ಸಿರಿಧಾನ್ಯ ಸಿಹಿ ಬದುಕು


Team Udayavani, Jan 22, 2018, 1:01 PM IST

sihi-baduku.jpg

ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಸಂಭ್ರಮದ, ಸಂತೃಪ್ತಿಯಿಂದ ಬದುಕು ನಡೆಸುತ್ತಿರುವವರು ನಿಂಗನಗೌಡ ಪಾಟೀಲ. ಸಾವಯವದ ಪದ್ಧಿತಿಯಿಂದ ಕೆಲವೊಮ್ಮೆ ಕಡಿಮೆ ಇಳುವರಿ ಸಿಗುತ್ತದೆ. ಆದರೆ, ವಿಷ ರಹಿತ ಆಹಾಹ ಬೆಳೆ ಪಡೆದ ಖುಷಿ ನನ್ನದಾಗಿರುತ್ತದೆ ಎಂಬುದು ಅವರ ಮಾತು.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ಓಂಕಾರ ಗೌಡ ನಿಂಗನ ಗೌಡ ಪಾಟೀಲ್‌ ಅವರಿಗೆ ಸಿರಿಧಾನ್ಯ ಕೃಷಿಯಲ್ಲಿ ಎರಡು ದಶಕಗಳ ಅನುಭವವಿದೆ. ಸಾವಯವ ಕೃಷಿಯಲ್ಲಿ ತೊಡಗಿರುವ ಇವರು ಕೊಟ್ಟಿಗೆಯ ತಿಪ್ಪೆಗೊಬ್ಬರ, ಎರೆಗೊಬ್ಬರ ಬಿಟ್ಟರೆ ಇನ್ಯಾವ ರಾಸಾಯನಿಕವನ್ನೂ ಕೃಷಿಗೆ ಬಳಸಿದ ಉದಾಹರಣೆ ಇಲ್ಲ.

ಕಡಿಮೆ ಇಳುವರಿ ಬಂದರೆ ಏನಂತೆ? ವಿಷ ರಹಿತವಾದ ಆಹಾರವನ್ನು ನಾವು ಸೇವಿಸಿದಂತೆ ಆಗುತ್ತದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಸಿಗುವುದರಿಂದ ಈ ಕೃಷಿ ಪದ್ಧತಿಯಿಂದ ನವåಗೆ ನಷ್ಟದಾಯಕವೆನಿಸುವುದಿಲ್ಲ ಎನ್ನುತ್ತಾರೆ.

ಸಾವಯವಕ್ಕೆ ಹೊರಳಿದ ಪರಿ: ಇವರದು ನಲವತ್ತು ಎಕರೆ ಜಮೀನು. ಇಪ್ಪತ್ತು ಎಕರೆ ಶೇಂಗಾ, ಎಂಟು ಎಕರೆ ಬ್ಯಾಡಗಿ ಮೆಣಸು, ಎಂಟು ಎಕರೆ ಜೋಳ, ಮೂರು ಎಕರೆಯಲ್ಲಿ ಸಿರಿಧಾನ್ಯಗಳಾದ ಊದಲು, ಕೊರಲೆ, ಹಾರಕ ಬೆಳೆಯುತ್ತಾರೆ. ದಶಕಗಳ ಹಿಂದೆ ರಸಗೊಬ್ಬರ ಬಳಕೆ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಮಳೆ ಕೊರತೆ ಕಾಡಿದಾಗ ಬಿಸಿಲನ್ನು ಸಸಿಕೊಳ್ಳುವ ತಾಕತ್ತು ಬೆಳೆಗೆ ಇರುತ್ತಿರಲಿಲ್ಲ. ಈ ಕಾರಣದಿಂದ ಪೈರುಗಳು ನೆಲ ಕಚ್ಚುತ್ತಿದ್ದವು.  “ಸಣ್ಣ ವಾತಾವರಣ ವೈಪರಿತ್ಯವನ್ನೂ ತಡೆದುಕೊಳ್ಳದ ಬೆಳೆಯನ್ನು ಬೆಳೆಯದಿದ್ದರೆ ಏನಂತೆ’ ಎಂದು ಕೊಂಡು ಅನೇಕ ಬಾರಿ ಚಿಂತಾಕ್ರಾಂತರಾಗಿದ್ದರು ನಿಂಗನ ಗೌಡ.  

ಪರ್ಯಾಯ ಆಲೋಚನೆಯಲ್ಲಿದ್ದಾಗ ಧಾರವಾಡದ ಕೃಷಿ ಮೇಳದಲ್ಲಿ ತಜ್ಞರಿಂದ ದೊರೆಯುತ್ತಿದ್ದ ಸಾವಯವ ಕೃಷಿಯ ಸಾಧ್ಯತೆಯ ಅವಕಾಶಗಳ ಬಗೆಗಿನ ಮಾಹಿತಿ ಇವರ ಗಮನ ಸೆಳೆಯಿತು. ಅದನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅರಿತುಕೊಂಡು ಬಂದು ತಮ್ಮ ಜಮೀನಿನಲ್ಲಿ ಪ್ರಯೋಗಕ್ಕಿಳಿದರು.

ರಾಸಾಯನಿಕ ಗೊಬ್ಬರ ವರ್ಜಿಸಿ ಎರೆಗೊಬ್ಬರ ಉತ್ಪಾದನೆಗೆ ತೊಡಗಿದರು. ತಿಪ್ಪೆಗೊಬ್ಬರ ಉತ್ಪಾದಿಸುವ ಪ್ರಮಾಣ ಇಮ್ಮಡಿಗೊಳಿಸಿದರು. ಪರಿಣಾಮ, ಕಳೆದ ಏಳು ವರ್ಷಗಳಿಂದ ಇವರ ಕೃಷಿ ಭೂಮಿ ಸಂಪೂರ್ಣ ಸಾವಯವದ ಕಂಪು ತುಂಬಿಕೊಂಡಿವೆ. 

ಸಿರಿಧಾನ್ಯ ವೈಭವ: ತಲಾ ಒಂದೂ ಕಾಲು ಎಕರೆಯಂತೆ ಊದಲು, ಕೊರಲೆ, ಹಾರಕದ ಕೃಷಿ ಮಾಡಿದ್ದಾರೆ. ಬೀಜ ಬಿತ್ತನೆಗೆ ಹಿಂದಿನ ವರ್ಷ ಉಳಿಸಿಕೊಂಡ ಬೀಜಗಳನ್ನೇ ಬಳಕೆ ಮಾಡಿಕೊಳ್ಳುತ್ತಾರೆ. ಎರೆ ಮಣ್ಣಿನ ಭೂಮಿ ಇವರದು. ಟ್ರಾಕ್ಟರ್‌ ಸಹಾಯದಿಂದ ಆಳ ಉಳುಮೆ. ರೆಂಟೆಯ ಸಹಾಯದಿಂದ ಮಣ್ಣು ಮಟ್ಟಗೊಳಿಸಿ ಕೂರಿಗೆಯಿಂದ ಬೀಜ ಬಿತ್ತಿದ್ದಾರೆ.

ಸಾಲಿನಿಂದ ಸಾಲಿಗೆ ಹದಿನಾಲ್ಕು ಇಂಚು ಅಂತರ ಕಾಯ್ದುಕೊಂಡಿದ್ದಾರೆ. ಬಿತ್ತಿದ ಎಂಟು ದಿನಕ್ಕೆ ಗಿಡಗಳು ಹುಟ್ಟಲಾರಂಭಿಸಿವೆ.  ಇಪ್ಪತ್ತನೆಯ ದಿನಕ್ಕೆ ಎಡೆಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಗಿಡಗಳ ಬುಡಕ್ಕೆ ಒಂದು ಇಂಚಿನಷ್ಟಾದರೂ ಮಣ್ಣು ಬೀಳಬೇಕು. ಹೀಗೆ ಕುಂಟೆ ಹೊಡೆಯುವುದರಿಂದ ಗಿಡಗಳ ಹುಲುಸಾದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಇತರೆ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಕೃಷಿಯಲ್ಲಿ ಕಳೆ ಬೆಳೆಯುವ ಪ್ರಮಾಣ ವಿರಳ. “ಸಿರಿಧಾನ್ಯ ಸಸ್ಯಗಳಲ್ಲಿ ಯತೇಚ್ಚ ಬೇರುಗಳು ಹರಡಿರುತ್ತವೆ. ಇವು ಕಳೆಗೆ ನೆಲೆ ಕಲ್ಪಿಸುವುದಿಲ್ಲ. ಹಾಗಾಗಿ ಒಂದೆರಡು ಬಾರಿಯ ಎಡೆಕುಂಟೆ ಹೊಡೆತಕ್ಕೇ ಕಳೆ ನೆಲ ಕಚ್ಚುತ್ತದೆ’ ಎನ್ನುತ್ತಾರೆ.

ಕಾಂಪೋಸ್ಟ್‌ ಹಾಗೂ ಎರೆಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಬೆಳೆಗಳಿಗೆ ಯಾವುದೇ ಕೀಟ, ರೋಗಗಳ ಬಾಧೆ ಇಲ್ಲ. ಗಿಡಗಳು ಹುಲುಸಾಗಿ ಬೆಳೆದು ನಿಂತಿವೆ. ನವೆಂಬರ್‌ ಮೂರನೆಯ ವಾರದ ವೇಳೆಗೆ ಸಿರಿಧಾನ್ಯ ಬೆಳೆ ಕಟಾವಿಗೆ ಸಿಗಲಿದೆ. ಊದಲು ನಾಲ್ಕು ಕ್ವಿಂಟಾಲ್‌, ಕೊರಲೆ ಆರು ಕ್ವಿಂಟಾಲ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಐದು ಕ್ವಿಂಟಾಲ್‌ ಇಳುವರಿಯ ನಿರೀಕ್ಷೆ ಇವರದು. ಸಿರಿಧಾನ್ಯ ಬೆಳೆ ಕಟಾವಿನ ನಂತರ ಒಕ್ಕಣೆ ಮಾಡಿ ಕಾಳುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸಿಡುತ್ತಾರೆ. ಅಕ್ಕಿ ತಯಾರಿಸಿ ಮಾರಾಟ ಮಾಡುತ್ತಾರೆ. ಬೀಜವಾಗಿಯೂ ಮಾರುವುದಿದೆ. ಮನೆ ಬಾಗಿಲಿಗೆ ಬಂದು ಒಯ್ಯುವ ಗ್ರಾಹಕರಿಗೆ ಮಾತ್ರ ಕ್ರಯ. ಉಳಿದಿದ್ದನ್ನು ತಾವೇ ಬಳಕೆ ಮಾಡಿಕೊಳ್ಳುತ್ತಾರೆ. ಬೇಡಿಕೆ ಜಾಸ್ತಿ ಇರುವುದರಿಂದ ಪೂರೈಕೆ ಕಷ್ಟವಾಗುತ್ತಿದೆ ಎನ್ನುವುದು ಇವರ ಮಾತು. 

ಸಾವಯವಕ್ಕೆ ಹೊಂದಿಕೊಂಡ ಭೂಮಿ ಸರಾಸರಿ ನಿರೀಕ್ಷಿತ ಇಳುವರಿಯನ್ನು ಹುಸಿಗೊಳಿಸುವುದಿಲ್ಲ. ಶೇಂಗಾ ಬೆಳೆ ಎಕರೆಗೆ ಇಪ್ಪತ್ತು ಚೀಲ, ಮೆಣಸು ಎರಡೂವರೆ ಕ್ವಿಂಟಾಲ್‌, ಜೋಳ ಕೃಷಿಯಿಂದ ಆರು ಕ್ವಿಂಟಾಲ್‌ ಇಳುವರಿ ಪಡೆಯುತ್ತಿದ್ದಾರೆ. ರಸಗೊಬ್ಬರ ಬಳಕೆಯಿಂದ ವ್ಯತ್ಯಯವಾಗುತ್ತಿದ್ದ ಇಳುವರಿ ವೈಪರೀತ್ಯದ ಸಾಧ್ಯತೆಯಿಂದ ಸಂಪೂರ್ಣ ಬಚಾವಾಗಿದ್ದಾರೆ. ಆದಾಯ ಹಾಗೂ ಆರೋಗ್ಯದ ಸಮತೋಲನ ಸಾಧಿಸಿ ನೆಮ್ಮದಿಯಿಂದ ಇದ್ದಾರೆ.

ಸಂಪರ್ಕಿಸಲು: 9902749518 

* ಕೋಡಕಣಿ ಜೈವಂತ ಪಟಗಾರ

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.