ಕ್ಯಾನನ್ ಇಂಡಿಯಾ: ಪಿಕ್ಸಮಾ-ಜಿ ಸರಣಿ ಪ್ರಿಂಟರ್ ಬಿಡುಗಡೆ
Team Udayavani, Jan 20, 2018, 11:34 AM IST
ನವದೆಹಲಿ: ಡಿಜಿಟಲ್ ಇಮೇಜಿಂಗ್ ಕಂಪನಿ ಕ್ಯಾನನ್ ಇಂಡಿಯಾ ಇತೀ¤ಚೆಗೆ ಅತ್ಯಾಧುನಿಕ ಸೌಕರ್ಯಗವುಳ್ಳ ನೂತನ ಪಿಕ್ಸಮಾ-ಜಿ ಸರಣಿಯ ಆರು ಪ್ರಿಂಟರ್‌ಗಳನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಕ್ಯಾನನ್ ಇಂಡಿಯಾದ ಅಧ್ಯಕ್ಷ -ಸಿಇಒ ಕಝುಟಡ ಕೊಬಯಾಶಿ ಅವರು ಪಿಕ್ಸಮಾ-ಜಿ ಸರಣಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಈ ಸರಣಿಯ ಪ್ರಿಂಟರ್‌ಗಳ ಮುಂಭಾಗದಲ್ಲೇ ರೀಫಿಲ್ ಇಂಕ್ ಟ್ಯಾಂಕ್, ಇಂಕ್ ಲೆವೆಲ್ ಮೇಲ್ವಿಚಾರಣಾ ವ್ಯವಸ್ಥೆಯೊಂದಿಗೆ ಒಂದು ಜೊತೆ ಇಂಕ್ ಬಾಟಲ್ ರೀಫಿಲ್ ಕೂಡ ಇದೆ.
ಎಲ್‌ಸಿಡಿ ಡಿಸ್‌ಪ್ಲೇ ಪ್ಯಾನೆಲ್ ಸೇರಿದಂತೆ ಆಧುನಿಕ ಸೌಲಭ್ಯಗಳಿರುವ ಹೈಬ್ರಿಡ್ ಇಂಕ್ ಸಿಸ್ಟಂ ಇದಾಗಿದ್ದು, ಗೃಹ ಹಾಗೂ ಕಚೇರಿಗಳಿಗೆ ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನಮ್ಮ ಸಂಸ್ಥೆಯ ಉತ್ಪನ್ನಗಳು ನಿರಂತರ ನಾವಿನ್ಯತೆಗೆ ಕಾರಣವಾಗಿದ್ದು ಕಳೆದ ಎರಡು ದಶಕದಿಂದ ಗ್ರಾಹಕರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಂಡಿವೆ.
ನಮ್ಮ ಉತ್ಪನ್ನಗಳ ಯಶಸ್ಸಿಗೆ ಗ್ರಾಹಕರು, ಪಾಲುದಾರರು, ಸಿಬ್ಬಂದಿ ಹಾಗೂ ಪ್ರಿಂಟರ್ ಸಮುದಾಯ ಕಾರಣವಾಗಿದೆ. ಎಲ್ಲರ ದೃಷ್ಟಿಯಲ್ಲಿರಿಸಿಕೊಂಡು ಪಿಕ್ಸಮಾ-ಜಿ ಸರಣಿಯನ್ನು ಬಿಡುಗಡೆ ಮಾಡಿದ್ದೇವೆ ಎಂದರು.ಸಂಸ್ಥೆಯ ಕನ್ಸೂಮರ್ ಇಮೇಜಿಂಗ್ ವಿಭಾಗದ ಉಪಾಧ್ಯಕ್ಷ ಎಡ್ಡಿ ಉಡಗವಾ ಮಾತನಾಡಿ, ಇಮೇಜಿಂಗ್ ಉದ್ಯಮದಲ್ಲಿ ಕ್ಯಾನನ್ ಮುಂಚೂಣಿಯಲ್ಲಿದೆ.
ಭಾರತದ ಮಾರುಕಟ್ಟೆಗೆ ಆರು ಹೊಸ ಪಿಕ್ಸಮಾ-ಜಿ ಸರಣಿಯ ಜಿ-1010, ಜಿ-2010, ಜಿ-2012, ಜಿ-3010 ಮತ್ತು ಜಿ-4010 ಕಲರ್ ಪ್ರಿಂಟರ್‌ಗಳನ್ನು ಅರ್ಪಿಸುತ್ತಿರುವುದು ಸಂತಸ ತಂದಿದೆ. ಗೃಹ ಬಳಕೆಯ ಗ್ರಾಹಕರು ಹಾಗೂ ಸಣ್ಣ ವ್ಯಾಪಾರಸ್ಥರು ಗುಣಮಟ್ಟದ ಕಲರ್ ಪ್ರಿಂಟ್‌ಗಳು ನಿರೀಕ್ಷಿಸಬಹುದಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜಿ2000 ಮತ್ತು ಜಿ3000 ಜೊತೆಗೆ ಪಿಕ್ಸಮಾ-ಜಿ ಸರಣಿ ಸೇರಿಕೊಳ್ಳಲಿದೆ. ಇವುಗಳ ದರ 8,195 ರೂ. ಗಳಿಂದ 17,425 ರೂ.ಗಳಲ್ಲಿ ಲಭ್ಯವಿರುತ್ತವೆ ಎಂದು ನುಡಿದರು. ಕ್ಯಾನನ್ ಕನ್ಸೂಮರ್ ಸಿಸ್ಟಂ ಪ್ರಾಡಕ್ಟ್ ನಿರ್ದೇಶಕ ಸಿ. ಸುಕುಮಾರನ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maha Election; ಕಾಂಗ್ರೆಸ್ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್ ಗಡ್ಕರಿ
Final Verdict: ಬುಲ್ಡೋಜರ್ ನ್ಯಾಯ ಒಪ್ಪಲು ಅಸಾಧ್ಯ: ಸಿಜೆಐ ಚಂದ್ರಚೂಡ್ ಅಂತಿಮ ತೀರ್ಪು
ISRO; ಶೀಘ್ರ ದೇಸಿ ನ್ಯಾವಿಗೇಶನ್ ವ್ಯವಸ್ಥೆ ಜಾರಿ
Congress guarantees; ಕರ್ನಾಟಕಕ್ಕೆ ಬಂದು ಯಶಸ್ಸು ನೋಡಿ: ಮಹಾ ಬಿಜೆಪಿಗೆ ಡಿಕೆಶಿ ಚಾಟಿ
Kejriwal ಮನೆಯಲ್ಲಿ 100 ಎಸಿ, 73 ಲಕ್ಷದ ಟಿವಿ: ಬಿಜೆಪಿ ಟೀಕೆ
MUST WATCH
ಹೊಸ ಸೇರ್ಪಡೆ
Bengaluru: ಒಂಟಿ ಮಹಿಳೆ ಮೇಲೆ ಹಲ್ಲೆ ನಡೆಸಿ, ಹತ್ಯೆ
Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ
Lupus Nephritis: ಲೂಪಸ್ ನೆಫ್ರೈಟಿಸ್: ರೋಗಿಗಳಿಗೆ ಒಂದು ಮಾರ್ಗದರ್ಶಿ
ಡಿಕೆಶಿ, ಪ್ರಿಯಾಂಕ್ ಖರ್ಗೆ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ಮಹಿಳಾ ಎಂಜಿನಿಯರ್‌ಗೆ ವಂಚನೆ
Maha Election; ಕಾಂಗ್ರೆಸ್ ಸಂವಿಧಾನ ಬದಲಾಯಿಸಿ ನಮ್ಮನ್ನು ದೂರುತ್ತಿದೆ: ನಿತಿನ್ ಗಡ್ಕರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.