ಎ ಆ್ಯಂಡ್ ಜೆ ಹೆಲ್ತ್ ಕೇರ್: ಆಯುರ್ವೇದ ಸೇವೆಯಲ್ಲಿ ರಜತ ವರ್ಷ
Team Udayavani, Jan 24, 2018, 11:57 AM IST
ಬೆಂಗಳೂರು: ಭಾರತದಲ್ಲೇ ಗರಿಷ್ಠ ಪ್ರಮಾಣದ ಆಯುರ್ವೇದ ಉತ್ಪನ್ನಗಳ ಪ್ರಖ್ಯಾತ ಮತ್ತು ಪ್ರತಿಷ್ಠಿತ ಬ್ರಾಂಡ್‌ಗಳ ವಿತರಕರೆಂದೇ ಖ್ಯಾತರಾದ ಬೆಂಗಳೂರಿನ ಎ ಆ್ಯಂಡ್ ಜೆ ಹೆಲ್ತ್ ಕೇರ್ ಸಂಸ್ಥೆಯ ರಜತ ವರ್ಷಾಚರಣೆಯ ಸಂಭ್ರಮ ಜ. 28ರಂದು ನಗರದ ಹೊರವಲಯ ಸರ್ಜಾಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.
ಸಂಸ್ಥೆಯ ರೂವಾರಿ ಮತ್ತು ಆಡಳಿತ ನಿರ್ದೇಶಕ ಸಿ. ಆರ್. ಜೋಶಿ ಅವರು ಕೇರಳದ ಶಂಕರ ಫಾರ್ಮಸಿಯ ದಿ.ಡಾ. ಕೆ.ಎಸ್. ಗಂಗಾಧರನ್ ಅವರ ಮಾರ್ಗದರ್ಶನದಲ್ಲಿ ಗ್ಯಾಸ್ಟ್ರಿಕ್‌ಗೆ ಪರಿಣಾಮಕಾರಿ ಔಷಧವಾದ ಅಲ್ಸೆಟ್‌ಅನ್ನು ಪ್ರಥಮವಾಗಿ ಮಂಗಳೂರಿನ ಮಾರುಕಟ್ಟೆಗೆ ಪರಿಚಯಿಸಿದರು. ಆಯುರ್ವೇದ ವಿತರಕ ಸಂಸ್ಥೆ ವಿವೇಕ್ ಟ್ರೇಡರ್ನ ಮಾಲಿಕ ದಿ. ಮಂಗಲ್ಪಾಡಿ ನಾಮದೇವ ಶೆಣೈ ಅವರ ಸಹಕಾರದಿಂದ ಮುಂದುವರಿಯಿತು.
ಬಳಿಕ ಆಯುರ್ವೇದ ಪರಂಪರೆಯ ಶಂಕರ ಫಾರ್ಮಸಿಯವರ ಆಯುರ್ವೇದ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಪರಿಚಯಿಸಿದರು. ಇವರ ಅಮೃತ ಬಿಂದು ಮತ್ತು ಸಿರಪ್ ಅಸಿಡಿಟಿ ಮತ್ತು ಹೊಟ್ಟೆನೋವು ಹಾಗೂ ಉದರ ಸಂಬಂಧಿ ಇತರ ಕಾಯಿಲೆಗಳಿಗೆ ರಾಮಬಾಣವಾಗಿದೆ. ಈ ವಿತರಕ ಸಂಸ್ಥೆಯು ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲೂ ಈ ಆಯುರ್ವೇದ ಉತ್ಪನ್ನಗಳನ್ನು ಪರಿಚಯಿಸಿದೆ. ಇದೀಗ 25 ವರ್ಷಗಳನ್ನು ಪೂರ್ಣಗೊಳಿಸಿದೆ.
ಆಯುರ್ವೇದ ಸಿದ್ಧಿಪೀಠಂನ ಮಹರ್ಷಿ ಡಾ. ಆನಂದ ಗುರೂಜಿ, ಆರೋಗ್ಯ ಸಚಿವ ಕೆ. ಆರ್. ರಮೇಶ್ ಕುಮಾರ್, ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬೆಳ್ಳಂದೂರು ವಾರ್ಡಿನ ಕಾರ್ಪೋರೇಟರ್ ಆಶಾ ಸುರೇಶ್, ಜಿಗಣಿಯ ಕೌನ್ಸಿಲರ್ ಎ. ಕೃಷ್ಣ ರೆಡ್ಡಿ, ಆಯುರ್ವೇದ ಔಷಧ ತಯಾರಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಡಿ. ರಾಮನಾಥನ್ ಇತರರು ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.