ಪ್ರಧಾನಿಯಲ್ಲ, ಪ್ರತಿನಿಧಿ: ವಿಶ್ವ ಆರ್ಥಿಕ ಒಕ್ಕೂಟ ಸಮ್ಮೇಳನಲ್ಲಿ ಮೋದಿ
Team Udayavani, Jan 20, 2018, 3:27 PM IST
ನವದೆಹಲಿ: ವಿಶ್ವದ ದೈತ್ಯ ನಾಯಕರ ಜತೆ ನಾನು ಯಾವುದೇ ವೇದಿಕೆ ಹಂಚಿಕೊಂಡಾಗ ನಾನು ಕೇವಲ ಭಾರತದ ಪ್ರಧಾನಿಯಲ್ಲ, ಭಾರತದ 125 ಕೋಟಿ ಜನರ ಪ್ರತಿನಿಧಿ ಎಂದೆನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದೇ ತಿಂಗಳ 23ರಿಂದ 26ರವರೆಗೆ ಸ್ವಿಜರ್ಲೆಂಡ್‌ನ ದಾವೋಸ್ ನಲ್ಲಿ ವಿಶ್ವ ಆರ್ಥಿಕ ಒಕ್ಕೂಟದ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ತಮ್ಮ ಹಲವಾರು ಆಡಳಿತಾತ್ಮಕ ದೃಷ್ಟಿಕೋನಗಳನ್ನು ಹಂಚಿಕೊಂಡರು.
2014ರ ಮಹಾ ಚುನಾವಣೆಯಲ್ಲಿ 30 ವರ್ಷಗಳ ನಂತರ, ಭಾರತದಲ್ಲಿ ಸಂಪೂರ್ಣ ಬಹುಮತದ ಸರ್ಕಾರವೊಂದು ರಚನೆಯಾಗಿತು. ಇದು, ಇಡೀ ವಿಶ್ವವೇ ಭಾರತದಲ್ಲೇ ಆಗುತ್ತಿದೆ ಎಂದು ಇತ್ತ ತಿರುಗಿ ನೋಡುವಂತೆ ಮಾಡಿತಲ್ಲದೆ, ಭಾರತದೊಂದಿಗೆ ವಿಶ್ವದ ಇತರ ದೇಶಗಳು ವ್ಯವಹರಿಸುವ ರೀತಿಯನ್ನೇ ಬದಲಿಸಿತು ಎಂದಿದ್ದಾರೆ.
ಸಂದರ್ಶನದ ಆಯ್ದ ಭಾಗ
*ಪ್ರಪಂಚದ ನಾನಾ ದೇಶಗಳ ಮಾರುಕಟ್ಟೆಗಳು ಪರಸ್ಪರ ಅವಲಂಬಿತವಾಗಿರುವುದರಿಂದ ಎಲ್ಲಾ ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಬೇಕಾಗುತ್ತದೆ.
* ಜಿ 20 ಶೃಂಗ ಸಭೆಯಲ್ಲಿ ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಬಗ್ಗೆ ನಾವು ಪ್ರತಿಪಾದಿಸಿದ್ದೆವು. ಇದನ್ನೀಗ ಇಡೀ ವಿಶ್ವವೇ ಕೊಂಡಾಡುತ್ತಿದೆ.
*ನಾವು ಕೆಲವೇ ವಿಚಾರಗಳಿಗೆ ಸೀಮಿತವಾಗಬಾರದು. ಪ್ರತಿಯೊಂದನ್ನೂ ಸಕಾರಾತ್ಮಕವಾಗಿಯೇ ಎದುರಿಸಬೇಕು. (ಪುಟಿನ್-ಟ್ರಂಪ್*ಮೋದಿ ಜೋಡಿಯ ಬಗ್ಗೆ ಕೇಳಲಾದ ಪ್ರಶ್ನೆಗೆ)
* ಉಜಾಲದ ಮೂಲಕ ಹಲವಾರು ಬಡಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದೇವೆ. ಬಡವರಿಗೆ 90 ಪೈಸೆಯಲ್ಲಿ ಆರೋಗ್ಯ ವಿಮೆ ನೀಡಲಾಗಿದೆ. ವಿದ್ಯುತ್ ದೀಪ ಕಾಣದ ಮನೆಗಳಿಗೆ ಎಲ್‌ಇಡಿ ಬಲುºಗಳನ್ನು ವಿತರಿಸಲಾಗಿದೆ.
* ಯುಪಿಎ ಸರ್ಕಾರವು ರಾಜ್ಯಗಳ ಸಮಸ್ಯೆಗೆ ಕಿವಿಗೊಡಲಿಲ್ಲ. ನಾವು ಅಂಥ ತಪ್ಪು ಮಾಡಲಿಲ್ಲ.
*ಜಿಎಸ್‌ಟಿಯಿಂದ ಇಡೀ ಭಾರತದಲ್ಲಿ ಏಕಮೇವ ತೆರಿಗೆ ಪದ್ಧತಿ ಜಾರಿಗೆ ತಂದಿದ್ದೇವೆ.
* ಇಷ್ಟು ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ನನಗೆ ತಿಳಿದಿದ್ದೇನೆಂದರೆ, ಜನರು ಸರ್ಕಾರವನ್ನು ನೆಚ್ಚಿ ಮತ ಹಾಕುವುದಿಲ್ಲ. ಅವರನ್ನು ಎಲ್ಲಾ ರೀತಿಯಲ್ಲೂ ಸಬಲರನ್ನಾಗಿಸಿದ, ಆತ್ಮಗೌರವದಿಂದ ಬಾಳುವಂತೆ ಮಾಡಿದವರಿಗಷ್ಟೇ ಮತಹಾಕುತ್ತಾರೆ.
* ಕೇಂದ್ರ ಹಾಗೂ ರಾಜ್ಯಗಳಿಗೆ ಒಂದೇ ಅವಧಿಯಲ್ಲಿ ಚುನಾವಣೆ ನಡೆಯುವಂತೆ ಮಾಡುವ ಆಲೋಚನೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.