ಕೈಯೊಡ್ಡಿ ಬದುಕುವ ಸ್ವಭಾವದವರಲ್ಲ ಬಣಜಿಗರು
Team Udayavani, Jan 22, 2018, 2:20 PM IST
ಮುದ್ದೇಬಿಹಾಳ: ಬಣಜಿಗರು ಯಾರಿಗೂ ಕೈಯೊಡ್ಡಿ ಬದುಕುವವರಲ್ಲ, ಸ್ವಾಭಿಮಾನ ನಮ್ಮ ರಕ್ತದಲ್ಲಿ ಹರಿದು ಬಂದಿದೆ. ಸಮಾವೇಶಗಳನ್ನು ನಡೆಸಿ ಸರ್ಕಾರದಿಂದ ಅನುದಾನ, ಮೀಸಲಾತಿ ಕೊಡಿಸಿ, ಕೆಟೆಗರಿಯಲ್ಲಿ ಸೇರಿಸಿ ಎಂದು ಬೇಡುವವರಲ್ಲ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲ ಭವನದಲ್ಲಿ ರವಿವಾರ, ಮುದ್ದೇಬಿಹಾಳ ನಗರ ಘಟಕದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಬಡವರಾಗಿರುವ ಕಟ್ಟಕಡೆಯ ಜನತೆಗೆ ಸೌಲಭ್ಯಗಳನ್ನು ಒದಗಿಸಿ, ಅವರನ್ನು ಮೇಲೆತ್ತುವ ಕೆಲಸ ಮಾಡೋಣ. ಬಣಜಿಗರು ರಾಜ್ಯದ ಸುಮಾರು ಎರಡು ಸಾವಿರ ಮಠಗಳನ್ನು ಕಟ್ಟಿ, ಪೋಷಿಸಿ ಬೆಳೆಸಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿದ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಡಾ| ಶಿವಬಸಪ್ಪ ಹೆಸರೂರ ಮಾತನಾಡಿ, ನಮ್ಮ ಜನ ತೆರೆಯ ಹಿಂದೆಯೇ ಕೆಲಸ ಮಾಡುತ್ತಾರೆ. ರಾಜಕೀಯ ಅಂದಾಕ್ಷಣ ಹಿಂದೆ ಸರಿಯುವುದು ಬೇಡ. ರಾಜಕೀಯವಾಗಿಯೂ ನಾವು ಗುರುತಿಸಿಕೊಳ್ಳುವ ಕೆಲಸ ಮಾಡಬೇಕು. ಮಹಿಳೆಯರು ಮನೆಯಲ್ಲೇ ಕೂಡದೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹಾಸನ ಜಿಲ್ಲೆ ಬಸವಾ ಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಆಶೀರ್ವಚನ ನೀಡಿ, ನಾವು ಪರಸ್ಪರರು ಅಪರಿಚಿತರಾಗಿ ಉಳಿಯದೇ ಗುರುತಿಸಿಕೊಳ್ಳಲು, ಸಂಘಟನೆಗಳನ್ನು ಮಾಡಬೇಕು. ನಮ್ಮ ಬೆಂಬಲ ಪಡೆದ ನಂತರ ನಮ್ಮನ್ನು ತಿರಸ್ಕರಿಸಿದ ರಾಜಕೀಯ ಜನರನ್ನೂ
ಪ್ರೀತಿಸುವ ಕೆಲಸ ಮಾಡೋಣ ಎಂದರು. ಬಣಜಿಗ ಬಂಧು ಮಾಸ ಪತ್ರಿಕೆ ಸಂಪಾದಕ ರುದ್ರಣ್ಣ ಹೊಸಕೇರಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತಪ್ಪ ನಾವದಗಿ, ಇಳಕಲ್ಲ ನಗರಸಭೆ ಆಯುಕ್ತ ಅರವಿಂದ ಜಮಖಂಡಿ, ಶಿವಲಿಂಗಪ್ಪ ಪಟ್ಟದಕಲ್ಲ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಸಬರದ, ಮುರಿಗೆಪ್ಪ ಸರಶೆಟ್ಟಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಢಗಿ, ಹಸಿರು
ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ ಗಡೇದ, ತಾಲೂಕಾಧ್ಯಕ್ಷ ಎಸ್.ಪಿ. ಸರಶೆಟ್ಟಿ, ಮುತ್ತು ಕಿಣಗಿ,
ವಿಜಯಕುಮಾರ ಧನಶ್ರೀ, ಬಾಲಚಂದ್ರ ಗದಗಿನ, ಗವಿಸಿದ್ದಪ್ಪ ಸಾಹುಕಾರ, ಚನ್ನಪ್ಪಣ್ಣ ಕಂಟಿ, ಸಂಗಪ್ಪ ಲಕ್ಷೆಟ್ಟಿ, ಅಡಿವೆಪ್ಪ ಕಡಿ, ಬಸವರಾಜ ಮೋಟಗಿ, ಜೆ.ಎ. ಚಿನಿವಾರ ವೇದಿಕೆಯಲ್ಲಿದ್ದರು. ನಗರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಭುರಾಜ ಕಲಬುರ್ಗಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಸಂಗಣ್ಣ ಕಂಚ್ಯಾಣಿ ಅಧಿಕಾರ ಹಸ್ತಾಂತರಿಸಿದರು. ಇದಕ್ಕೂ ಮೊದಲು ಬಸವರಾಜ ಸುಕಾಲಿ ಅವರ ನಿವಾಸದಿಂದ ಸ್ವಾಮೀಜಿಗಳನ್ನು ಬೈಕ್ ರ್ಯಾಲಿಯಲ್ಲಿ ಕರೆ ತರಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಹಾಂತಪ್ಪ ನಾವದಗಿ, ಮಹಾಬಲೇಶ ಗಡೇದ, ಅರವಿಂದ ಜಮಖಂಡಿ ಹಾಗೂ ನಿವೃತ್ತ ನೌಕರನ್ನು ಸನ್ಮಾನಿಸಲಾಯಿತು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಪ್ರಭು ಕಡಿ ಸ್ವಾಗತಿಸಿದರು. ರುದ್ರೇಶ ಕಿತ್ತೂರ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಸ್.ಚಳಗೇರಿ, ಮಹೇಶ ಕಿತ್ತೂರ ನಿರೂಪಿಸಿದರು. ಕಲ್ಪನಾ ದಡ್ಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.