ಕನ್ನಡದ ಜಾಗತೀಕರಣ, ತಂತ್ರಜ್ಞಾನ ದೇಶೀಕರಣ
Team Udayavani, Jan 24, 2018, 11:36 AM IST
ಸುರತ್ಕಲ್ : ಕನ್ನಡದ ಜಾಗತೀಕರಣದ ನಡುವೆ ಆಧುನಿಕ ತಂತ್ರಜ್ಞಾನದ ದೇಶೀಕರಣ ಆಗುತ್ತಿರು ವುದರಿಂದ ಭಾಷೆಯ ತಲ್ಲಣ ನಡೆಯುತ್ತಿದೆ. ತಂತ್ರ ಜ್ಞಾನದ ಬಳಕೆಯಲ್ಲಿ ಯೂನಿಕೋಡ್ ಸಹಿತ ಸರಳ ಭಾಷೆ ಬಳಕೆಯಾಗುತ್ತಿರುವುದು ಸ್ವಾಗತಾರ್ಹ ಎಂದು ಹಳೆಯಂಗಡಿ ನಾರಾಯಣ ಸನಿಲ್ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕಿ ಜ್ಯೋತಿ ಚೇಳಾಯಿರು ಹೇಳಿದರು.
ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಜ. 23ರಂದು ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ ವಿಚಾರ ಗೋಷ್ಠಿಯಲ್ಲಿ ಅವರು ಕನ್ನಡ ಸಾಹಿತ್ಯ ದಶಕದ ಸಂಕಥನ ಎಂಬ ವಿಷಯವನ್ನು ಮಂಡಿಸಿದರು.
ಸಾಹಿತ್ಯ ಶಾಸ್ತ್ರೀಯವಾಗಿಯೇ ಉಳಿದಲ್ಲ, ಪರಿಸರದ ಪ್ರಕೃತಿ ಸೌಂದರ್ಯದ ವರ್ಣನೆಯೇ ಸಾಹಿತ್ಯಕ್ಕೆ ಸೀಮಿತವಲ್ಲ,
ವಾಸ್ತವದ ನೆಲೆಗಟ್ಟಿನಲ್ಲಿ ವಿಸ್ತರಣೆಯಾಗಿದೆ. ಪ್ರಚಲಿತ ವಿದ್ಯನ್ಮಾನಗಳ ವಿಚಾರ ಮಂಡನೆಯು ನಡೆದಿದೆ. ಸಾಹಿತ್ಯ ಎಂದಿಗೂ ಸಂಭ್ರಮವಲ್ಲ, ಬದಲಾಗಿ ದಾಖಲೀಕರಣದ ಮೂಲವಾಗಿ ಹಾಗೂ ಕಲೆಯಿಂದ ಉದ್ಯಮದವರೆಗೂ ಬೆಳೆದಿದೆ, ಕನ್ನಡದೊಂದಿಗೆ ಕರಾವಳಿಯ ಬಹುಭಾಷೆಯ ಬೆಸುಗೆಯಲ್ಲಿ ಸಾಹಿತ್ಯವು ಅರಳಿದೆ ಎಂದರು. ಸಮ್ಮೇಳನದ ಅಧ್ಯಕ್ಷರಾದ ಪ್ರೊ| ಎಚ್. ರಮೇಶ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು.
ಮೌಲ್ಯಕ್ಕೆ ಬೆಲೆಯಿಲ್ಲ
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ| ಯೋಗೀಶ್ ಕೈರೋಡಿ ಅವರು ಆಧುನೀಕರಣದ ಪ್ರಕ್ರಿಯೆ ಮತ್ತು ಬದುಕು ಎಂಬ ವಿಷಯವನ್ನು ಮಂಡಿಸಿ, ಪ್ರಕೃತಿಯಂತೆ ಸ್ವಾಭಾವಿಕವಾಗಿ ಆಧುನಿಕ ಬೌದ್ಧಿಕ ವಿಷಯಕ್ಕೆ ಮಿತಿಯಿಲ್ಲ, ಅಸಹನೆ, ಟೀಕೆ, ಋಣಾತ್ಮಕ ಚಿಂತನೆಗೆ ಮನ್ನಣೆ ನೀಡುವ ನಾವು, ಯಾಂತ್ರಿಕ ಯುಗದಲ್ಲಿ ಕಳೆದ 20 ವರ್ಷಗಳಲ್ಲಿನ ಅಂತರ ನಮ್ಮನ್ನು ಬಹುಬೇಗ ಬೆಳೆಸಿದೆ. ಮೌಲ್ಯಕ್ಕೆ ಬೆಲೆಯಿಲ್ಲವಾಗಿದೆ. ಮಾರುಕಟ್ಟೆಯ ದೃಷ್ಟಿಯಲ್ಲಿ ನಮ್ಮನ್ನು ಬೆಳೆಸಿಕೊಳ್ಳುತ್ತಿದ್ದೇವೆ, ವಸ್ತುಗಳ ವ್ಯಾಮೋಹ ಹಾಗೂ ಆರ್ಥಿಕ ಶಕ್ತಿಯ ಮರುಪಾವತಿಗಾಗಿಯೇ ಜೀವನವನ್ನು ಮೀಸಲಿಡುತ್ತಿದ್ದೇವೆ. ಬದುಕು ಸ್ಪರ್ಧಾತ್ಮಕವಾಗಿ ರಚನೆಯಾಗುತ್ತಿದೆ ಎಂದು ಹೇಳಿದರು. ಅರುಣಾ ಕುಮಾರಿ ನಾಗರಾಜ್ ಸ್ವಾಗತಿಸಿ, ಮೋಲಿ ಮಿರಾಂದ ವಂದಿಸಿದರು, ರಘು ಇಡ್ಕಿದು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.