ಕಾನ್ಪುರ 100 ಕೋಟಿ ರೂ ನೋಟುಗಳಿಗೂ ಬೆಂಗಳೂರು ಲಿಂಕ್?
Team Udayavani, Jan 20, 2018, 10:18 AM IST
ಕಾನ್ಪುರ/ಹೊಸದಿಲ್ಲಿ: ಕಾನ್ಪುರ ದಲ್ಲಿ ವಶಪಡಿಸಲಾದ ಅಪಮೌಲ್ಯಗೊಂಡ 100 ಕೋಟಿ ರೂ. ನೋಟುಗಳಿಗೂ ಕರ್ನಾಟಕಕ್ಕೂ ಸಂಬಂಧ ಇದೆಯಾ?ಹೌದು, ಎನ್ನುತ್ತಿದೆ ಈ ವರದಿ.
ಬಲೆಗೆ ಬೀಳುವುದಕ್ಕಿಂತ ಮೊದಲು ಇಡೀ ಜಾಲ ಕರ್ನಾಟಕ ಸಹಿತ 5 ರಾಜ್ಯಗಳಲ್ಲಿ ಕಾರ್ಯಾ ಚರಣೆ ನಡೆಸುತ್ತಿತ್ತು. ಬೆಂಗಳೂರಿನ ಹರಿಕೃಷ್ಣ ಎಂಬಾತ ಅಪಮೌಲ್ಯಗೊಂಡ ನೋಟುಗಳ ಒಟ್ಟು 40%ರಷ್ಟನ್ನು ಬದಲಿಸಿ ಕೊಡುತ್ತೇನೆ ಎಂದು ವಾಗ್ಧಾನ ಮಾಡಿದ್ದ ಎನ್ನಲಾಗಿದೆ. ಬಂಧನಕ್ಕೆ ಒಳಗಾಗಿರುವ 16 ಆರೋಪಿಗಳ ಪೈಕಿ ಒಬ್ಬ ಬಾಯಿಬಿಟ್ಟಿರುವುದಾಗಿ “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಬೆಂಗಳೂರು ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಕಾನ್ಪುರ ಪೂರ್ವ ವಿಭಾಗದ ಎಸ್ಪಿ ಅನುಗಾರ್ ಆರ್ಯ ತಿಳಿಸಿದ್ದಾರೆ. ಜ. 30ರ ವರೆಗೆ ಅವರು ನ್ಯಾಯಾಂಗ ವಶದಲ್ಲಿರಲಿದ್ದು, ಬಳಿಕ ಬಂಧಿತರನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದಿದ್ದಾರೆ.
“ಸಂಜೀವ್ ಅಗರ್ವಾಲ್, ಮನೀಶ್ ಅಗರ್ವಾಲ್ ಕಮಿಷನ್ ಏಜೆಂಟ್ ಆಗಿ ದ್ದರು. ಹೈದರಾಬಾದ್‌ನ ಕೋಟೇಶ್ವರ ರಾವ್ ಬೆಂಗಳೂರಿನ ಹರಿಕೃಷ್ಣಗೆ ಕೆಲಸ ಮಾಡುತ್ತಿದ್ದ’ ಎಂದು ಎಸ್ಪಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.