ಬದುಕು ರೂಪಿಸಲು ಸಹಾಯಕ್ಕೆ ಮನವಿ
Team Udayavani, Jan 24, 2018, 10:14 PM IST
ಉಡುಪಿ: ಕುಟುಂಬಕ್ಕೆ ಆಸರೆಯಾಗಬೇಕೆಂದು ಭಾರೀ ಕನಸು ಹೊತ್ತುಕೊಂಡು ಕಾಲೇಜು ಕಲಿಯುತ್ತಿದ್ದ 18ರ ಹರೆಯದ ಯುವಕ ಅಪಘಾತಕ್ಕೆ ತುತ್ತಾಗಿ ಕಾಲನ್ನೇ ಕಳೆದುಕೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಮುಂದಕ್ಕೆ ಚಿಕಿತ್ಸೆಯೊಂದಿಗೆ ಕೃತಕ ಕಾಲು ಕೂಡ ಜೋಡಣೆ ಮಾಡಬೇಕಾಗಿದ್ದು, ಮನೆಮಂದಿ ಸಾರ್ವಜನಿಕ ಸಹಾಯ ಯಾಚಿಸಿದ್ದಾರೆ.
ಬ್ರಹ್ಮಾವರದ ಆಟೋರಿಕ್ಷಾ ಚಾಲಕ ಚಾಂತಾರು ಗ್ರಾಮದ ಅಂಗಡಿಬೆಟ್ಟುವಿನ ಪಾಂಡುರಂಗ ನಾಯಕ್ ಅವರ ಪುತ್ರ
ಪ್ರಶಾಂತ್ ಅವರು ಕಾಲು ಕಳೆದುಕೊಂಡ ಯುವಕ. ಅವರು ಕಡಿಯಾಳಿಯ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಕಲಿಯುತ್ತಿದ್ದರು.
ಘಟನೆಯ ಹಿನ್ನೆಲೆ
ಸ್ನೇಹಿತನ ಬೈಕಿನಲ್ಲಿ ಪೇಟೆ ಕಡೆಗೆ ಹೋಗು ತ್ತಿದ್ದಾಗ ಸವಾರನ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿತ್ತು. ಸವಾರ ದೂರಕ್ಕೆ ಎಸೆಯ ಲ್ಪಟ್ಟರೆ, ಸಹಸವಾರನಾಗಿದ್ದ ಪ್ರಶಾಂತ ಬೈಕಿನಡಿ ಸಿಲುಕಿ ಕಾಲಿಗೆ ಗಂಭೀರ ಸ್ವರೂಪದ ಪೆಟ್ಟಾಗಿತ್ತು.
ಮಣಿಪಾಲದಲ್ಲಿ ಚಿಕಿತ್ಸೆ
ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಶಾಂತನ ಕಾಲಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಡಕಾಲಿನ ರಕ್ತನಾಳಕ್ಕೆ ಗಂಭೀರವಾಗಿ ಪೆಟ್ಟಾಗಿದ್ದ ಕಾರಣ ಮೊಣಗಂಟಿನಿಂದ ಕೆಳಗಿನ ಕಾಲನ್ನೇ ಕಟ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಮೊಣಗಂಟಿನಿಂದ ಕೆಳಗಿನ ಎಡಕಾಲು ಕತ್ತರಿಸಲಾಗಿದೆ.
ಶಸ್ತ್ರಚಿಕಿತ್ಸೆ , ಕೃತಕ ಕಾಲು ಜೋಡಣೆ
ಶಸ್ತ್ರಚಿಕಿತ್ಸೆಗೆ ಭಾರೀ ಹಣ ಖರ್ಚಾಗಿದ್ದು, ಕೃತಕ ಕಾಲಿನ ಜೋಡಣೆ ಹಾಗೂ ಮುಂದಿನ ವೈದ್ಯಕೀಯ ವೆಚ್ಚಕ್ಕೆ ಲಕ್ಷಾಂತರ ರೂ, ವ್ಯಯವಾಗಲಿದ್ದು , ಹೆತ್ತವರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮುಂದಿನ ವಿದ್ಯಾಭ್ಯಾಸದ ಕುರಿತು ಕಾಲೇಜಿನ ಪ್ರಾಂಶುಪಾಲರು ಮಾನವೀಯ ಸ್ಪಂದನೆ ನೀಡಿದ್ದಾರೆ ಎಂದು ಯುವಕನ ತಂದೆ ತಿಳಿಸಿದ್ದಾರೆ.
ಆರ್ಥಿಕ ಸಹಾಯ ಮಾಡಿ
ಇನ್ನೂ ಹದಿಹರೆಯದ ವಯಸ್ಸಿನಲ್ಲಿರುವ ಪ್ರಶಾಂತನ ಭವಿಷ್ಯ ರೂಪಣೆ ಸದ್ಯ ಸಮಾಜದ ದಾನಿಗಳ ಕೈಯಲ್ಲಿದೆ. ಸಹೃದಯೀ, ಮಾನವೀಯ ಮನಸ್ಸುಳ್ಳ ದಾನಿಗಳು ಸ್ಪಂದಿಸಿ ಹಣಕಾಸಿನ ಸಹಾಯವನ್ನು ಯುವಕನಿಗೆ ಮಾಡಬೇಕಿದೆ. ಸಹಾಯ ಮಾಡಲಿಚ್ಛಿಸುವ ಮಾನವೀಯ ದಾನಿಗಳು ಸಿಂಡಿಕೇಟ್ ಬ್ಯಾಂಕಿನ ಬ್ರಹ್ಮಾವರ ಶಾಖೆಯಲ್ಲಿರುವ ಪ್ರಶಾಂತ್ ಅವರ ಉಳಿತಾಯ ಖಾತೆಗೆ (01122210027744) ಹಣ ಜಮೆ ಮಾಡಬಹುದು. ಬ್ಯಾಂಕ್‌ನ ಐಎಫ್ಎಸ್‌ಸಿ ಕೋಡ್-SYNB0000112. ನೇರವಾಗಿ ಸಂಪರ್ಕಿಸಲು ಇಚ್ಛಿಸುವವರು ಪ್ರಶಾಂತನ ತಂದೆ ಪಾಂಡುರಂಗ ನಾಯಕ್ ಅವರ ಮೊಬೈಲ್ ಸಂಖ್ಯೆಯನ್ನು (9448770285) ಸಂಪರ್ಕಿಸಿ ಸಹಾಯ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.