವಾದರೆ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ದೂರಿದರು. ಜಿಲ್ಲೆಯಲ್ಲಿ ವಾಸವಾಗಿರುವ ಬಗ್ಗೆ ಜನಗಣತಿ ಅಧಿಕಾರಿಗಳು ನೀಡಿದ ಮಾಹಿತಿ, ಎಲ್ಲ ದಾಖಲೆಗಳನ್ನು ಒದಗಿಸುತ್ತೇವೆ. ಒಂದು ವೇಳೆ ಸರಕಾರದಿಂದ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬಾರದೆಂಬ ಲಿಖೀತ ಆದೇಶವಿದ್ದರೆ ನೀಡಬೇಕು.
ಇಂಥ ಸಮಸ್ಯೆಯನ್ನು ಕಂದಾಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅದಷ್ಟ ಬೇಗನೆ ತಾಲೂಕಿನಲ್ಲಿ
ವಾಸವಾಗಿರುವ ಬೇಡ ಜಂಗಮದವರಿಗೆ ಕೂಡಲೇ ಜಾತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ದೇವದುರ್ಗ ಸಂಸ್ಥಾನ ಶಿಖರಮಠದ ಶ್ರೀ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಸಮಾಜದ ಅಧ್ಯಕ್ಷ ಗುರುಸ್ವಾಮಿ ಸ್ಥಾವರಮಠ, ಕಾಶಿನಾಥ ಸ್ವಾಮಿ, ಶಾಂತಮಲ್ಲಯ್ಯ ಸ್ವಾಮಿ, ಬಸವರಾಜ, ಚನ್ನಯ್ಯತಾತಾ, ಶರಣಯ್ಯ ಸ್ವಾಮಿ, ನಾಗಯ್ಯ ಸ್ವಾಮಿ, ವಿರೂಪಾಕ್ಷಿ ಗಂಧಮಠ, ಚನ್ನಯ್ಯಸ್ವಾಮಿ, ಬೂದೆಯ್ಯ, ಸಿದ್ದರಾಮೇಶ್ವರ, ಸಿದ್ದಯ್ಯಸ್ವಾಮಿ ಸೇರಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.