ಒಲಿಂಪಿಕ್ಸ್‌ಗೆ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ
Team Udayavani, Jan 21, 2018, 10:57 AM IST
ಮಹಾನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶ ಆರ್ಥಿಕ ಕ್ಷೇತ್ರದಲ್ಲಿ, ಕ್ರೀಡಾಕ್ಷೇತ್ರದಲ್ಲಿ ಜಗತ್ತಿಗೆ ಪೈಪೋಟಿ ನೀಡಬೇಕು ಎಂಬ ಕನಸು ಹೊತ್ತಿದ್ದಾರೆ. ಇದನ್ನು ಸಾಕಾರಗೊಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶನಿವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ 2020, 2024ರ ಒಲಿಂಪಿಕ್ಸ್‌ಗೆ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ‘ಜರ್ನಿಫಾರ್ ಗ್ಲೋರಿ’ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಕ್ರೀಡಾಳುಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಕ್ರೀಡಾಳುಗಳಿಗೆ ಪೂರಕವಾಗುವಂತೆ ಕೆಲವು ಕ್ರೀಡಾ ನೀತಿಗಳನ್ನು ಬದಲಾವಣೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು 1,500ಕ್ಕಿಂತ ಹೆಚ್ಚು ದೂರ ಕ್ರಮಿಸುವ ಪಟುವಿಗೆ ವಿಮಾನ ಪ್ರಯಾಣದ ಸೌಲಭ್ಯವನ್ನು ಕೇಂದ್ರ ಸರಕಾರ ನೀಡಿದೆ. ಇವೆಲ್ಲವನ್ನೂ ಕ್ರೀಡಾಪಟುಗಳು ಸದುಪಯೋಗಿಸಿ ಎಂದರು.
ಶಾಸಕ ಜೆ.ಆರ್. ಲೋಬೋ ಅವರು ಮಾತನಾಡಿ, ಸದೃಢ ಕ್ರೀಡಾಪಟುಗಳನ್ನು ನಿರ್ಮಾಣ ಮಾಡುವಲ್ಲಿ ತರಬೇತುದಾರರ ಮತ್ತು ಶಾಲೆಗಳ ಪಾತ್ರ ಮಹತ್ತರವಾಗಿದೆ. ಹೀಗಾಗಿ ಶಾಲೆ, ದೈಹಿಕ ಶಿಕ್ಷಣ ತರಬೇತುದಾರರು ಮತ್ತು ಹೆತ್ತವರ ಸಹಕಾರ ಶ್ಲಾಘನೀಯ ಎಂದರು. 1,500ಕ್ಕೂ ಅಧಿಕ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಮಾಜಿ ಶಾಸಕ ಯೋಗೀಶ್ ಭಟ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗೈಲ್ ಇಂಡಿಯಾ ಜನರಲ್ ಮ್ಯಾನೇಜರ್
ವಿವೇಕ್ ವಾಥೋಡ್ಕರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ವಿಜಯಾನಂದ, ಚೀಫ್ ಮ್ಯಾನೇಜರ್ ಎಂ. ಅಶೋಕ್ ಕುಮಾರ್, ರವೀಂದ್ರ ರೆಡ್ಡಿ, ಅಶೋಕ್ ಸಿಂತ್ರೆ, ರಮೇಶ್ ಕೆ., ಕೇಶವ ಬಂಗೇರ, ಯತೀಶ್ ಕುಮಾರ್ ಪಿ. ಮೊದಲಾದವರು ಉಪಸ್ಥಿತರಿದ್ದರು.
ಸಾಧನೆಗೆ ಛಲ ಅಗತ್ಯ
ಅಧ್ಯಕ್ಷತೆ ವಹಿಸಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ, ಛಲ, ಗುರಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.
ಹಿಂದೆ ಕ್ರೀಡಾಪ್ರತಿಭೆಗಳಿದ್ದರೂ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ಇರಲಿಲ್ಲ. ಪ್ರಸ್ತುತ ಕ್ರೀಡಾಪಟುಗಳಿಗೆ ಎಲ್ಲ ಸೌಲಭ್ಯಗಳಿವೆ. ಇದನ್ನು ಸದುಪಯೋಗಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.