ನಡಾಲ್, ಕಿರ್ಗಿಯೋಸ್ ನಾಲ್ಕನೇ ಸುತ್ತು ಪ್ರವೇಶ
Team Udayavani, Jan 21, 2018, 6:40 AM IST
ಮೆಲ್ಬರ್ನ್: ವಿಶ್ವದ ನಂಬರ್ ವನ್ ಆಟಗಾರ ರಫೆಲ್ ನಡಾಲ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಯ 4ನೇ ಸುತ್ತಿಗೆ (ಪ್ರೀ- ಕ್ವಾರ್ಟರ್ ಫೈನಲ್) ಪ್ರಯಾಣ ಬೆಳೆಸಿದ್ದಾರೆ. ಇವರೊಂದಿಗೆ ನಿಕ್ ಕಿರ್ಗಿಯೋಸ್, ಗ್ರಿಗರ್ ಡಿಮಿ ಟ್ರೋವ್, ಕೈಲ್ ಎಡ್ಮಂಡ್, ಪಾಬ್ಲೊ ಕರೆನೊ ಬುಸ್ಟ ಕೂಡ ಗೆಲುವಿನ ಅಭಿಯಾನ ಮುಂದುವರಿಸಿದ್ದಾರೆ.
17ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿ ರುವ ರಫೆಲ್ ನಡಾಲ್ 25ನೇ ರ್ಯಾಂಕಿಂಗ್ ಆಟಗಾರ ಬೋಸ್ನಿಯಾದ ದಮಿರ್ ಜುಮುರ್ ಅವ ರನ್ನು 6-1, 6-3, 6-1 ಅಂತರದಿಂದ ಪರಾ ಭವಗೊಳಿಸಿದರು. ರವಿವಾರದ ಮುಖಾಮುಖೀ ಯಲ್ಲಿ ನಡಾಲ್ ಆರ್ಜೆಂಟೀನಾದ ಡೀಗೊ ಶ್ವಾರ್ಟ್ಸ್ಮನ್ ಅವರನ್ನು ಎದುರಿಸಲಿದ್ದಾರೆ.
ಕಿರ್ಗಿಯೋಸ್ ಬಲೆಗೆ ಸೋಂಗ
ತವರಿನ ಭರವಸೆಯ ಆಟಗಾರ ನಿಕ್ ಕಿರ್ಗಿ ಯೋಸ್ ಭಾರೀ ಹೋರಾಟದ ಬಳಿಕ ಫ್ರಾನ್ಸ್ನ ಜೋ ವಿಲ್ಫ್ರೆಡ್ ಸೋಂಗ ಅವರನ್ನು 7-6 (7-5), 4-6, 7-6 (8-6), 7-6 (7-5) ಅಂತರದಿಂದ ಹಿಮ್ಮೆಟ್ಟಿಸಿ ನಿಟ್ಟುಸಿರೆಳೆದರು.
ವಿಶ್ವದ ನಂ.3 ಆಟಗಾರ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ರಷ್ಯದ “ರೈಸಿಂಗ್ ಸ್ಟಾರ್’ ಆಂಡ್ರೆ ರುಬ್ಲೆವ್ ವಿರುದ್ಧ 4 ಸೆಟ್ಗಳ ಹೋರಾಟ ನಡೆಸಿ 6-3, 4-6, 6-4, 6-4ರಿಂದ ವಿಜಯಿಯಾದರು. ಡಿಮಿಟ್ರೋವ್ ಅವರಿನ್ನು ನಿಕ್ ಕಿರ್ಗಿಯೋಸ್ ಸವಾಲನ್ನು ಎದುರಿಸಬೇಕಿದೆ.
ಕಣದಲ್ಲಿರುವ ಬ್ರಿಟನ್ನಿನ ಏಕೈಕ ಆಟಗಾರ ಕೈಲ್ ಎಡ್ಮಂಡ್ ಜಾರ್ಜಿಯಾದ ನಿಕೋಲಸ್ ಬಾಸಿಲಶ್ವಿಲಿ ವಿರುದ್ಧ ಮ್ಯಾರಥಾನ್ ರ್ಯಾಕೆಟ್ ಸಮರ ನಡೆಸಿ 7-6 (7-0), 3-6, 4-6, 6-0, 7-5 ಅಂತರದಿಂದ ಗೆಲುವು ಕಾಣುವಲ್ಲಿ ಯಶಸ್ವಿಯಾದರು. ಇವರ 4ನೇ ಸುತ್ತಿನ ಎದುರಾಳಿ ಇಟೆಲಿಯ ಆ್ಯಂಡ್ರಿಯಾಸ್ ಸೆಪ್ಪಿ. ಅವರು ಕ್ರೊವೇಶಿಯಾದ ಐವೊ ಕಾರ್ಲೋವಿಕ್ ಎದುರಿನ ಜಿದ್ದಾಜಿದ್ದಿ ಮೇಲಾಟದಲ್ಲಿ 6-3, 7-6 (7-4), 6-7 (3-7), 6-7 (5-7), 9-7 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಕಳೆದ ವರ್ಷ ಯುಎಸ್ ಓಪನ್ ಸೆಮಿಫೈನಲ್ ತನಕ ಬಂದಿದ್ದ ಸ್ಪೇನಿನ 10ನೇ ಶ್ರೇಯಾಂಕಿತ ಆಟಗಾರ ಪಾಬ್ಲೊ ಕರೆನೊ ಬುಸ್ಟ ಲಕ್ಸೆಂಬರ್ಗ್ನ ಗಿಲ್ಲೆಸ್ ಮುಲ್ಲರ್ ಅವರನ್ನು ಸೋಲಿಸಿ ಮುನ್ನಡೆ ದರು. ಬುಸ್ಟ ಗೆಲುವಿನ ಅಂತರ 7-6 (7-4), 4-6, 7-5, 7-5.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.