ಸೆಲ್ವಿಗೆ ಫಸ್ಟ್‌ಲೇಡಿ ಪ್ರಶಸ್ತಿ
Team Udayavani, Jan 23, 2018, 6:05 AM IST
ಹೊಸದಿಲ್ಲಿ: ಸೆಲ್ವಿ, ದಕ್ಷಿಣ ಭಾರತದ ಪ್ರಥಮ ಟ್ಯಾಕ್ಸಿ ಚಾಲಕಿ. ಬೆಂಗಳೂರಿನಲ್ಲಿ ಇವರು ಟ್ಯಾಕ್ಸಿ ಚಾಲನೆ ಮಾಡಿ ಜೀವನ ನಡೆಸುತ್ತಿದ್ದಾರೆ. ದೇಶದ ಸಾಧಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನೀಡುವ “ಫಸ್ಟ್ ಲೇಡಿ’ ಪ್ರಶಸ್ತಿ ಪಡೆದ ಸಾಧಕಿಯರಲ್ಲಿ ಇವರೂ ಒಬ್ಬರು.
ತಾವು ಆಯ್ದುಕೊಂಡಿರುವ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕಿಯರಿಗೆ ಪ್ರತಿವರ್ಷ ನೀಡುವ “ಫಸ್ಟ್ ಲೇಡಿ’ ಪ್ರಶಸ್ತಿಯನ್ನು ಈ ಬಾರಿ 112 ಸಾಧಕಿಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಸಚಿವೆ ಮೇನಕಾ ಗಾಂಧಿ ಪ್ರದಾನ ಮಾಡಿದರು.
ಸೆಲ್ವಿ 14ನೇ ವಯಸ್ಸಿನಲ್ಲಿ ಮದುವೆಯಾದ ವರು. ಕೌಟುಂಬಿಕ ಕಿರುಕುಳದಿಂದ ಬೇಸತ್ತು ತಮ್ಮ 18ನೇ ವಯಸ್ಸಿಗೇ ಕುಟುಂಬ ತೊರೆದು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡವರು. ಈ ಪ್ರಶಸ್ತಿ ಪಡೆದ ಸೆಲ್ವಿ, “ಒಂದು ಹಣತೆಯು ಆರಂಭದಲ್ಲಿ ಸಣ್ಣದೆಂದು ಕಾಣಬಹುದು. ಅದನ್ನು ಎಲ್ಲರೂ ನಿರ್ಲಕ್ಷಿಸಬಹುದು. ಆದರೆ, ಅದೇ ಹಣತೆಯಿಂದ ಸಾವಿರಾರು ದೀಪಗಳು ಬೆಳಗಬಹುದು. ನಾನು ಪಡೆದ ಈ ಪ್ರಶಸ್ತಿ ಇತರ ಹುಡುಗಿಯರು ಮತ್ತು ಮಹಿಳೆಯರು ಸಾಮಾಜದಲ್ಲಿ ತಮ್ಮದೇ ಆತ ಗುರುತು ಮೂಡಿಸಲು ಉತ್ತೇಜನವಾಗಲಿದೆ’ ಎಂದಿದ್ದಾರೆ. ಕೆನಡಾದ ಚಿತ್ರ ತಯಾರಕಿ ಎಲಿಸಾ ಪಲೊಸ್ಕಿ ಸೆಲ್ವಿ ಜೀವನ ಆಧರಿಸಿ “ಡ್ರೈವಿಂಗ್ ವಿದ್ ಸೆಲ್ವಿ’ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
MUST WATCH
ಹೊಸ ಸೇರ್ಪಡೆ
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.