ಪದ್ಮಾವತ್ ಆದೇಶ ಪುನರ್ ಪರಿಶೀಲಿಸಿ: ಸುಪ್ರೀಂ ಕೋರ್ಟ್ಗೆ ಮನವಿ
Team Udayavani, Jan 22, 2018, 11:44 AM IST
ಹೊಸದಿಲ್ಲಿ : ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ನಿಷೇಧ ಹೇರಿರುವ ತಮ್ಮ ನಿಲುವಿನಿಂದ ಹಿಂದೆ ಸರಿಯದ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರಕಾರಗಳು ಇಂದು ಸೋಮವಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿವೆ.
ಪದ್ಮಾವತ್ ಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸಿದ ತನ್ನ ಆದೇಶವನ್ನು ಪುನರ್ ಪರಿಶೀಲಿಸುವಂತೆ ಈ ರಾಜ್ಯಗಳು ಸುಪ್ರೀಂ ಕೋರ್ಟನ್ನು ವಿನಂತಿಸಿವೆ.
ಅಂತೆಯೇ ಸುಪ್ರೀಂ ಕೋರ್ಟ್ ಈ ರಾಜ್ಯಗಳ ಮನವಿಯನ್ನು ನಾಳೆ ಮಂಗಳವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಜನವರಿ 25ರಂದು ಪದ್ಮಾವತ್ ಬಿಡುಗಡೆಯನ್ನು ನಿರ್ಧರಿಸಲಾಗಿದೆ.
ಮಧ್ಯ ಪ್ರದೇಶದ ಚಿತ್ರಮಂದಿಗಳು ತಾವು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜ.25ರಿಂದ ಪದ್ಮಾವತ್ ಚಿತ್ರ ಪ್ರದರ್ಶಿಸುವುದಾಗಿ ಈ ನಡುವೆ ಹೇಳಿವೆ. ಚಿತ್ರ ಮಂದಿರ ಮಾಲಕರ ಪ್ರಕಾರ ಮಧ್ಯಪ್ರದೇಶದಲ್ಲಿ ಜನವರಿ 25ರಂದು ಸುಮಾರು 150 ಚಿತ್ರಮಂದಿರಗಳಲ್ಲಿ ಪದ್ಮಾವತ್ ಚಿತ್ರ ತೆರೆ ಕಾಣಲಿದೆ.
ಚಿತ್ತೂರ್ಗಡ್ ದಲ್ಲಿ ಚೇತಾವನಿ ರಾಲಿ
ಈ ನಡುವೆ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ರಾಜಸ್ಥಾನದ ಚಿತ್ತೂರ್ಗಡ್ ದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಕತ್ತಿಯನ್ನು ಝಳಪಿಸುತ್ತಾ ಚೇತಾವನಿ ರಾಲಿ ನಡೆಸಿ, ಚಿತ್ರ ಬಿಡುಗಡೆಯಾದಲ್ಲಿ ತಾವು ಸತೀ ಸಹಗಮನ (ಜೌಹರ್) ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಸುಮಾರು 1.908 ಮಂದಿ ಮಹಿಳೆಯರು ಈಗಾಗಲೇ ತಾವು ಜೌಹರ್ ನಡೆಸುವುದಕ್ಕೆ ತಮ್ಮನ್ನು ನೋಂದಾವಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಪ್ರತಿಭಟನಕಾರು ತಮ್ಮ ಜಾಥಾವನ್ನು ಚಿತ್ತೋರ್ಗಢ ಕೋಟೆಯಿಂದ ಪಟ್ಟಣದಲ್ಲಿನ ಮುಖ್ಯ ಮಾರುಕಟ್ಟೆ ಪ್ರದೇಶದ ವರೆಗೆ ನಡೆಸಿದರು. ಅನಂತರ ಅವರು ಜಿಲ್ಲಾಧಿಕಾರಿ ಇಂದ್ರಜಿತ್ ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಣಿ ಪದ್ಮಿನಿಯ ಘನತೆ ಮತ್ತು ಗೌರವದ ರಕ್ಷಣೆಗಾಗಿ ನಾವು ಈ ರಾಲಿಯನ್ನು ನಡೆಸುತ್ತಿದ್ದೇವೆ; ಜನವರಿ 25ರಂದು ಪದ್ಮಾವತಿ ಚಿತ್ರ ಬಿಡುಗಡೆಯನ್ನು ಈಗಲೇ ರದ್ದುಗೊಳಿಸದಿದ್ದರೆ ಜನವರಿ 24ರಂದು ನಾವು ಜೌಹರ್ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ಮೆರವಣಿಗೆಯಲ್ಲಿ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.