ಕಿಕ್ ಬಾಕ್ಸಿಂಗ್‌ನಲ್ಲಿ ಚಿನ್ನ: ರಾಜ್ಯದ ಪ್ರಕೃತಿ ವಿಶ್ವ ದಾಖಲೆ
Team Udayavani, Jan 21, 2018, 12:54 PM IST
ಬೆಂಗಳೂರು: ಉದ್ಯಾನನಗರಿಯ ಬಾಲಕಿ 4 ವರ್ಷದ ಪ್ರಕೃತಿ ಅವರು ವಾಕೊ ಇಂಡಿಯಾ ಕಿಕ್ ಬಾಕ್ಸಿಂಗ್ ಫೆಡರೇಷನ್ ಕಪ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಅವರು 7ರಿಂದ 9 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಸ್ಪರ್ಧೆ ಮಾಡಿ ಪ್ರಾಬಲ್ಯ ಮರೆದರು.
ತನಗಿಂತ ದೊಡ್ಡವರೊಂದಿಗೆ ಸ್ಪರ್ಧೆ ಮಾಡಿ ಗೆದ್ದಿರುವುದು ವಿಶೇಷ. ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಬಾಲಕಿ ಪ್ರಕೃತಿಯಾಗಿದ್ದಾರೆ ಎಂದು ಅವರ ಕೋಚ್ ಶರಣ್ ಉದಯವಾಣಿಗೆ ತಿಳಿಸಿದ್ದಾರೆ.
ಕಿರಿಯರ ವಯಸ್ಸಿಗೆ ಪ್ರಕೃತಿ ಸಾಧನೆ: ಪ್ರಕೃತಿ ಎಲ್‌ಕೆಜಿ ವಿದ್ಯಾರ್ಥಿನಿ. ಬೆಂಗಳೂರಿನ ದೇವರಚಿಕ್ಕನಹಳ್ಳಿಯ ರೆಯಾನ್ ಕಿಡ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಮಟ್ಟದಲ್ಲಿ 3 ಚಿನ್ನದ ಪದಕ, ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ರಾಷ್ಟ್ರೀಯ ಕೂಟದಲ್ಲಿ ಬೆಳ್ಳಿ ಹಾಗೂ 2017ರಲ್ಲಿ ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದಲ್ಲಿ 1 ಚಿನ್ನದ ಪದಕ ಗೆದ್ದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.