ಪೇಜಾವರ ಶ್ರೀಗಳಿಗೆ ಬೆನ್ನು ನೋವು, ವಿಶ್ರಾಂತಿ
Team Udayavani, Jan 21, 2018, 11:03 AM IST
ಉಡುಪಿ: ಪರ್ಯಾಯ ಪೀಠದಿಂದ ನಿರ್ಗಮಿಸಿದಾಕ್ಷಣ ಮಿಂಚಿನ ಸಂಚಾರ ಪ್ರಾರಂಭಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ದೇಹಾಯಾಸ ತಡೆ ಉಂಟು ಮಾಡಿದೆ. ಮಂತ್ರಾಲಯದಿಂದ ಕರ್ನೂಲಿಗೆ ಶುಕ್ರವಾರ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕ ಉಂಟಾದ ಜಂಪ್ ಶ್ರೀಪಾದರಿಗೆ ದೈಹಿಕ ನೋವು ಉಂಟು ಮಾಡಿದ್ದು, ಅವರು ಶನಿವಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಉಡುಪಿ ಪೇಜಾವರ ಮಠಕ್ಕೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೈದರಾಬಾದ್ ಮೂಲದ ಚಾಲಕ ಚಲಾಯಿಸುತ್ತಿದ್ದ ಶ್ರೀಗಳಿದ್ದ ವಾಹನ ಶುಕ್ರವಾರ ರಾತ್ರಿ ಸುಮಾರು 11 ಗಂಟೆಗೆ ಕರ್ನೂಲಿನ ಬಳಿ ಸೇತುವೆಯೊಂದರ ಸನಿಹ ಇದ್ದ ರಸ್ತೆಯುಬ್ಬು ಚಾಲಕನ ಅರಿವಿಗೆ ಬಾರದೆ ಹಠಾತ್ ಏರಿಳಿದಿತ್ತು. ಹಠಾತ್ ಆದ ಕಾರಣ ಶ್ರೀಪಾದರು ಆಸನದಿಂದ ಬಿದ್ದು ನೋವು ಕಾಣಿಸಿಕೊಂಡಿತ್ತು. ಒಡನೆಯೇ ಕರ್ನೂಲಿನ ಆಸ್ಪತ್ರೆಗೆ ತೆರಳಿ ಪರೀಕ್ಷಿಸಲಾಯಿತು. ಬೆನ್ನು ಹುರಿ ನೋವು ಇದೆ, ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದರು.
ಬಳಿಕ ಶ್ರೀಪಾದರು ಹೈದರಾಬಾದ್‌ನಿಂದ ಮಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸಿ, ಸದ್ಯ ಉಡುಪಿ ಪೇಜಾವರ ಮಠದ ವಿಜಯಧ್ವಜ ಛತ್ರದ ತಳ ಅಂತಸ್ತಿನಲ್ಲಿ ವಿಶ್ರಾಂತಿ ಮತ್ತು ನೋವು ನಿವಾರಕ ಔಷಧ ತೆಗೆದುಕೊಳ್ಳುತ್ತಿದ್ದಾರೆ. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಪಾದರು ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದು, ವೈದ್ಯರು ಸೊಂಟಕ್ಕೆ ಬೆಲ್ಟ್ ಕಟ್ಟಿಕೊಳ್ಳಲು ಮತ್ತು 15 ದಿನಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.