“ಲಿಂಗಾಯತ ಧರ್ಮ’ಕ್ಕೆ ಹೊಸ ಸಂಘ!
Team Udayavani, Jan 23, 2018, 6:05 AM IST
ಬೆಂಗಳೂರು: ವೀರಶೈವ ಮಹಾಸಭೆಗೆ ಪರ್ಯಾಯವಾಗಿ ಲಿಂಗಾಯತ ಹೋರಾಟಗಾರರು ಪ್ರತ್ಯೇಕ ಸಂಘ ಸ್ಥಾಪಿಸಲು ನಿರ್ಧರಿಸಿದ್ದಾರೆ. ಈ ಕುರಿತು ಚರ್ಚಿಸಲು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವೇದಿಕೆಯಿಂದ, ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ದಿನವಿಡೀ ಸಭೆ ನಡೆಯಲಿದೆ.
ಪ್ರಮುಖವಾಗಿ ಲಿಂಗಾಯತರ ವಿಶ್ವ ಮಟ್ಟದ ಸಂಘಟನೆ ಸ್ಥಾಪನೆ ಕುರಿತು ಚರ್ಚೆ ನಡೆಯಲಿದ್ದು, ಈಗಾಗಲೇ ವಿಶ್ವ ಲಿಂಗಾಯತ ಪರಿಷತ್ ಎಂದು ನಾಮಕರಣ ಮಾಡಲು ಪ್ರಸ್ತಾಪ ಬಂದಿದ್ದರೂ, ಯಾವ ಹೆಸರಿನಲ್ಲಿ ಸಂಘಟನೆ ಮಾಡಬೇಕೆನ್ನುವ ಕುರಿತಂತೆ ಚರ್ಚೆ ನಡೆಯಲಿದೆ. ಲಿಂಗಾಯತರ ಹೆಸರಿನಲ್ಲಿ ಈಗಾಗಲೇ ಅನೇಕ ಸಂಘಟನೆಗಳು ನೋಂದಣಿ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ ಕಾನೂನು ತೊಡಕು ಉಂಟಾಗದಂತೆ ನೋಡಿಕೊಳ್ಳಲು ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಹೋರಾಟ ನಡೆಸುತ್ತಿರುವ ಲಿಂಗಾಯತ ಹೋರಾಟಗಾರರು ಹಾಗೂ ವೀರಶೈವ ಮಹಾಸಭೆಯ ನಡುವೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಲಿಂಗಾಯತ ಹೋರಾಟಗಾರರು ಪರ್ಯಾಯ ಸಂಘ ರಚಿಸಿ, ಆ ಮೂಲಕ ತಮ್ಮ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಬಸವ ಸೇನೆ ಯುವ ಘಟಕ: ಲಿಂಗಾಯತ ಹೋರಾಟಗಾರರು ಸಂಘಟನೆಗೆ ಯುವಕರನ್ನು ಸೆಳೆಯಲು ರಚಿಸಿಕೊಂಡಿರುವ ಬಸವ ಸೇನೆಯನ್ನು ಲಿಂಗಾಯತರ ಪರ್ಯಾಯ ಸಂಘಟನೆಯ ಯುವ ಘಟಕವಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ.
ಇಂದು ರಾಜೀನಾಮೆ: ಲಿಂಗಾಯತ ಪ್ರತ್ಯೇಕ ಹೋರಾಟಗಾರರಲ್ಲಿ ಸಚಿವರಾದ ಎಂ.ಬಿ ಪಾಟೀಲ್, ವಿನಯ ಕುಲಕರ್ಣಿ, ಡಾ. ಶರಣ ಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸೇರಿದಂತೆ ಅನೇಕರು ವೀರಶೈವ ಮಹಾಸಭೆಯ ಆಜೀವ ಸದಸ್ಯತ್ವ ಹೊಂದಿದ್ದು, ಮಹಾಸಭೆಯ ಮಹಾ ಪೋಷಕರಾಗಿದ್ದಾರೆ. ಮಹಾಸಭೆಗೆ ಪರ್ಯಾಯ ಸಂಘ ಕಟ್ಟುವ ನಿರ್ಧಾರ ಕೈಗೊಂಡಿರುವುದರಿಂದ ವೀರಶೈವ ಮಹಾಸಭೆಯ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ಸಾಮೂಹಿಕ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಸಭೆಯಲ್ಲಿ ವಿವಿಧ ಮಠಾಧೀಶರು ಹಾಗೂ ಲಿಂಗಾಯತ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ನಾವು ಪ್ರತ್ಯೇಕ ಧರ್ಮಕ್ಕಾಗಿ ವೀರಶೈವ ಮಹಾಸಭೆಯೊಂದಿಗೆ ಸೇರಿಕೊಂಡೇ ಮುಂದುವರಿಯಲು ಪ್ರಯತ್ನ ಮಾಡಿದೆವು. ಆದರೆ, ಅವರು ನಮ್ಮೊಂದಿಗೆ ಬರಲು ಸಿದ್ದರಿಲ್ಲ. ಅನಿವಾರ್ಯವಾಗಿ ಹೊಸ ಸಂಘದ ಸ್ಥಾಪನೆ ಮಾಡಬೇಕಿದೆ. ಸಂಘಟನೆ ಹೆಸರು, ರೂಪುರೇಷೆ ಹೇಗಿರಬೇಕು ಎಂದು ಮಂಗಳವಾರ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ.
– ಬಸವರಾಜ್ ಹೊರಟ್ಟಿ, ಪ್ರತ್ಯೇಕ ಲಿಂಗಾಯತ ಧರ್ಮ ವೇದಿಕೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.