ವಧುಗಳ ಕನ್ಯತ್ವ ಪರೀಕ್ಷೆ ವಿರೋಧಿಸಿದ್ದಕ್ಕೆ ಥಳಿತ
Team Udayavani, Jan 24, 2018, 6:15 AM IST
ಪುಣೆ: ಮಹಿಳೆಯರ ವಿರುದ್ಧದ ಅನಿಷ್ಟ ಪದ್ಧತಿಯೊಂದರ ವಿರುದ್ಧ ಧ್ವನಿಯೆತ್ತಿದ ಮೂವರು ಯುವಕರಿಗೆ ಅವರದ್ದೇ ಸಮುದಾಯದ ಜನ ಥಳಿಸಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿಯಲ್ಲಿ ನಡೆದಿದೆ.
ಮದುವೆ ದಿನದ ರಾತ್ರಿಯಂದು ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿ ಕಂಜರ್‌ಭಾತ್ ಸಮುದಾಯದಲ್ಲಿ ಜಾರಿಯಲ್ಲಿದೆ. ಈ ಕೀಳು ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಇದೇ ಸಮುದಾಯದ ಯುವಕರು “ಸ್ಟಾಪ್ ದ ವರ್ಜಿನಿಟಿ ರಿಚುವಲ್’ ಎಂಬ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದರು. ಇದು ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗ್ತಿತು. ಭಾನುವಾರ ರಾತ್ರಿ ತಮ್ಮ ಸಂಬಂಧಿಯೊಬ್ಬರ ಮದುವೆಗೆಂದು ಈ ಯುವಕರು ತೆರಳಿದ್ದರು. ಅವರನ್ನು ನೋಡಿದೊಡನೆ ಸುಮಾರು 40 ಜನರ ಗುಂಪು ತೀವ್ರ ಹಲ್ಲೆ ನಡೆಸಿದೆ. ಜತೆಗೆ, ಬೆದರಿಕೆಯನ್ನೂ ಹಾಕಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸಮುದಾಯದ ಅನಿಷ್ಟ ಪದ್ಧತಿಯ ವಿರುದ್ಧ ಈ ಹಿಂದೆಯೂ ಯುವಕರು ಪೊಲೀಸರಿಗೆ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.