ಮಾರುಕಟ್ಟೆಗೆ ಸಿರಿಧಾನ್ಯಗಳ ಐಸ್‌ಕ್ರೀಂ
Team Udayavani, Jan 20, 2018, 11:33 AM IST
ಬೆಂಗಳೂರು: ಸಾಮಾನ್ಯವಾಗಿ ಸಿರಿಧಾನ್ಯಗಳ ಚಾಕೋಲೇಟ್, ಚಿಪ್ಸ್, ಬಿಸ್ಕತ್ತು ರುಚಿ ನೀವು ನೋಡಿದ್ದೀರಿ. ಇದೀಗ ಸಿರಿಧಾನ್ಯಗಳ ಐಸ್‌ಕ್ರೀಂ ಕೂಡ ಸವಿಯಬಹುದು. ಶೀಘ್ರದಲ್ಲೇ ಈ ಐಸ್‌ಕ್ರೀಂ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಹೌದು, ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸಿರಿಧಾನ್ಯಗಳಿಂದ ತಯಾರಿಸಿದ ಬಾಯಲ್ಲಿ ಐಸ್‌ಕ್ರೀಂ ಮಾರುಕಟ್ಟೆ ಪ್ರವೇಶಿಸುತ್ತಿದೆ. ರುಚಿಯ ಜತೆಗೆ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡ ಈ ಐಸ್‌ಕ್ರೀಂ ಅನ್ನು ತಂಜಾವೂರಿನ ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್ಪಿಟಿ)ಯು ಪರಿಚಯಿಸುತ್ತಿದ್ದು, ಶನಿವಾರ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಇದನ್ನು ಬಿಡುಗಡೆ ಮಾಡಲಿದೆ.
ಈ ಐಸ್‌ಕ್ರೀಂ ಅನ್ನು ಮಧುಮೇಹಿಗಳು ಕೂಡ ಬೇಕಾದಷ್ಟು ಸೇವಿಸಬಹುದು. ಇದರಿಂದ ಬೊಜ್ಜು ಕೂಡ ಬರುವುದಿಲ್ಲ. ಅಷ್ಟೇ ಅಲ್ಲ, ಮೀನು, ಮೊಟ್ಟೆ-ಮಾಂಸದಲ್ಲಿರುವಂತಹ ಒಮೆಗಾ 3 ಫ್ಯಾಟಿ ಆ್ಯಸಿಡ್ಸ್ ಕೂಡ ಈ ವಿನೂತನ ಐಸ್‌ಕ್ರೀಂ ಹೊಂದಿದೆ. ಇದರಿಂದ ಮೆದುಳಿನ ಬೆಳವಣಿಗೆ, ಚಯಾಪಚಯ ಕ್ರಿಯೆಗಳಿಗೆ ಅನುಕೂಲ ಆಗಲಿದೆ. ಈ ಅಂಶಗಳು ಇತರೆ ಯಾವುದೇ ಕಮರ್ಷಿಯಲ್ ಐಸ್‌ಕ್ರೀಂಗಳಲ್ಲಿ ಲಭ್ಯವಿಲ್ಲ ಎಂದು ಐಐಎಫ್ಪಿಟಿ ನಿರ್ದೇಶಕ ಡಾ.ಸಿ. ಆನಂದಕೃಷ್ಣನ್ ಮಾಹಿತಿ ನೀಡಿದರು.
ಏನು ವ್ಯತ್ಯಾಸ?: ಸಾಮಾನ್ಯವಾಗಿ ಐಸ್‌ಕ್ರೀಂಗಳನ್ನು ಡೈರಿ ಹಾಲಿನಿಂದ ತಯಾರಿಸಲಾಗುತ್ತದೆ. ಅದರಲ್ಲಿ ಫ್ಯಾಟ್ ಅಂಶ ಹೇರಳವಾಗಿದ್ದು, ಲ್ಯಾಕ್ಟೋಸ್ ಇಂಟಲಾರಂಟ್ ಇರುವುದರ ಜತೆಗೆ ಯಾವುದೇ ಪೌಷ್ಟಿಕಾಂಶಗಳಿಲ್ಲದ, ಕೇವಲ ಸಕ್ಕರೆ ಅಂಶ ಹೊಂದಿರುತ್ತದೆ. ಅಧ್ಯಯನದ ಪ್ರಕಾರ ಸರಿಸುಮಾರು ಶೇ. 65ರಷ್ಟು ಜನರಲ್ಲಿನ ಜೀರ್ಣಶಕ್ತಿ ಕೇವಲ ಈ “ಲ್ಯಾಕ್ಟೋಸ್ ಇಂಟಾಲರಂಟ್’ನಿಂದಾಗಿಯೇ ಕಡಿಮೆ ಆಗುತ್ತಿದೆ. ಇದೇ ಕಾರಣಕ್ಕೆ ಮಕ್ಕಳಿಗೆ ಸೇವನೆಗೆ ಬೇಡ ಎನ್ನಲಾಗುತ್ತದೆ.
ಆದರೆ, “ಮಿಲೆಟ್ ಐಸ್‌ಕ್ರೀಂ’ ಇದಕ್ಕೆ ಅಪವಾದವಾಗಿದೆ. ಈ ಐಸ್‌ಕ್ರೀಂನಲ್ಲಿ ಶೇ. 80ರಷ್ಟು ಕಬ್ಬಿಣ, ಶೇ. 46 ಕ್ಯಾಲ್ಸಿಯಂ, ಶೇ. 44 ಮ್ಯಾಗ್ನೇಶಿಯಂ, ಶೇ. 14 ವಿಟಾಮಿನ್ “ಬಿ’, ಶೇ. 9 ವಿಟಾಮಿನ್ “ಎ’, ಶೇ. 7ರಷ್ಟು ಝಿಂಕ್ ಅಂಶಗಳಿವೆ. ಸಂಪೂರ್ಣವಾಗಿ ಸಿರಿಧಾನ್ಯಗಳನ್ನು ಅರೆದು, ಅದರಲ್ಲಿನ ಹಾಲಿನ ಅಂಶದಿಂದ ತಯಾರಿಸಲಾಗಿದೆ. ಪ್ಲೇನ್ ವೆನಿಲಾ ಐಸ್‌ಕ್ರೀಂಗೆ ಹೋಲಿಸಿದರೆ, ಶೇ. 43ರಷ್ಟು ಫ್ಯಾಟ್ ಅಂಶ ಕಡಿಮೆ ಇದೆ.
100 ಗ್ರಾಂ ಐಸ್‌ಕ್ರೀಂ; 16 ಗ್ರಾಂ ಮೀನಿಗೆ ಸಮ: 100 ಗ್ರಾಂನಷ್ಟು ಮಿಲೆಟ್ ಐಸ್‌ಕ್ರೀಂ ಸೇವನೆಯು 19.65 ಗ್ರಾಂ ಮೊಟ್ಟೆ ಮತ್ತು 15.94 ಗ್ರಾಂ ಮೀನು ಸೇವನೆಗೆ ಸರಿಸಮ. ಹಾಗಾಗಿ, ಈ ಒಮೆಗಾ 3 ಫ್ಯಾಟಿ ಆ್ಯಸಿಡ್‌ನಿಂದ ವಂಚಿತರಾಗುತ್ತಿರುವ ಅಪ್ಪಟ ಸಸ್ಯಾಹಾರಿಗಳು ಇನ್ಮುಂದೆ ಕೊರಗಬೇಕಿಲ್ಲ. ಅಷ್ಟೇ ಅಲ್ಲ, ಗ್ಲೆ„ಸೆಮಿಕ್ ಇಂಡೆಕ್ಸ್ (ಜಿಐ) ಕಡಿಮೆ ಮಾಡುವುದರಿಂದ ಮಧುಮೇಹಿಗಳು ನಿರಾತಂಕವಾಗಿ ಸೇವನೆ ಮಾಡಬಹುದು.
ಅಂದಹಾಗೆ, ಈ ಐಸ್‌ಕ್ರೀಂ ಬೆಲೆ ಕೇವಲ 5 ರೂ. ಶನಿವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ, ಸಂಸ್ಥೆಯು ಸಿರಿಧಾನ್ಯಗಳ ಬಿಸ್ಕತ್ತು, ಚಾಕೊಲೇಟ್ ಮತ್ತಿತರ ಉತ್ಪನ್ನಗಳನ್ನೂ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 1967ರಿಂದ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಆಹಾರ ಸಂಸ್ಕರಣೆಯಲ್ಲೇ ಬಿಟೆಕ್, ಎಂಟೆಕ್, ಪಿಎಚ್‌ಡಿ ಮಾಡಿದ ನೂರಾರು ವಿದ್ಯಾರ್ಥಿಗಳನ್ನು ಈ ಸಂಸ್ಥೆ ಕೊಟ್ಟಿದೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.