ಇಂದಿನಿಂದ ಉದಯವಾಹಿನಿಯಲ್ಲಿ ಹೊಸ ಧಾರಾವಾಹಿ ಬ್ರಹ್ಮಾಸ್ತ್ರ
Team Udayavani, Jan 22, 2018, 10:41 AM IST
ಉದಯ ವಾಹಿನಿ, ಈಗ ಹೊಸ ಧಾರಾವಾಹಿಯೊಂದನ್ನು ಶುರು ಮಾಡುತ್ತಿದೆ. ಆ ಧಾರಾವಾಹಿ ಹೆಸರು “ಬ್ರಹ್ಮಾಸ್ತ್ರ’. ಜನವರಿ 22 (ಇಂದಿನಿಂದ) ರಿಂದ ರಾತ್ರಿ 8 ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ. ಕನ್ನಡದ ಹುಡುಗ ಮತ್ತು ತೆಲುಗು ಹುಡುಗಿ ನಡುವೆ ನಡೆಯುವ ಲವ್‌ಸ್ಟೋರಿ ಹೊಂದಿರುವ “ಬ್ರಹ್ಮಾಸ್ತ್ರ’ದಲ್ಲಿ ಆಪ್ಪಟ ಮನರಂಜನೆಯ ಹೂರಣವಿದೆ. ನಿರ್ಮಾಪಕ ಕಮ್ ನಿರ್ದೇಶಕ ರವಿ ಆರ್.ಗರಣಿ ಅವರ ಸಾರಥ್ಯದಲ್ಲಿ “ಬ್ರಹ್ಮಾಸ್ತ್ರ’ ಮೂಡಿಬರುತ್ತಿದೆ.
ಇದು ಮನೋಧರ್ಮದ ಎರಡು ಕುಟುಂಬದ ನಡುವೆ ನಡೆಯುವ ಕಥೆ. ಒಂದು ಕಡೆ ಅಧಿಕಾರದ ಮದ, ಇನ್ನೊಂದು ಕಡೆ ಪ್ರೀತಿಯ ಅಮೃತ. ಒಂದು ಕುಟುಂಬಕ್ಕೆ ದ್ವೇಷವೇ ದೇವರು. ಇನ್ನೊಂದು ಕುಟುಂಬಕ್ಕೆ ಪ್ರೀತಿಯೇ ದೇವರು. ಅಧರ್ಮದ ಅಧಿಪತ್ಯ, ಧರ್ಮ ಪರಿಪಾಲನೆ ಮತ್ತು ಅವುಗಳ ಮುಖಾ-ಮುಖೀ ಒಳಗೊಂಡ ವಿಭಿನ್ನ ಚಿತ್ರಕಥೆ, ನಿರೂಪಣೆಯಲ್ಲಿ “ಭ್ರಹ್ಮಾಸ್ತ್ರ’ ಮೂಡಿಬರಲಿದೆ.
ತೆಲುಗು ಹುಡುಗಿಯ ಕುಟುಂಬ ಕನ್ನಡ ಹುಡುಗನ ಕುಟುಂಬದವರ ವೈಮನಸ್ಸುಗಳ ನಡುವೆ ನಡೆಯುವ ರೋಚಕ ಪ್ರೀತಿಯ ಕಥೆ ಧಾರಾವಾಹಿಯ ಹೈಲೈಟ್ ಎಂಬುದು ತಂಡದ ಮಾತು. ಈ ಬಾರಿ ಹೊಸ ಕಥೆ ಆಯ್ಕೆ ಮಾಡಿಕೊಂಡು ಕೆಲವು ಸಿದ್ಧ ಸೂತ್ರಗಳನ್ನು ಬದಿಗೊತ್ತಿ, ವಿಶಿಷ್ಠ ಕಥೆ ಕೈಗೆತ್ತಿಕೊಂಡಿರು ನಿರ್ದೇಶಕ ರವಿ ಆರ್.ಗರಣಿ ಅವರು ಈಗಾಗಲೇ “ಬ್ರಹ್ಮಾಸ್ತ್ರ’ ಟೀಸರ್ ಬಿಡುಗಡೆ ಮಾಡಿದ್ದಾರೆ.
ಗ್ರಾಮೀಣ ಮತ್ತು ನಗರ ಜನರಿಗೆ ಇಷ್ಟವಾಗುವ ಅಂಶಗಳು ಈ ಧಾರಾವಾಹಿಯಲ್ಲಿವೆ. ಪ್ರಮೋದ್ ಹಾಗು ದೀಪಾ ಹಿರೇಮಠ್ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳು. ಉಳಿದಂತೆ ತ್ರಿವೇಣಿ, ಶೈಲಶ್ರೀ, ಶಂಕರ್‌ಅಶ್ವಥ್, ಸುದರ್ಶನ್, ಅಶೋಕ್ ಹೆಗ್ಗಡೆ, ವಿಜಯ್ ಕೌಂಡಿಣ್ಯ, ಮೈಸೂರು ಹರಿ, ಸಿದ್ದೇಶ್ವರ್, ರಶ್ಮಿತಾ, ಪಲ್ಲವಿ, ಪವನ್, ರಜನಿಕಾಂತ್ ಮುಂತಾದವರು ನಟಿಸುತ್ತಿದ್ದಾರೆ. ಗರಣಿ ಪೊಡಕ್ಷನ್ಸ್‌ನಲ್ಲಿ ಲತಾ ಆರ್.ಗರಣಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಕಿರಣ್ ಛಾಯಾಗ್ರಹಣವಿದೆ. ತಿಲಕ್ ನಿರ್ದೇಶಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.