ಬೆಂಗ್ಳೂರಿನ ಸ್ನೇಹ ಸನ್ಯಾಸಿನಿ
Team Udayavani, Jan 24, 2018, 6:40 AM IST
ಮುಂಬೈ: ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ದೊಡ್ಡ ಬ್ಯಾಂಕ್ ಬ್ಯಾಲೆನ್ಸ್, ಐಶಾರಾಮಿ ಜೀವನ… ಇಂಥದ್ದೊಂದು ವೈಭವೋಪೇತ ಬಾಳ್ವೆ ಮಾಡುವುದು ಇಂದಿನ ಲಕ್ಷಾಂತರ ಯುವ ಜನರ ಕನಸು. ಆದರೆ, ವಿಚಿತ್ರವೆಂದರೆ, ಕೆಲವೊಮ್ಮೆ ಕೆಲವರಿಗೆ ಇಂಥ ಜೀವನ ಬೇಡ ಎನ್ನಿಸಿ, ಸನ್ಯಾಸತ್ವದ ಕಡೆಗೆ ವಾಲುತ್ತಾರೆ. ಇಂಥವರ ಸಾಲಿಗೆ ಬೆಂಗಳೂರಿನ ಸ್ನೇಹಾ ಕಟಾರಿಯಾ ಸೇರ್ಪಡೆಗೊಂಡಿದ್ದಾರೆ.
ಅಮೆರಿಕ ಮೂಲದ ಗೋಲ್ಡ್‌ಮನ್ ಸ್ಯಾಚ್‌ನಲ್ಲಿ ಉದ್ಯೋಗದಲ್ಲಿದ್ದು ಉತ್ತಮ ವೇತನ, ವೈಭವಯುತ ಜೀವನವಿದ್ದರೂ ಮಂಗಳವಾರ ಜೈನ ಸಾಧ್ವಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರ ಹೆಸರೀಗ ಸಾಧ್ವಿಜಿ ದಕ್ಷನಿಧಿ ಶ್ರೀಜಿ. ಮಂಗಳವಾರ, ಮುಂಬೈನಲ್ಲಿ ನಡೆದ ಚಿಕೂವಾಡಿಯಲ್ಲಿ ಸ್ಥಳೀಯ ಜೈನ ಸಮುದಾಯ ಆಯೋಜಿಸಿದ್ದ “ವಿಜಯ ಪ್ರಶಾಂತ್ ಉತ್ಸವ್’ನಲ್ಲಿ ಇವರು ಸನ್ಯಾಸತ್ವ ಸ್ವೀಕರಿಸಿದರು.
ಇದೇ ಸಮಾರಂಭದಲ್ಲಿ, ವೆಬ್ ಡಿಸೈನರ್ ಆಗಿದ್ದ ಮುಳಂದ್‌ನ ನರ್ವೋದಯ ನಗರದ ಪಾರೇಖ್ ಶಾ , ವಿಜ್ಞಾನ ವಿದ್ಯಾರ್ಥಿನಿ ವಿರಾಳ್, ಕಾನೂನು ವಿದ್ಯಾರ್ಥಿನಿ ದ್ರಾಷ್ಠಿ ದೆಧಿಯಾ ಸೇರಿ ಹಲವು ಯುವತಿಯರು, ಪುರುಷರು ಸನ್ಯಾಸತ್ವ ಸ್ವೀಕರಿಸಿದರು.
ವಿಶೇಷ ಮೆರವಣಿಗೆ
ಸನ್ಯಾಸತ್ವ ಪಡೆದ ಎಲ್ಲರನ್ನು ಬಿಕ್ಕೂವಾಡಿಯ ಬೊರಿವಿಲಿ ರಸ್ತೆಯಲ್ಲಿ ವೈಭವೋಪೇತ ರಥಗಳಲ್ಲಿ ಮೆರವಣಿಗೆ ಮಾಡಿದ್ದು ಆಕರ್ಷಣೀಯವಾಗಿತ್ತು. ದೀಕ್ಷೆ ಪಡೆಯುವ ಪ್ರತಿಯೊಬ್ಬರೂ ಒಂದೊಂದು ರಥದಲ್ಲಿ ನಿಂತು ತಮ್ಮಲ್ಲಿದ್ದ ಅಮೂಲ್ಯ, ಬೆಲೆಬಾಳುವ ವಸ್ತುಗಳನ್ನು ಮೆರವಣಿಗೆ ನೋಡಲು ಬಂದಿದ್ದ ಜನರ ಕಡೆಗೆ ಎಸೆಯುತ್ತಾ ಮುನ್ನಡೆದು, ಆನಂತರ ದೀಕ್ಷೆ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.