ಸಿಎಂ ಪಾಂಡವ-ಕೌರವ ಹೇಳಿಕೆ ಶತಮಾನದ ಹಾಸ್ಯ
Team Udayavani, Jan 24, 2018, 12:55 PM IST
ತಿ.ನರಸೀಪುರ: ಮುಖ್ಯಮಂತ್ರಿಯಾಗಿ ಹೆಂಗಸರಿಗೆ ಹರಕಲು ಸೀರೆ, ಮಕ್ಕಳಿಗೆ ಮುರುಕಲು ಸೈಕಲ್ ಕೊಟ್ಟ ಯಡಿಯೂರಪ್ಪ ಅನ್ನುತ್ತಾ ಕಾಂಗ್ರೆಸ್ಸಿಗರು ಪಾಂಡವರು, ಬಿಜೆಪಿಯವರನ್ನು ಕೌರವರಿಗೆ ಹೋಲಿಸುವ ಸಿಎಂ ಸಿದ್ದರಾಮಯ್ಯ ಮಾತು ಶತಮಾಶನ ಹಾಸ್ಯ, ಸಿದ್ದರಾಮಯ್ಯ ಸಿದ್ದರಾಮ ಅಲ್ಲ ಸಿದ್ದರಾವಣ ಅಂತ ಹೆಸರಿಟ್ಟುಕೊಳ್ಳಬೇಕಿತ್ತು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ ಸಮಾವೇಶ ಉದ್ಘಾಟಿಸಿ ಸನ್ಮಾನ ಹಾಗೂ ವಿವಿಧ ಸಮುದಾಯಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮ ನಾನು ಅಂತ ಹೇಳಿಕೊಳ್ಳುತ್ತಿರಾ.
ಆದರೆ, ನೀವು ಸಿದ್ದರಾವಣ ಎಂದು ಹೆಸರಿಟ್ಟುಕೊಳ್ಳಬೇಕಿತ್ತು. ಅವಧಿ ಮುಗಿಯುತ್ತಿರುವ ಕಾಲದಲ್ಲಿರುವ ಸಿಎಂ ಸಿದ್ದರಾಮಯ್ಯ ಎಲುಬಿಲ್ಲದ ನಾಲಿಗೆಯಲ್ಲಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಬಾಯಿಗೆ ಬಂದಂತೆ ಮಾತನ್ನಾಡುತ್ತಿದ್ದಾರೆ. ರಾಮ ರಾಜ್ಯವನ್ನು ಕಟ್ಟುವ ದೇಶಭಕ್ತ ಬಿಜೆಪಿಗರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಟೀಕಿಸಿದರು.
ನೀರಾವರಿ ಯೋಜನೆ ಪೂರ್ಣಕ್ಕೆ ಅನುದಾನ: ನಾನು ಮುಖ್ಯಮಂತ್ರಿಯಾಗಿ ಕೊಟ್ಟ ಸೀರೆಗಳ ಬಗ್ಗೆ ಯಾವೊಬ್ಬ ತಾಯಿಯೂ ಹರಕಲು ಸೀರೆ ಅಂತ ಹೇಳಿಲ್ಲ. 18 ಲಕ್ಷ ಹೆಣ್ಣು ಮಕ್ಕಳ ಸ್ವಾಭಿಮಾನವನ್ನು ಕಾಪಾಡಲು ಭಾಗ್ಯಲಕ್ಷ್ಮೀ ಯೋಜನೆ ಬಾಂಡ್ ನೀಡಿದ್ದೇನೆ. ಕೊಟ್ಟಂತಹ ಸೈಕಲ್‌ಗಳನ್ನು ಇಂದಿನ ಅಣ್ಣ ತಮ್ಮ, ಅಕ್ಕತಂಗಿಯರು ಬಳಸುತ್ತಿದ್ದಾರೆ.
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚಿಸಲು 150 ಮಿಷನ್ ಗುರಿಯನ್ನು ಮುಟ್ಟುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾಲಿಗಾದರೂ ಬಿದ್ದು ಲಕ್ಷ ಕೋಟಿ ಅನುದಾನವನ್ನು ತಂದು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೆರೆ ಕಟ್ಟೆಗಳನ್ನು ತುಂಬಿಸುತ್ತೇನೆ. ರೈತರು ಬೆಳೆದ ಬೆಳೆಗಳಿಗೆ ವೈಜಾnನಿಕ ಬೆಲೆ ಸಿಗುವಂತೆ ಮಾಡುತ್ತೇನೆ ಎಂದು ಯಡಿಯೂರಪ್ಪಘೋಷಿಸಿದರು.
ಗೊಂದಲಕ್ಕೆ ಅಧಿವೇಶನದಲ್ಲಿ ಪರಿವಾರಹಾರ: ಲೋಕಸಭೆಯಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ನಾಯಕ ಉಪ ಜಾತಿಗಳಾದ ಪರಿವಾರ, ತಳವಾರ, ಬೇಡ ಹಾಗೂ ಇನ್ನಿತರ ಸಮುದಾಯಗಳನ್ನು ನಾಯಕ ಸಮುದಾಯಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಚಿವರ ಜೊತೆಗೂಡಿ ಪ್ರಧಾನಿಗಳ ಗಮನಕ್ಕೆ ತಂದು ಗೊಂದಲ ಪರಿಹರಿಸಲಾಗುವುದು
ಎಂದು ನಾಯಕ ಸಮುದಾಯಗಳ ಮುಖಂಡರು ನೀಡಿದ ಮನವಿಯನ್ನು ಸ್ವೀಕರಿಸಿ ಭರವಸೆ ನೀಡಿದರು. ತಿ.ನರಸೀಪುರ ಕ್ಷೇತ್ರಕ್ಕೆ ಸಮೀಕ್ಷೆ ವೇಳೆ ಕಾರ್ಯಕರ್ತರು ಹಾಗೂ ಜನರು ಸೂಚಿಸುವ ವ್ಯಕ್ತಿಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ನೀಡಲಾಗುವುದು ಎಂದರು.
ಮತ್ತೆ ಬಿಜೆಪಿಗೆ ಅಧಿಕಾರ ನೀಡಿ: ಮಾಜಿ ಶಾಸಕ ಡಾ.ಎನ್.ಎಲ್.ಭಾರತೀ ಶಂಕರ್ ಮಾತನಾಡಿ, ನವ ಕರ್ನಾಟಕ ನಿರ್ಮಾಣ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ನಾಡಿನ ಜನರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರ ನೀಡಬೇಕು. ಕ್ಷೇತ್ರದ ಶಾಸಕರಾಗಿ ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಕ್ಷೇತ್ರದ ಜನರು ಕೈಗೆ ಸಿಗುತ್ತಿಲ್ಲ. ನಾಲೆಗಳಿಗೆ ನೀರನ್ನು ಹರಿಸದೇ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ದೂರಿದರು.
ಮಾಜಿ ಸಂಸದೆ ತೇಜಸ್ವಿನಿ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವಿರಯ್ಯ, ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸದಸ್ಯ ಸಿ.ರಮೇಶ್, ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಅಧ್ಯಕ್ಷರಾದ ಹೇಮಂತ್ ಕುಮಾರ್‌ಗೌಡ, ಎಂ.ಜಿ.ರಾಮಕೃಷ್ಣಪ್ಪ, ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ, ಜಿಪಂ ಮಾಜಿ ಸದಸ್ಯರಾದ ಪುಟ್ಟಬಸವಯ್ಯ, ಎಂ.ಸುಧಾ ಮಹದೇವಯ್ಯ,
ಶಶಿಕಲಾ ನಾಗರಾಜು, ಕೌಟಿಲ್ಯ ಆರ್.ರಘು, ಡಾ.ಶಿವರಾಮ, ಪ.ಪಂ ವಿರೇಶ್, ಡಾ.ಎಂ.ಸಿ.ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಕರೋಹಟ್ಟಿ ಮಹದೇವಯ್ಯ, ತೋಟದಪ್ಪ ಬಸವರಾಜು, ಬಿ.ವೀರಭದ್ರಪ್ಪ, ವೀಣಾ ಶಿವಕುಮಾರ್, ಶಿವಮ್ಮ ಮಹದೇವ, ಕೆ.ನಂಜುಂಡಸ್ವಾಮಿ, ಮಣಿಕಂಠರಾಜ್‌ಗೌಡ, ಬಿ.ಎನ್.ಸುರೇಶ, ನಾಗರಾಜು, ದಿಲೀಪ ಹಾಗೂ ಇನ್ನಿತರರು ಹಾಜರಿದ್ದರು.
ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೈಪೋಟಿಯನ್ನು ನೀಡುವ ಸಾಮರ್ಥ್ಯವಿರುವುದು ಬಿಜೆಪಿ ಮಾತ್ರ. ಕ್ಷೇತ್ರದ ಶಾಸಕರಾದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ನಮ್ಮ ಶಿಷ್ಯ ಕ್ಷೇತ್ರದಲ್ಲಿ ಚನ್ನಾಗಿ ಕೆಲಸ ಮಾಡುತ್ತಿದ್ದಾನಲ್ಲ ಅಂತ ಜೆಡಿಎಸ್ ಟಿಕೆಟ್ ಕೇಳುವ ಆಕಾಂಕ್ಷಿಗಳಿಗೆ ಹೇಳುತ್ತಿದ್ದಾರೆ. ಅದಕ್ಕಾಗಿ ದುರ್ಬಲ ಅಭ್ಯರ್ಥಿಯನ್ನು ದಳದಿಂದ ಕಣಕ್ಕಿಳಿಸುತ್ತಾರೆ.
-ಸಿ.ಪಿ.ಯೋಗೀಶ್ವರ್, ಚನ್ನಪಟ್ಟಣ ಶಾಸಕ
ಬಿಜೆಪಿ ಮುಖಂಡರಿಬ್ಬರ ಜೇಬಿಗೆ ಕತ್ತರಿ: ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮೂವರು ಮುಖಂಡರ ಜೇಬಿಗೆ ಕತ್ತರಿ ಕಾಕಿದ ಕಳ್ಳರು 90 ಸಾವಿರ ರೂ.ಹಣವನ್ನು ಎಗರಸಿದ್ದಾರೆ. ಜನದಟ್ಟಣೆಯ ಸಮಾವೇಶದಲ್ಲಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಅವರ ಬಳಿ 50 ಸಾವಿರ, ಮಾಜಿ ಜಿಲ್ಲಾ ಉಪಾಧ್ಯಕ್ಷ ತೋಟದಪ್ಪಬಸವರಾಜು ಅವರ ಬಳಿಯಿದ್ದ 24 ಸಾವಿರ ಹಾಗೂ ಬಿಲಿಗೆರೆಹುಂಡಿ ಗ್ರಾಮದ ಮುಖಂಡರೊಬ್ಬರ ಬಳಿ 15 ಸಾವಿರ ರೂ. ನಗದು ಹಣವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಮೂವರು ಮುಖಂಡರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.