ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ
Team Udayavani, Jan 22, 2018, 11:54 AM IST
ಬೆಂಗಳೂರು: ಹಣಕಾಸು ವಿಚಾರವಾಗಿ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರನ್ನು ಹತ್ಯೆಗೈದ ಘಟನೆ ವಿಜಯನಗರದ ಪಂಚಶೀಲ ಲೇಔಟ್‌ನಲ್ಲಿ ನಡೆದಿದೆ. ಪಾಟೇಗಾರ್‌ಪಾಳ್ಯ ಬಳಿಯ ಪಂಚಶೀಲ ನಗರ ನಿವಾಸಿ ಗಣೇಶ್ (48) ಹತ್ಯೆಯಾದವರು.
ಜ.19ರಂದು ಪತ್ನಿ, ಮಕ್ಕಳು ಊರಿಗೆ ಹೋದಾಗ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಗಣೇಶ್‌ರನ್ನು ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಮೊಗ್ಗ ಮೂಲದ ಗಣೇಶ್, ಒಂದು ವರ್ಷದ ಹಿಂದೆ ಪುತ್ರಿಯ ವಿವಾಹ ಮಾಡಿದ್ದು, ಪತ್ನಿ ಉಮಾ, ಪುತ್ರ ಅಭಿಷೇಕ್ ಜತೆ ಪಂಚಶೀಲನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ.
ಪುತ್ರ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಕೊಲೆಯಾದ ಗಣೇಶ್ ರಿಯಲ್ ಎಸ್ಟೇಟ್ ಜತೆ ಹಳೆಯ ಕಾರುಗಳ ಮಾರಾಟ ಮಾಡುವ ಮಧ್ಯವರ್ತಿಯಾಗಿದ್ದರು. ಜ.18ರಂದು ಕಾರ್ಯನಿಮಿತ್ತ ಪತ್ನಿ ಉಮಾ ಮತ್ತು ಪುತ್ರ ಅಭಿಷೇಕ್ ಶಿವಮೊಗ್ಗಕ್ಕೆ ತೆರಳಿದ್ದರು. ಇತ್ತ ಗಣೇಶ್ ಕೂಡ ನಿವೇಶನವೊಂದರ ವ್ಯವಹಾರ ಮುಗಿಸಿ ಜ.19ರಂದು ತಾನೂ ಊರಿಗೆ ಬರುವುದಾಗಿ ಪತ್ನಿಗೆ ತಿಳಿಸಿದ್ದರು.
ಅಂದು ತಡರಾತ್ರಿಯಾದರು ಪತಿ ಬಾರದರಿಂದ ಗಾಬರಿಗೊಂಡ ಪತ್ನಿ ಉಮಾ, ಪತಿ ಗಣೇಶ್‌ಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಅನುಮಾನಗೊಂಡ ಪತ್ನಿ ಪುತ್ರನ ಜತೆ ಜ.20ರಂದು ರಾತ್ರಿ 10 ಗಂಟೆ ಸುಮಾರಿಗೆ ಬೆಂಗಳೂರಿನ ಮನೆಗೆ ಬಂದಿದ್ದಾರೆ.
ಮನೆಯ ಕಾಲಿಂಗ್ ಬೆಲ್ ಒತ್ತಿದರೂ ಪ್ರತಿಕ್ರಿಯೆ ಬಂದಿಲ್ಲ. ಹೊರಗಿನಿಂದಲೇ ಬಾಗಿಲು ಲಾಕ್ ಆಗಿತ್ತು. ಇದರಿಂದ ಇನ್ನಷ್ಟು ಆತಂಕಗೊಂಡ ಪತ್ನಿ ಹಾಗೂ ಪುತ್ರ, ಬಾಗಿಲು ತೆರೆದು ಒಳ ಹೋದಾಗ ಕೊಠಡಿಯೊಂದರಲ್ಲಿ ಗಣೇಶ್ ಮೃತ ದೇಹ ಬಿದ್ದಿದ್ದು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮರಕಾಸ್ತ್ರಗಳಿಂದ ಗಣೇಶ್‌ರನ್ನು ಭೀಕರವಾಗಿ ಹತ್ಯೆಗೈದಿದ್ದಾರೆ. ಗಣೇಶ್ ಜತೆ ಹಣದ ವಿಚಾರ ಮಾತನಾಡಲು ಬಂದವರೇ ಕೊಲೆಗೈದಿರುವ ಶಂಕೆಯಿದೆ. ಘಟನೆ ಸಂಬಂಧ ಪ್ರಕರಣ ದಾಖಸಿಕೊಂಡಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕರಣ ವಿಜಯನಗರ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.