ಫೆ. 17ರಂದು ನರಸಲಗಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮೇಳನ


Team Udayavani, Jan 22, 2018, 2:46 PM IST

vij-4.jpg

ಹೂವಿನಹಿಪ್ಪರಗಿ: ನರಸಲಗಿ ಗ್ರಾಮದಲ್ಲಿ ಏಳನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಅದ್ಧೂರಿಯಾಗಿ ಫೆ. 17ರಂದು ನಡೆಸಲು ನಾವೆಲ್ಲಾ ಸನ್ನದ್ಧರಾಗಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ , ಮುಖ್ಯಗುರು ರೇವಣಸಿದ್ದಪ್ಪ ಅಳ್ಳಗಿ ತಿಳಿಸಿದರು.

ನರಸಲಗಿ ಗ್ರಾಮದ ಪವಾಡಬಸವೇಶ್ವರ ಮಠದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಕಸಾಪ ಪದಾಧಿಕಾರಿಗಳ ಸರ್ವ ಸಮ್ಮತದಿಂದ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ. 17ರಂದು ಸಮ್ಮೇಳನ ನಡೆಯುವುದಾಗಿ ಸಭೆಯಲ್ಲಿ ಘೋಷಣೆ ಮಾಡಿ ಅವರು ಮಾತನಾಡಿದರು.
 
ಜಿಲ್ಲೆ ಅಲ್ಲದೇ ರಾಜ್ಯ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ಅನೇಕ ಕಡೆಗಳಿಂದ ಐದು ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಬರುವ ನಿರೀಕ್ಷೆಯಿದೆ. ಸಮ್ಮೇಳನ ಯಶಸ್ವಿಗೆ ಮುಖ್ಯವಾಗಿ ಪ್ರಸಾದ ಹಾಗೂ
ಕುಡಿಯುವ ನೀರಿನ ಕೊರತೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಕೆಲಸ ಬಹಳ ಮುಖ್ಯವಾಗಿದೆ. ಸಮಿತಿಯಲ್ಲಿರುವ ಮುಖಂಡರು ಶಿಸ್ತುಬದ್ಧವಾಗಿ ಜವಾಬ್ದಾರಿ ನೀಡಿದ ಕೆಲಸಗಳನ್ನು ಮಾಡಿ ಕನ್ನಡಾಂಬೆ ತೇರನ್ನು ಗ್ರಾಮದಲ್ಲಿ ಎಳೆಯಬೇಕಾಗಿದೆ ಎಂದು ಕರೆ ನೀಡಿದರು.

ಆಮಂತ್ರಣ ಪತ್ರಿಕೆ, ವೇದಿಕೆ, ಹಣಕಾಸು, ಪ್ರಚಾರ, ಆಹಾರ, ಧ್ವಜ ಪಾಲನೆ, ಮೆರವಣಿಗೆ, ಶಿಸ್ತುಪಾಲನೆ,ಅತಿಥಿ ವ್ಯವಸ್ಥೆ, ಜಾಹೀರಾತು, ಮೆರವಣಿಗೆ ನೀರು ಮತ್ತು ಸ್ವತ್ಛತೆ ಸೇರಿದಂತೆ 15ಕ್ಕೂ ಅಧಿಕ ಸಮಿತಿ ರಚಿಸಿ ಒಂದೊಂದು ಸಮಿತಿಯಲ್ಲಿ ಹತ್ತು ಜನ ಸದಸ್ಯರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಲಾಯಿತು. 

ಸ್ಥಳೀಯ ಗ್ರಾಪಂ ಸದಸ್ಯರಿಗೆ ಸಿಗಬೇಕಾಗಿದ್ದ ಒಂದು ಲಕ್ಷಕ್ಕಿಂತಲೂ ಅಧಿಕ ಗೌರವಧನ ಹಣ ಗ್ರಾಪಂನಲ್ಲಿ ಜಮೆ ಇದೆ. ಈ ಹಣವನ್ನು ಸರ್ವ ಸದಸ್ಯರು ಚರ್ಚಿಸಿ ಸ್ಮರಣ ಸಂಚಿಕೆಗೆ ವ್ಯಯಿಸಬೇಕಾಗಿದೆ ಎಂದು ದೇವೆಂದ್ರ ಗೋನಾಳ ಸಭೆಯ ಮುಂದಿಟ್ಟಾಗ ಸದಸ್ಯರು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿ ಸೇರಿದ್ದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಒಪ್ಪಿಗೆ ನೀಡಿದರು.

ಸಭೆಯಲ್ಲಿ ಶಾಂತಗೌಡ ಹೊಸಳ್ಳಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಗುರುರಾಜ ಕನ್ನೂರ, ತಾಲೂಕಾ ಜಾನಪದ ಸಾಹಿತ್ಯ ಪರಿಷತ್‌ ಅಧ್ಯಕ್ಷ ದೇವೆಂದ್ರ ಗೋನಾಳ, ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ದತ್ತಿ ಸಂಚಾಲಕ ಎಸ್‌.ಐ. ಮನಗೂಳಿ, ಪ್ರಗತಿಪರ ರೈತ ಗಿರಿಧರಗೌಡ ಪಾಟೀಲ, ಬಾಬು ವಾಡೇದ, ನಾಗೇಶ ನಾಗೂರ, ಕೋಶಾಧ್ಯಕ್ಷ ಎಸ್‌.ಬಿ. ಮುತ್ತಗಿ, ಕೆ.ಎಸ್‌. ಬಾಗೇವಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ವೈ. ಕೆ. ಪತ್ತಾರ, ರಮೇಶ ಹಾಲಿಹಾಳ, ಹನುಮಂತ ಹಾಲಿಹಾಳ, ಶ್ರೀಶೈಲಗೌಡ ಹೊಸಳ್ಳಿ, ಅಲ್ಲಾಭಕ್ಷ ಮಕಾನದಾರ, ಕರವೇ ಮುಖಂಡ ಮಹಾಂತೇಶ ಚಕ್ರವರ್ತಿ, ಮಹಾಂತಪ್ಪ ಹಾಲಿಹಾಳ, ಗ್ರಾಪಂ ಸದಸ್ಯರಾದ ನಾಗರಾಜ ಓದಿ, ಹಾಗೂ ಬಸನಗೌಡ ಬಿರಾದಾರ ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಯುವರಾಜ ಮಾದನಶೆಟ್ಟಿ ನಿರೂಪಿಸಿದರು. ದೇವೇಂದ್ರ ಗೋನಾಳ ವಂದಿಸಿದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.