ಶೋಷಿತ ರೈತನ ಗ್ರಾಹಕ ಸೇವೆಗಳ ಸುತ್ತಾ…


Team Udayavani, Jan 22, 2018, 1:01 PM IST

shoshita.jpg

ರೈತರಿಗೆ ನೆರವಾಗಬೇಕು. ಅವರಿಗೆ ಅಗತ್ಯವಿರುವ ಮಾಹಿತಿಯನ್ನು ನಯಪೈಸೆ ಪಡೆಯದೇ ಒದಗಿಸಬೇಕು ಎಂಬ ಸದಾಶಯದಿಂದ ಹಲವು ಯೋಚನೆಗಳನ್ನು ರೂಪಿಸಲಾಗಿದೆ. ಅವುಗಳ ಒಂದಷ್ಟು ಕೈಪಿಡಿ ನೋಡಿ ಹೀಗಿವೆ…

ರೈತ, ಕಾಲದೊಂದಿಗೆ ಸ್ಪರ್ಧಿಸಲೇಬೇಕು. ಕೃಷಿಗೆ ಮತ್ತು ಬದುಕಿಗೆ ಅಗತ್ಯವಾದ ಸೌಲಭ್ಯಗಳನ್ನು ಆತ ಅಳವಡಿಸಿಕೊಳ್ಳುವುದು ಸೂಕ್ತ. ಜೊತೆಜೊತೆಗೆ ಆ ಪ್ರಕ್ರಿಯೆಗೆ ಪೂರಕವಾದ ಜಾಣ್ಮೆಯನ್ನೂ ತುಂಬಿಕೊಳ್ಳಬೇಕು. ಬಹುಪಾಲು ಸಂದರ್ಭಗಳಲ್ಲಿ ಕೃಷಿ ಕೆಲಸಕ್ಕಿಂತ ರೈತ, ತಾಲ್ಲೂಕು ಕಚೇರಿ, ಉಪಭಾಗಾಧಿಕಾರಿಗಳ ಕಚೇರಿ, ಎಪಿಎಂಸಿ, ಕೃಷಿ, ತೋಟಗಾರಿಕಾ ಇಲಾಖೆ, ಆರ್‌ಟಿಸಿ, ಮ್ಯುಟೇಶನ್‌….. ಈ ರೀತಿಯ ಓಡಾಟ, ಸರದಿಯಲ್ಲಿ ನಿಲ್ಲುವ ಕೆಲಸಕ್ಕೆ ವ್ಯಯವಾಗಿಬಿಡುತ್ತಾನೆ. 

ರೈತ ಪರ ಸಂಘಟನೆಗಳಿಗೆ ಕೆಲಸವಿದೆ!: ಹಲವು ಸಣ್ಣ ಪುಟ್ಟ ವಿಷಯಗಳು, ಮಾಹಿತಿಗಳು- ಬಹುಶಃ ಈ ಕ್ಷಣಕ್ಕೆ ಅವು ಸಹಾಯಕ ಎನ್ನಿಸದಿರಬಹುದು. ಆದರೆ ಒಂದಲ್ಲಾ ಒಂದು ಘಳಿಗೆಯಲ್ಲಿ ಇವು ಬೇಕಾಗುವುದು ಖಚಿತ. ಕೃಷಿ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಒಂದು ಉಚಿತ ದೂರವಾಣಿ ಸೌಲಭ್ಯವನ್ನು ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೆ ನಾವು 1800 425 3553 ಎಂಬ ಸಂಖ್ಯೆಗೆ ಕರೆ ಮಾಡಬಹುದು.

ರಾಜ್ಯ ಮಟ್ಟದಲ್ಲಿ ರೈತರ ದೂರು, ಸಲಹೆಗಳನ್ನು ಸ್ವೀಕರಿಸಲು ಹಾಗೂ ಸೂಕ್ತವಾದ ಪರಿಹಾರೋಪಾಯ ನೀಡಲು ಸ್ಥಾಪಿಸಲಾಗಿರುವ ರೈತ ಸಹಾಯವಾಣಿಯಿದು ಎಂದು ರಾಜ್ಯ ಕೃಷಿ ಇಲಾಖೆ ಹೇಳಿಕೊಂಡಿದೆ. ಕೃಷಿ ಪರಿಕರಗಳ ಲಭ್ಯತೆ, ಇಲಾಖಾ ಕಾರ್ಯಕ್ರಮಗಳು, ಸಸ್ಯ ಸಂರಕ್ಷಣಾ ಉಪಕರಣಗಳು ಮತ್ತು ಕ್ರಮಗಳು, ಮಣ್ಣು ಹಾಗೂ ನೀರಿನ ವಿಶ್ಲೇಷಣೆ, ಬೆಳೆ ವಿಮೆ, ಸಾವಯವ ಕೃಷಿ, ಕೃಷಿ ಸಂಬಂಧಿತ ಇತರ ವಿಚಾರಗಳನ್ನು ಈ ದೂರವಾಣಿ ಸಹಾಯದಿಂದ ಕೇಳಬಹುದು.

ಈ ಸಂಖ್ಯೆಗೆ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲ್‌ನಿಂದ ಕರೆ ಮಾಡಬಹುದು. ಇಷ್ಟು ಕೃಷಿ ಇಲಾಖೆಯ ಪ್ರಚಾರ. ಕೃಷಿಕ ಮಾಹಿತಿಗಾಗಿ ಈ ಮುನ್ನ 1551ಕ್ಕೆ ಕರೆ ಮಾಡಬಹುದು ಎಂಬ ಜಾಗೃತಿ ಮೂಡಿಸಲಾಗಿತ್ತು. ಇದು ಕೇಂದ್ರ ಸರ್ಕಾರದಿಂದ ರೂಪಿತವಾಗಿದ್ದು, ಇದರ ಸಮಯ ಬೆಳಗ್ಗೆ ಆರರಿಂದ ರಾತ್ರಿ ಹತ್ತು. ಇಲ್ಲಿ ಕೇವಲ ಬೇಸಾಯ, ಕೃಷಿ ತಂತ್ರ ಕುರಿತ ಮಾಹಿತಿ ಲಭ್ಯವಾದರೆ ರಾಜ್ಯ ಸರ್ಕಾರ ಆರಂಭಿಸಿದ ರೈತ ಸಹಾಯವಾಣಿಯಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳು,

ಯೋಜನೆಗಳ ಮಾಹಿತಿಯೂ ಗಿಟ್ಟುವುದರಿಂದ ರೈತರು ನೇರವಾಗಿ ಸ್ಥಳೀಯ ಕೃಷಿ ಇಲಾಖೆಯ ಕಚೇರಿಗೆ ಹೋಗಿ ಮಾಹಿತಿ ತಿಳಿಯಬೇಕಾದುದಿಲ್ಲ. ಒಂದು ಫೋನ್‌ ಕರೆ ಸಾಕು. ಆದರೆ ಈ ದೂರವಾಣಿಗೆ ಕರೆ ಮಾಡಿದರೆ ಈ ನಂಬರ್‌ ಅಸ್ತಿತ್ವದಲ್ಲಿಲ್ಲ ಎಂಬ ಮಾಹಿತಿ ಸಿಗುತ್ತದೆ. ಕೃಷಿಕರಿಗೆ ಅನುಕೂಲವಾಗುವ ಇಂತಹ ಸೌಲಭ್ಯಗಳ ಕುರಿತು, ಅದರ ವ್ಯವಸ್ಥಿತ ಚಾಲನೆಗೆ ರೈತ ಪರ ಸಂಘಟನೆಗಳು ಗಟ್ಟಿದನಿಯಲ್ಲಿ ಒತ್ತಾಯಿಸಬೇಕು. ಹತ್ತು ಹಲವು ಓಡಾಟ ಒಂದು ಫೋನ್‌ ಕರೆಯಿಂದ ತಪ್ಪುವುದಾದರೆ ಅಷ್ಟರಮಟ್ಟಿಗೆ ರೈತ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?

ಪ್ರತಿಯೊಂದು ಬೆಳೆಯನ್ನು ಕೃಷಿ ವ್ಯಾಪಾರ ಮಾರುಕಟ್ಟೆ – ಎಪಿಎಂಸಿಗೆ ತಂದು ಮಾರುವುದು ಸೂಕ್ತ. ಆದರೆ ಹೀಗೆ ಮಾಡಲು ರೈತರಿಗೆ ಹತ್ತಾರು ಸಮಸ್ಯೆ ಎಂದು ಮಾರುಕಟ್ಟೆಗೆ ಬೆಳೆಯನ್ನು ವಿಕ್ರಯಿಸಲು ತೆಗೆದುಕೊಂಡು ಹೋಗುವುದು? ಕೈ ಸಾಲ ಮಾಡಿದರಂತೂ ಮನೆಬಾಗಿಲಿನಲ್ಲಿ ಮಾರಲೇಬೇಕಾದ ಅನಿವಾರ್ಯತೆ. ಅಲ್ಲೂ ಆ ದಿನದ ಮಾರುಕಟ್ಟೆ ದರದ ಅರಿವಿರದೆ ಮಧ್ಯವರ್ತಿ ಹೇಳಿದ ಬೆಲೆಗೆ  ಬೆಲೆ ಮಾರಿ ಕೈ ಸುಟ್ಟುಕೊಳ್ಳುವುದಿದೆ.

ಖುದ್ದು ಮಾರುಕಟ್ಟೆಗೇ ಹೋಗಿ ಪೇಟೆಧಾರಣೆಯ ಮಾಹಿತಿ ಸಂಗ್ರಹಿಸುವುದು ಕಷ್ಟವಾದುದರಿಂದ ಇನ್ನೊಂದು ಫೋನ್‌ ಸೌಲಭ್ಯ ರೈತರ ನೆರವಿಗೆ ನಿಲ್ಲುತ್ತದೆ. 1800 425 1552ಕ್ಕೆ ಕರೆ ಮಾಡಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು. ಇದೂ ಉಚಿತ ವ್ಯವಸ್ಥೆ.  ಕರೆ ಮಾಡಿದಾತನಿಗೆ ನಯಾ ಪೈಸೆಯ ವೆಚ್ಚ ತಗಲುವುದಿಲ್ಲ. ನಿಮಗೆ ಗೊತ್ತಿರಲಿ, 1800ರಿಂದ ಆರಂಭವಾಗುವ ಎಲ್ಲ 11 ಅಂಕಿಗಳ ದೂರವಾಣಿ ಕರೆದಾತರಿಗೆ ಉಚಿತ.

ಕರೆ ಸ್ವೀಕರಿಸುವಾತ ಆ ವೆಚ್ಚವನ್ನು ಭರಿಸುತ್ತಾನೆ. ಇಂದು ಎಪಿಎಂಸಿಯ ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ಇಡೀ ರಾಜ್ಯದ ಬೆಳೆ ಧಾರಣೆ ಕೊಡುವುದಲ್ಲದೆ ಬೆಳೆಗಳ ದರದ ವಾರ್ಷಿಕ ವಿಶ್ಲೇಷಣೆ, ಮಾರುಕಟ್ಟೆಯ ಆವಕ ಜಾವಕಗಳ ಮಾಹಿತಿ ನೀಡುತ್ತದೆ. ವೆಬ್‌ ಲಿಂಕ್‌; www.krishimaratavahini.kar.nic.in ಲೋಪದೋಷಗಳಿದ್ದರೆ, ಕಡಿಮೆ ಪ್ರಮಾಣದಲ್ಲಿ ಪಡಿತರ ನೀಡುತ್ತಿದ್ದರೆ ಅಥವಾ ಹೆಚ್ಚು ಬೆಲೆ ವಸೂಲಿ ಮಾಡುತ್ತಿದ್ದರೆ,

ತೂಕದಲ್ಲಿ ವಂಚನೆ, ಪ್ರತಿ ತಿಂಗಳು ಸರಿಯಾದ ಸಮಯದಲ್ಲಿ ತರಿಸದಿದ್ದರೆ, ದಾಸ್ತಾನು ಮುಗಿದಿದೆ ಎಂದು ಒಂದು ವಾರದ ನಂತರ ಬಂದವರಿಗೆ ಪಡಿತರ ಪದಾರ್ಥ ಕೊಡದಿದ್ದರೆ ಈ ಸಂಖ್ಯೆಗೆ ಕರೆ ಮಾಡಿ ದೂರಬಹುದು. ದೂರು ನೀಡುವವರು ತಮ್ಮ ಹೆಸರು, ದೂರವಾಣಿ ಸಂಖ್ಯೆ, ವಾಸಸ್ಥಳ, ಯಾವ ನ್ಯಾಯಬೆಲೆ ಅಂಗಡಿಯ ವಿರುದ್ಧ ದೂರು ಎಂಬ ವಿವರವನ್ನು ಕರೆ ಮಾಡಿದಾಗ ನೀಡಬೇಕಾಗುತ್ತದೆ. ದೂರುದಾರ ಇಚ್ಛಿಸಿದಲ್ಲಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

ದೂರು ಸ್ವೀಕರಿಸಿದವರು ದೂರು ಸಂಖ್ಯೆಯನ್ನು ನೀಡಿರುತ್ತಾರೆ. ದೂರು ಕೊಟ್ಟ ಎರಡು ದಿನದ ನಂತರ ಅದೇ ನಂಬರ್‌ಗೆ ಕರೆ ಮಾಡಿ ಈ ದೂರುಸಂಖ್ಯೆಯನ್ನು ತಿಳಿಸಿದರೆ ತನಿಖೆ, ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸುತ್ತಾರೆ.  ಇದಕ್ಕೂ ತೃಪ್ತಿ ಸಿಗದಿದ್ದರೆ-ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಕೆಟಿಂಗ್‌ ಫೆಡರೇಶನ್‌ ಕಟ್ಟಡ, ಕನ್ನಿಂಗ್‌ ಹ್ಯಾಂ ರಸ್ತೆ, ಬೆಂಗಳೂರು 560052ಕ್ಕೆ ಲಿಖೀತ ದೂರು ಸಲ್ಲಿಸಬಹುದು.

ಆರ್‌ಟಿಸಿಗೂ ಕ್ಯೂ ಬೇಡ!: ದಾಖಲೆಗಳ ಕಾಲದಲ್ಲಿ ಒಂದು ಆರ್‌ಟಿಸಿ ಪಡೆಯಲು ದಿನವೊಪ್ಪತ್ತು ಕಾಯಬೇಕಾಗುತ್ತದೆ. ಅದಕ್ಕೆ ರಾಜ್ಯ ಸರ್ಕಾರ  landrecords.karnataka.gov.in ಎಂಬ ವೆಬ್‌ ಪುಟದಲ್ಲಿ ಆರ್‌ಟಿಸಿ ದೊರೆಯುವಂತೆ ಮಾಡಿದೆ. ಇಲ್ಲಿನ ಭೂಮಿ ತಂತ್ರಾಂಶದಲ್ಲಿ ನೋಂದಾವಣೆ ಅಥವಾ ಅತಿಥಿಯಾಗಿ ಪ್ರವೇಶಿಸಿ ನಮಗೆ ಬೇಕಾದ ಆರ್‌ಟಿಸಿ ಪಡೆಯಬಹುದು.

10 ರೂ.ಅನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಪಹಣಿಯ ಅಧಿಕೃತ ಮುದ್ರಣವನ್ನೂ ಮಾಡಿಕೊಳ್ಳಬಹುದು. ಜನವರಿ ಒಂದರಿಂದ ಜಾರಿಯಾಗಿದೆ ಎನ್ನಲಾಗುತ್ತಿದ್ದರೂ ಇಡೀ ವ್ಯವಸ್ಥೆ ಇನ್ನೂ ಪರಿಪಕ್ವವಾಗಿಲ್ಲ. ತಾಂತ್ರಿಕ ಅಡಚಣೆಗಳು ಹೇರಳವಾಗಿವೆ. ಆದರೆ ಮುಂದೆ ಸರಿಹೋದೀತು ಎಂಬ ಆಶಯವನ್ನಂತೂ ಇಟ್ಟುಕೊಳ್ಳಬಹುದು.

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.