ತಾಯಿ-ಮಗನನ್ನು ಗುಂಡಿಟ್ಟು ಕೊಂದ ಹಂತಕರು, ಸಿಸಿಟಿವಿ ದಾಖಲು
Team Udayavani, Jan 25, 2018, 12:01 PM IST
ಮೀರತ್ : ಹದಿನೈದು ತಿಂಗಳ ಹಿಂದೆ ನಡೆದಿದ್ದ ತಂದೆಯ ಕೊಲೆ ಕೇಸಿನ ವಿಚಾರಣೆಯನ್ನು ನ್ಯಾಯಾಲಯ ನಡೆಸುವ ಮುನ್ನಾದಿನ ದುಷ್ಕರ್ಮಿಗಳು ಮಹಿಳೆ ಮತ್ತು ಆಕೆಯ ಪುತ್ರನನ್ನು ಗುಂಡಿಟ್ಟು ಕೊಂದಿರವುದು ಸಿಸಿಟಿವಿ ಯಲ್ಲಿ ದಾಖಲಾಗಿದ್ದು ಪೊಲೀಸರು ಅದರ ಆಧಾರದಲ್ಲಿ ಹಂತಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತಾಯಿ – ಮಗನ ಕೊಲೆ ಪ್ರಕರಣ ಮೀರತ್ ಜಿಲ್ಲೆಯ ಸೋರ್ಖಾ ಗ್ರಾಮದಲ್ಲಿ ನಿನ್ನೆ ಬುಧವಾರ ಮಧ್ಯಾಹ್ನ ನಡೆದಿದೆ.
ತನ್ನ ಮನೆಯ ಹೊರಗೆ ಮಂಚದಲ್ಲಿ ಇನ್ನೊಬ್ಬ ಮಹಿಳೆಯ ಕುಳಿತಿದ್ದ 60 ವರ್ಷ ಪ್ರಾಯದ ನಿಛತ್ತರ್ ಕೌರ್ ಗೆ ಅಪರಿಚಿತ ಹಂತಕರು ಎಂಟು ಗುಂಡುಗಳನ್ನು ಎಸೆದು ಕೊಂದಿದ್ದಾರೆ.
ಇದಕ್ಕೆ ಕೆಲವೇ ನಿಮಿಷಗಳ ಮುನ್ನ ಇದೇ ಹಂತಕರು ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಆಕೆಯ 26ರ ಹರಯದ ಮಗ ಬಲ್ವಿàಂದರ್ ಅವರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.
ಬೈಕಿನಲ್ಲಿ ಬಂದಿದ್ದ ಹಂತಕರು ಹೋಗುವಾಗ ಬೈಕನ್ನು ಬಿಟ್ಟು ಹೋಗಿದ್ದಾರೆ.
ಆರೋಪಿಗಳಲ್ಲಿ ಒಬ್ಟಾತನನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಲೋಪಕ್ಕಾಗಿ ಪರ್ತಾಪುರ ಸ್ಟೇಶನ್ ಹೌಸ್ ಆಫೀಸರ್ ಸಹಿತ ನಾಲ್ಕು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.