ಗೌರವದಿಂದ ಮಾತಾಡಿ: ಗೌಡರಿಗೆ ತಿರುಗೇಟು
Team Udayavani, Jan 25, 2018, 6:45 AM IST
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೊಡ್ಡವರು. ಅವರು ವಯಸ್ಸಿಗೆ ತಕ್ಕಂತೆ ಗೌರವದಿಂದ
ಮಾತನಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಿರುಗೇಟು ನೀಡಿದರು.
ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕದ ಕಾಮಗಾರಿಗಳಲ್ಲಿ ನನಗೆ
ಪರ್ಸೆಂಟೇಜ್, ಕಮೀಷನ್ ಸಿಗಲಿಲ್ಲವೆಂದು ಡೀಸಿಯನ್ನು ವರ್ಗಾವಣೆ ಮಾಡಿಸಿದ್ದೇ ನೆಂದು ದೇವೇಗೌಡರು ಆರೋಪ ಮಾಡುವುದಾದರೆ, 2006ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರ ಮಗ ರೇವಣ್ಣನವರೇ ಜಿಲ್ಲಾ ಉಸ್ತುವಾರಿ
ಸಚಿವರಾಗಿದ್ದರು. ಆಗ ರೇವಣ್ಣ ಅವರೂ ಪರ್ಸೆಂಟೇಜ್, ಕಮೀಷನ್ ತೆಗೆದುಕೊಂಡಿದ್ರಾ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ನಾನು ಒತ್ತಡ ಹಾಕಿಲ್ಲ. ಆಡಳಿತಾತ್ಮಕ ಕಾರಣಕ್ಕೆ ಸರ್ಕಾರ
ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದರಲ್ಲದೆ, ಚುನಾವಣಾ ಆಯೋಗದ ಪತ್ರ ಬರೆದ ಬಗ್ಗೆ ತಮಗೇನೂ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಲಿದೆ ಎಂದು ಹೇಳುವ ಮೂಲಕ ಶೀಘ್ರದಲ್ಲೇ ಡೀಸಿ ವರ್ಗಾವಣೆ ಸುಳಿವು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.