ಗೋವಾದಲ್ಲಿ ಸೂರಿಗಾಗಿ ಕನ್ನಡಿಗರ ಪರದಾಟ
Team Udayavani, Jan 22, 2018, 10:18 AM IST
ಪಣಜಿ(ವಾಸ್ಕೋ): ಬೈನಾದಲ್ಲಿ ಕನ್ನಡಿಗರು ಮನೆ ಕಳೆದುಕೊಂಡು ಎರಡು ದಿನಗಳು ಕಳೆದರೂ ರಾಜ್ಯ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲಕ್ಕೆ ಬಾರದಿರುವು ದರಿಂದ ಬೇರೆ ದಾರಿಯಿಲ್ಲದೆ ಬೈನಾ ಕನ್ನಡಿಗರು ಮನೆ ಬಾಡಿಗೆಗೆ ಪಡೆಯಲು ಪರದಾಡುವಂತಾಗಿದೆ.
ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡಿದ್ದ ಕರ್ನಾಟಕ ಸರ್ಕಾರ ಇತ್ತ ಮುಖ ಮಾಡದೇ ಇರುವುದು
ಇನ್ನಷ್ಟು ಬೇಸರ ಉಂಟುಮಾಡಿದೆ. ಸಿಆರ್ಝಡ್ ನಿಯಮ ಉಲ್ಲಂಘಿಸಿ ಬೈನಾದಲ್ಲಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ ದಕ್ಷಿಣ ಗೋವಾ ಜಿಲ್ಲಾಡಳಿತ ಜ.18ರಂದು 32 ಮನೆಗಳ ತೆರವುಗೊಳಿಸಿತ್ತು. ಇವುಗಳಲ್ಲಿ ಸುಮಾರು 20 ಮನೆಗಳು ಕನ್ನಡಿಗರದ್ದಾಗಿವೆ. 40ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದ ಈ ಕನ್ನಡಿಗರು ಇದೀಗ ಬೀದಿಗೆ ಬಂದಿದ್ದಾರೆ.
ಶೀಘ್ರವೇ ಇನ್ನೂ 89 ಮನೆಗಳ ತೆರವು: ಬೈನಾದಲ್ಲಿ 121 ಮನೆಗಳ ತೆರವಿಗೆ ಸಂಬಂಧಿ ಸಿದಂತೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿ 32 ಮನೆ ತೆರವುಗೊಳಿಸಿತ್ತು, ಆದರೆ 89 ಮನೆ ಗಳ ಮಾಲೀಕರು ತೆರವಿಗೆ ನ್ಯಾಯಾಲಯದಲ್ಲಿ ತುರ್ತು ತಡೆ ಯಾಜ್ಞೆ ಪಡೆದಿದ್ದರೂ ಆದರೆ ಅವು ತುರ್ತಾಗಿ ಬಚಾವಾದರೂ ಕೆಲವೇ ದಿನಗಳಲ್ಲಿ ತೆರವುಗೊಳಿಸುವ ಆತಂಕವಿದೆ.
ಗಗನಕ್ಕೇರಿದ ಸೈಟ್ ದರ?
1100 ಸೈಟ್ಗಳನ್ನು ಗೋವಾದ ಬೈನಾ ಬೀಚ್ ಪಕ್ಕದಲ್ಲಿಯೇ ಈ ನಿರಾಶ್ರಿತರಿಗೆ ಕೊಡಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಗೋವಾದಲ್ಲಿ ಒಂದು ಸೈಟ್ ಖರೀದಿಸಲು 210 ಸ್ಕೆÌàರ್ ಮೀಟರ್ ಜಾಗಬೇಕು. ನಗರ ಪ್ರದೇಶದಲ್ಲಿ ಒಂದು ಮೀಟರ್ ಜಾಗಕ್ಕೆ ಸುಮಾರು 30,000 ರೂ. ಇದ್ದು ಒಂದು ಸೈಟ್ ಖರೀದಿಸಲು ಕಡಿಮೆಯೆಂದರೂ 60 ಲಕ್ಷ ರೂ. ಬೇಕು. ಹೀಗಿರುವಾಗ 1100 ಸೈಟ್ಗಳನ್ನು ಕೊಡಿಸುವುದಾಗಿ ಹೇಗೆ ಘೋಷಿಸಿದರು ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.