ಮಹತ್ವದ ಆಸಿಯಾನ್ ಸಮ್ಮೇಳನ ಇಂದು
Team Udayavani, Jan 25, 2018, 8:54 AM IST
ಹೊಸದಿಲ್ಲಿ: ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಸರ್ವ ರೀತಿಯಲ್ಲಿ ಶಕ್ತಿ ವರ್ಧಿಸುತ್ತಿರುವ ಚೀನಗೆ ಸವಾಲು ಹಾಕುವ ನಿಟ್ಟಿನಲ್ಲಿಯೇ ಗುರುವಾರ ಹೊಸದಿಲ್ಲಿಯಲ್ಲಿ ಆಸಿಯಾನ್ -ಭಾರತ ರಾಷ್ಟ್ರಗಳ ಸಮಾವೇಶ ನಡೆಯಲಿದೆ. ಅದಕ್ಕಾಗಿ ಹತ್ತು ರಾಷ್ಟ್ರಗಳ ಮುಖ್ಯಸ್ಥರು ಹೊಸದಿಲ್ಲಿಗೆ ಆಗಮಿಸಲಾರಂಭಿಸಿದ್ದಾರೆ. ಗಮನಾರ್ಹ ವಿಚಾರವೆಂದರೆ ಆಸಿಯಾನ್-ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದು 25 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಮಹತ್ವ ಪಡೆದಿದೆ. ಅವರು ಶುಕ್ರವಾರ ನಡೆಯುವ ಗಣ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿಯೂ ಭಾಗವಹಿ ಸಲಿದ್ದಾರೆ. ಆಸಿಯಾನ್ ದೇಶಗಳೊಂದಿಗೆ ಭಾರತದ ಸಹಭಾಗಿತ್ವಕ್ಕೆ 25 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.
ವ್ಯಾಪಾರ ಮತ್ತು ವಹಿವಾಟು ಒಪ್ಪಂದಗಳು ಮತ್ತು ಚರ್ಚೆಗಳು ಈ ಸಮ್ಮೇಳನದಲ್ಲಿ ಪ್ರಮುಖವಾಗಿರಲಿದೆ. ಪ್ರತಿ ವರ್ಷ ಆಸಿಯಾನ್ ದೇಶಗಳೊಂದಿಗೆ ಆರ್ಥಿಕ ಹಾಗೂ ರಾಜಕೀಯ ವಿಚಾರಗಳನ್ನು ಚರ್ಚಿಸಲು ದಿಲ್ಲಿ ಡೈಲಾಗ್ ಎಂಬ ಕಾರ್ಯಕ್ರಮನ್ನು ನಡಸಲಾಗುತ್ತದೆ. ಈ ಮಧ್ಯೆ ಹತ್ತು ದೇಶಗಳ ಗಣ್ಯರು ಆಗಮಿಸಿದ್ದರಿಂದ ದಿಲ್ಲಿಯಲ್ಲಿ ಹಲವು ರಸ್ತೆಗಳನ್ನು ಭದ್ರತಾ ಕ್ರಮವಾಗಿ ಮುಚ್ಚಲಾಗಿದೆ. ಇದರಿಂದಾಗಿ ದಿಲ್ಲಿಯಲ್ಲಿ ಸಾರ್ವಜನಿಕ ಸಂಚಾರ ದುಸ್ತರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.