ದಾವೋಸ್‌ನಲ್ಲೀಗ ಚಾಯ್ ಪೆ ಚರ್ಚಾ
Team Udayavani, Jan 23, 2018, 6:50 AM IST
ದಾವೋಸ್: ಸ್ವಿಟ್ಸರ್ಲೆಂಡ್‌ನ ದಾವೋಸ್‌ನಲ್ಲಿ ಆರಂಭವಾಗಿರುವ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಎಲ್ಲೆಲ್ಲೂ ಭಾರತದ ಪ್ರತಿಬಿಂಬಿಸುತ್ತಿದೆ. ಸಮ್ಮೇಳನದ ಸುತ್ತಲಿನ ಪ್ರದೇಶಗಳಲ್ಲಿ ಭಾರಿ ಗಾತ್ರದ ಕಟೌಟ್‌ಗಳನ್ನು ಪ್ರದರ್ಶಿಸಲಾಗಿದ್ದು, ಸಮ್ಮೇಳನಕ್ಕೆ ತೆರಳುವ ಬಸ್‌ಗಳ ಮೇಲೂ ಭಾರತದ ರಾರಾಜಿಸುತ್ತಿದೆ. ಭಾರತದ ತಿಂಡಿ ತಿನಿಸುಗಳಂತೂ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಆಲ್ಪ್Õ ಪರ್ವತ ಶ್ರೇಣಿಯ ಸಮೀಪವಿರುವ ಈ ನಗರದಲ್ಲಿ ತಾಪಮಾನ ಮೈನಸ್ 30 ಡಿಗ್ರಿಗೆ ಇಳಿದಿದ್ದು, ವಿವಿಧ ದೇಶಗಳ ಗಣ್ಯರು ಬೆಚ್ಚಗಾಗಲು ಚಹಾ ಹಾಗೂ ಪಕೋಡಾಗೆ ಮೊರೆ ಹೋಗಿದ್ದಾರೆ. ಸಮ್ಮೇಳನದಲ್ಲಿ ಚಹಾ, ಪಕೋಡಾ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಭಾರತ ಸರಕಾರ ಇಲ್ಲಿ ಪ್ರತ್ಯೇಕ ಲೌಂಜ್ ನಿರ್ಮಿಸಿದ್ದು, ಆಂಧ್ರ ಹಾಗೂ ಮಹಾರಾಷ್ಟ್ರ ಸರಕಾರ ಹಾಗೂ ಇತರ ಭಾರತೀಯ ಕಂಪೆನಿಗಳು ಪ್ರತ್ಯೇಕ ಕೌಂಟರ್‌ಗಳೊಂದಿಗೆ ಗಣ್ಯರನ್ನು ಆಕರ್ಷಿಸುತ್ತಿವೆ.
ಭಾರತ ಆಯೋಜಿಸಿದ್ದ ಔತಣಕೂಟದಲ್ಲಿ 40ಕ್ಕೂ ಹೆಚ್ಚು ಸಿಇಒಗಳು ಭಾಗವಹಿಸಿದ್ದಾರೆ. ಸಮಾರಂಭ ಆರಂಭವಾಗುತ್ತಿದ್ದಂತೆಯೇ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕ್ರಿಸ್ಟಲ್ ಅವಾರ್ಡ್ಸ್ ನೀಡಿ ಪುರಸ್ಕರಿಸಲಾಯಿತು.
ಭಾರತ ಮುತ್ಸದ್ಧಿಯ ಪಾತ್ರ ವಹಿಸಬೇಕು!: ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತ ವ್ಯಾಪಾರಿಯಂತೆ ತನ್ನನ್ನು ಬಿಂಬಿಸಿಕೊಳ್ಳುವುದರ ಬದಲಿಗೆ ಮುತ್ಸದ್ಧಿಯಂತೆ ಪ್ರತಿಬಿಂಬಿಸಬೇಕು. ಅಮೆರಿಕ ಈ ಬಾರಿ ದೇಶೀಯ ಮತ್ತು ರಕ್ಷಣಾತ್ಮಕ ನಿಲುವು ಹೊಂದಿರುತ್ತದೆ. ಹೀಗಾಗಿ ಭಾರತ ಧೀಮಂತ ವ್ಯಕ್ತಿತ್ವವನ್ನು ಪ್ರದರ್ಶಿಸಬೇಕು ಎಂದು ಭಾರತದ ಉದ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮಗ್ರ ಪ್ರಗತಿಯಲ್ಲಿ ಭಾರತಕ್ಕೆ 62ನೇ ಸ್ಥಾನ: ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಸಮಗ್ರ ಪ್ರಗತಿಯ ಸೂಚ್ಯಂಕದಲ್ಲಿ ಭಾರತ 62ನೇ ಸ್ಥಾನ ಪಡೆದಿದೆ. 79 ರಾಷ್ಟ್ರಗಳ ಈ ಪಟ್ಟಿಯಲ್ಲಿ ಚೀನ 26ನೇ ಹಾಗೂ ಪಾಕಿಸ್ಥಾನ 47ನೇ ಸ್ಥಾನ ಪಡೆದಿದ್ದು ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ. ಆದರೆ ಮುಂದಿನ ಐದು ವರ್ಷಗಳಲ್ಲಿ ಸಮಗ್ರ ಪ್ರಗತಿ ನಿರೀಕ್ಷೆಯ ವಿಭಾಗದಲ್ಲಿ ಭಾರತ ಪ್ರಮುಖ ಹತ್ತು ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇನ್ನೊಂದೆಡೆ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದ ವೇಳೆಯೇ ವಿತ್ತ ವಿಶ್ಲೇಷಣೆ ಸಂಸ್ಥೆ ಆಕ್ಸ್‌ಫಾಮ್ ಆರ್ಥಿಕ ಅಸಮಾನತೆ ವರದಿ ನೀಡಿದ್ದು, ವಿಶ್ವದ ಶೇ. 82ರಷ್ಟು ಆದಾಯವನ್ನು ಶೇ. 1ರಷ್ಟು ಜನರ ಜೇಬು ಸೇರುತ್ತಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.