ಗಣರಾಜ್ಯ ಹಬ್ಬಕ್ಕೆ ಆಸಿಯಾನ್ ಅತಿಥಿಗಳು
Team Udayavani, Jan 25, 2018, 6:51 AM IST
25 ವರ್ಷಗಳ ಬಾಂಧವ್ಯವೊಂದನ್ನು ಸಾರುವಂತೆ, ಇದೇ ಮೊದಲ ಬಾರಿಗೆ 10 ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂಥ ಗಣರಾಜ್ಯ ದಿನಾಚರಣೆಗೆ ಭಾರತೀಯರು ಸಾಕ್ಷಿಯಾಗಲಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ ನಾಯಕರನ್ನು ಗಣರಾಜ್ಯ ದಿನಕ್ಕೆ ಪ್ರಧಾನಿ ಮೋದಿ ಅವರು ಆಹ್ವಾನಿಸಿದ್ದಾರೆ. ಈ ಗಣ್ಯರ ಆಗಮನದ ಮೂಲಕ ಪ್ರಧಾನಿ ಮೋದಿ ಅವರ “ಆ್ಯಕ್ಟ್ ಈಸ್ಟ್ ಪಾಲಿಸಿ’ಗೂ ಬಲ ಬರಲಿದ್ದು, ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಮತ್ತೂಂದು ಕಡೆ, ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯುವಂಥ ಕೆಲಸಕ್ಕೂ ಇದು ಪರೋಕ್ಷವಾಗಿ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಆಸಿಯಾನ್ ಜತೆಗಿನ ಭಾರತದ ಸಂಬಂಧ, ಈ ಬಾರಿ ಗಣರಾಜ್ಯದ ವೈಶಿಷ್ಟéಗಳ ಮಾಹಿತಿ ಇಲ್ಲಿದೆ..
ಪಾಲ್ಗೊಳ್ಳುವಿಕೆಗೆ 2 ಕಾರಣಗಳು
ಒಂದು ಆರ್ಥಿಕ ಕಾರಣವಾದರೆ, ಮತ್ತೂಂದು ರಕ್ಷಣೆಗೆ ಸಂಬಂಧಿಸಿದ್ದು. ಆಸಿಯಾನ್ ಜೊತೆ ಭಾರತವು ಸಂಬಂಧ ವೃದ್ಧಿಸಿಕೊಳ್ಳಲು ನೆರೆರಾಷ್ಟ್ರ ಚೀನಾದ ಆಕ್ರಮಣಕಾರಿ ಹಾಗೂ ವಿಸ್ತರಣಾ ಪ್ರವೃತ್ತಿಯೂ ಕಾರಣ. ಚೀನಾದಿಂದ ಅಂತರ ಕಾಯ್ದುಕೊಳ್ಳಬೇಕೆಂದರೆ, ಆಸಿಯಾನ್ ದೇಶಗಳಿಗೆ ಭಾರತ ಬೇಕು, ಅಂತೆಯೇ ಭಾರತಕ್ಕೆ ಆಸಿಯಾನ್ ದೇಶಗಳು ಬೇಕು. ಆಸಿಯಾನ್ ಹಾಗೂ ಭಾರತವು ಪ್ರಾದೇಶಿಕ ಸಮೂಹವನ್ನು ರಚಿಸಿಕೊಳ್ಳಲು ಇದೂ ಒಂದು ಕಾರಣ. ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲೂ ಈ ಬಂಧ ಅತ್ಯಗತ್ಯ.
ಆಸಿಯಾನ್ ರಾಷ್ಟ್ರಗಳ ಒಕ್ಕೂಟ
1961: ಜು.31ರಂದು ಸ್ಥಾಪನೆಗೊಂಡ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ. ಫಿಲಿಪ್ಪೀನ್ಸ್, ಫೆಡರೇಷನ್ ಆಫ್ ಮಲಯಾ ಮತ್ತು ಥಾಯ್ಲೆಂಡ್ ಆರಂಭಿಕ ಸದಸ್ಯ ರಾಷ್ಟ್ರಗಳು.
1967 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್ ರಾಷ್ಟ್ರಗಳು ಘೋಷಣೆ ಅಂಗೀಕರಿಸಿದವು.
1984 : ಜ.7ರಂದು ಬ್ರೂನೈ ಸದಸ್ಯ ರಾಷ್ಟ್ರವಾಯಿತು.
ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ, ರಾಜಕೀಯ, ಭದ್ರತೆ, ಮಿಲಿಟರಿ, ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಮತ್ತು ಏಷ್ಯಾದ ಇತರ ರಾಷ್ಟ್ರಗಳ ನಡುವೆ ಸಮಾನ ಚಿಂತನೆಗಳ ಹಂಚುವಿಕೆ ಅದರ ಉದ್ದೇಶ
ಆಸಿಯಾನ್ ಮತ್ತು ಭಾರತ
1992 ಭಾರತವು ಆಸಿಯಾನ್ ರಾಷ್ಟ್ರಗಳ ಒಕ್ಕೂಟ ಪ್ರವೇಶಿಸಿದ್ದು.
2003 ಅಕ್ಟೋಬರ್ 8: ಒಪ್ಪಂದಕ್ಕೆ ಸಹಿ ಹಾಕಿದ್ದು. ಇಂಡೋನೇಷ್ಯಾದ ಬಾಲಿಯಲ್ಲಿ.
2012 ಡಿಸೆಂಬರ್ 20-21: ನವದೆಹಲಿಯಲ್ಲಿ ಇತ್ತೀಚಿನ ಆಸಿಯಾನ್ ರಾಷ್ಟ್ರಗಳ ಸಮ್ಮೇಳನ
25 ಆಸಿಯಾನ್ ಜತೆಗಿನ ಭಾರತದ ಸಂಬಂಧದ ಸಮಯ
8 3.6 ವರ್ಷದಲ್ಲಿ ಮೋದಿ ಭೇಟಿ ನೀಡಿದ ಆಸಿ ಯಾನ್ ರಾಷ್ಟ್ರಗಳು
ಈ ವರ್ಷದ ಗಣರಾಜ್ಯೋತ್ಸವ
69 ನೇ ಗಣ ರಾಜ್ಯೋತ್ಸವ
10 ಮುಖ್ಯ ಅತಿಥಿಗಳು
700 ವಿದ್ಯಾರ್ಥಿಗಳಿಂದ (ಅತಿಥಿ ರಾಷ್ಟ್ರಗಳ) ಕಾರ್ಯಕ್ರಮ
113 ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಸಾಹಸ ಪ್ರದರ್ಶನ
100 ಏಜೆನ್ಸಿಗಳಿಂದ ಗಣರಾಜ್ಯ ದಿನಕ್ಕೆ ಸಿದ್ಧತೆ
100 ಅಡಿ- ಅಗಲದ ವೇದಿಕೆ ನಿರ್ಮಾಣ
22 ಮಂದಿ. ವೇದಿಕೆ ಯಲ್ಲಿ ಆಸೀನ ರಾಗುವ ಗಣ್ಯರು
9 ಪ್ರತಿ ಆಸಿಯಾನ್ ನಾಯಕನ ಬೆಂಗಾವಲು ಪಡೆಗೆ ಮೀಸಲಿಟ್ಟ ಕಾರುಗಳ ಸಂಖ್ಯೆ
3 ದಿನಗಳು. ಆಸಿಯಾನ್ ನಾಯಕರು ತಂಗಲಿರುವುದು
1.ಬ್ರೂನೈ
1992ರಲ್ಲಿ ದೊರೆ ಸುಲ್ತಾನ್ ಹಸನ್ ಬೊಲ್ಕಿಯಾ ಭಾರತ ಭೇಟಿಯೊಂದಿಗೆ ಎರಡೂ ದೇಶಗಳ ಸಂಬಂಧ ಗಟ್ಟಿ ಆಯಿತು. ಆರ್ಥಿಕತೆಗೆ ಸಂಬಂಧಿಸಿ ಭಾರತ-ಬ್ರೂನೈ ನಡುವೆ 5 ಒಪ್ಪಂದಗಳಾಗಿವೆ. ನಮಗೆ ಬ್ರೂನೈಯಿಂದ ಕಚ್ಚಾತೈಲ ಪೂರೈಕೆಯಾದರೆ, ಭಾರತ ಬ್ರೂನೈಗೆ ವೃತ್ತಿಪರ,ಅರೆ-ಕುಶಲ ಕಾರ್ಮಿಕರನ್ನು ಕಳುಹಿಸಿದೆ. ಬ್ರೂನೈ ಆಸ್ಪತ್ರೆಗಳಲ್ಲಿ ಹೆಚ್ಚಾಗಿ ಕಾಣಸಿಗುವುದು ನಮ್ಮ ಡಾಕ್ಟರ್‌ಗಳೇ!
2.ಸಿಂಗಾಪುರ
1965 ಆ.22ರಿಂದ ರಾಜತಾಂತ್ರಿಕ ಸಂಬಂಧವಿದೆ. ಇಲ್ಲಿ ಸುಮಾರು 3 ಲಕ್ಷ ಮಂದಿಯಷ್ಟು ಭಾರತೀಯ ಮೂಲದವರು ನೆಲೆಸಿದ್ದಾರೆ. ಆ ದೇಶದ ಜತೆ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ)ಕ್ಕೆ ಸಹಿ ಹಾಕಲಾಗಿದೆ. ಲೀ ಹೀಸಿಂಗ್ ಸದ್ಯ ಅಲ್ಲಿನ ಪ್ರಧಾನಿ.
3.ವಿಯೆಟ್ನಾಂ
ಸುಮಾರು 2ನೇ ಶತಮಾನದಿಂದಲೂ ಈ ದೇಶದ ಜತೆ ಬಾಂಧವ್ಯ ಇದೆ. 1972ರಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. 1975ರಲ್ಲಿ ವಿಯೆಟ್ನಾಂಗೆ ಭಾರತ ಸರ್ಕಾರದ ವತಿಯಿಂದ ವಾಣಿಜ್ಯ ಸಂಬಂಧಕ್ಕೆ ಸಹಿ ಹಾಕಲಾಯಿತು ಮತ್ತು “ಅತ್ಯಂತ ಸ್ನೇಹಯುತ ರಾಷ್ಟ್ರ’ ಎಂಬ ಮಾನ್ಯತೆ ನೀಡಲಾಯಿತು. ನೊಗ್ವೆನ್ ಕ್ಸುವಾನ್ ಸದ್ಯದ ಪ್ರಧಾನಿ.
4.ಕಾಂಬೋಡಿಯಾ
ಚೀನಾಗೆ ಹೋಲಿಸಿದರೆ ಕಾಂಬೋಡಿಯಾದಲ್ಲಿ ಭಾರತದ ಉತ್ಪಾದನಾ ವಲಯದ ಪ್ರಭಾವ ಕಡಿಮೆಯಿದೆ. ಆದರೆ, ಪ್ರಧಾನಿ ಮೋದಿ ಅವರು ತಮ್ಮ “ಆ್ಯಕ್ಟ್ ಈಸ್ಟ್ ಪಾಲಿಸಿ’ ಘೋಷಿಸಿದ ಬಳಿಕ ಭಾರತದ ಹಲವಾರು ನಿಯೋಗಗಳು ಕಾಂಬೋಡಿಯಾಗೆ ತೆರಳಿ, ಅಲ್ಲಿನ ಹೂಡಿಕೆ ಮತ್ತು ವ್ಯಾಪಾರದ ಅವಕಾಶಗಳ ಬಗ್ಗೆ ಪರಿಶೀಲಿಸಿ ಬರುತ್ತಿವೆ. ಹಾಲಿ ಪ್ರಧಾನಿ ಹೂ ಸೆನ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
5.ಮ್ಯಾನ್ಮಾರ್
ಮ್ಯಾನ್ಮಾರ್ ಜತೆಗಿನ ಭಾರತದ ಸಂಬಂಧ ಬಹಳ ಹಳೆಯದು. 1948ರಿಂದಲೂ ಆ ದೇಶದೊಂದಿಗೆ ಉತ್ತಮ ಸಂಬಂಧವಿದೆ. ವಿವಿಧ ಕ್ಷೇತ್ರಗಳಲ್ಲಿ ಒಪ್ಪಂದವೂ ಏರ್ಪಟ್ಟಿದೆ. ಆ ದೇಶದ ಸೇನೆಯ ಆಧುನೀಕರಣಕ್ಕೂ ಭಾರತ ನೆರವು ನೀಡಿದೆ. 2001ರಲ್ಲಿ ಎರಡೂ ದೇಶಗಳನ್ನು ಸಂಪರ್ಕಿಸುವ 250 ಕಿ.ಮೀ.ನ ತಮು-ಕಲೇವಾ-ಕಲೆಮ್ಯೋ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಇದನ್ನು “ಇಂಡೋ-ಮ್ಯಾನ್ಮಾರ್ ಫ್ರೆಂಡ್‌ಶಿಪ್ ರೋಡ್’ ಎನ್ನಲಾಗುತ್ತದೆ. ಮ್ಯಾನ್ಮಾರ್ ಜತೆಗಿನ ಭಾರತದ ಸಂಬಂಧದ ಹಿಂದೆ ಚೀನಾದ ಪ್ರಾಬಲ್ಯವನ್ನು ಹತ್ತಿಕ್ಕುವಂಥ ವ್ಯೂಹಾತ್ಮಕ ತಂತ್ರವೂ ಇದೆ. ಅಲ್ಲಿನ ನಾಯಕಿ ಆಂಗ್ ಸಾನ್ ಸೂಕಿ.
6.ಮಲೇಷ್ಯಾ
ಶತಮಾನಗಳಿಂದ ಆ ದೇಶದ ಜತೆ ಸಂಬಂಧ ಇತ್ತು. ಸ್ವಾತಂತ್ರಾé ನಂತರ 1957ರಲ್ಲಿ ಆ ರಾಷ್ಟ್ರದ ಜತೆ ದ್ವಿಪಕ್ಷೀಯ ಬಾಂಧವ್ಯ ಹೊಂದಲಾಗಿದೆ. ಆ ವರ್ಷದಿಂದ ಈಚೆಗೆ ಹಲವಾರು ಬಾರಿ ದ್ವಿಪಕ್ಷೀಯ ಒಪ್ಪಂದ, ನಾಯಕರ ಭೇಟಿಗಳು ನಡೆದಿವೆ. ಮೊಹಮ್ಮದ್ ನಜೀಬ್ ಬಿನ್ ಟುನ್ ಹಾಜಿ ಅಬ್ದುಲ್ ರಜಾಕ್ ಸದ್ಯದ ಪ್ರಧಾನಿ. 2009ರಿಂದ ಅಧಿಕಾರದಲ್ಲಿದ್ದಾರೆ.
7.ಥಾಯ್ಲೆಂಡ್
1947ರಿಂದಲೇ ಥಾಯ್ಲೆಂಡ್ ಜತೆ ರಾಜತಾಂತ್ರಿಕ ಸಂಬಂಧವಿದೆ. ಅಂಡಮಾನ್-ನಿಕೋಬಾರ್ ದ್ವೀಪ ಸಮೂಹದಲ್ಲಿ ಆ ದೇಶದ ಜತೆಗೆ ಅಂತಾರಾಷ್ಟ್ರೀಯ ಗಡಿ ಇದೆ. ಎರಡೂ ದೇಶಗಳ ನಾಯಕರು ಹಲವಾರು ಬಾರಿ ದ್ವಿಪಕ್ಷೀಯ ಭೇಟಿ ನಡೆಸಿದ್ದಾರೆ. ಪ್ರಯುತ್ ಚಾನ್ ಒ ಚ ಸದ್ಯ ಅಲ್ಲಿನ ಪ್ರಧಾನಿ.
8.ಫಿಲಿಪ್ಪೀನ್ಸ್
ಚಾರಿತ್ರಿಕವಾಗಿ ಶತಮಾನಗಳಿಂದ ಬಾಂಧವ್ಯ ಇದ್ದರೂ 1949ರ ನ.26ರಂದು ರಾಜತಾಂತ್ರಿಕ ಬಾಂಧವ್ಯ ಶುರುವಾಯಿತು. ವ್ಯಾಪಾರ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಇಲ್ಲಿನ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಜನಪದ ಸಂಸ್ಕೃತಿಯ ಮೇಲೂ ಭಾರತದ ಪ್ರಭಾವ ಸಾಕಷ್ಟಿದೆ. ರೋಡ್ರಿಗೋ ಡುಟರ್ಟೆ ಅವರು ಸದ್ಯ ಫಿಲಿಪ್ಪೀನ್ಸ್‌ನ ಅಧ್ಯಕ್ಷರಾಗಿದ್ದಾರೆ.
9. ಇಂಡೋನೇಷ್ಯಾ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತದ ಜತೆ ಇಂಡೋನೇಷ್ಯಾ ಕೂಡ ಇದೆ. ಭಾರತ ಮತ್ತು ಇಂಡೋನೇಷ್ಯಾದ ಸಂಬಂಧ ರಾಮಾಯಣ ಕಾಲದಿಂದಲೂ ಇದೆ ಎಂಬ ಮಾತಿದೆ. ರಾಮಾಯಣದಲ್ಲಿ ಬರುವ “ಯವದ್ವೀಪಾ’ ಇರುವುದು ಜಾವಾದಲ್ಲಿ. ಇದಲ್ಲದೆ, ಎರಡೂ ದೇಶಗಳ ನಡುವೆ ಆರ್ಥಿಕ ಸಂಬಂಧವೂ ಉತ್ತಮವಾಗಿದೆ. ಈಗ ಜೋಕೋ ವಿಡೋಡೋ ಅವರು ಇಂಡೋನೇಷ್ಯಾದ ಅಧ್ಯಕ್ಷರಾಗಿದ್ದಾರೆ.
10.ಲಾವೋಸ್
ಭಾರತ ಮತ್ತು ಲಾವೋಸ್‌ನದ್ದು 60 ವರ್ಷಗಳ ಹಿಂದಿನ ಬಾಂಧವ್ಯ. ಹಲವು ಕ್ಷೇತ್ರಗಳಲ್ಲಿ ಸಹಕಾರದ ಒಪ್ಪಂದ ನಡೆದಿದೆ. ಅಲ್ಲಿ ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಾಗಿ ಭಾರತ ಹಣಕಾಸಿನ ನೆರವನ್ನೂ ನೀಡಿದೆ. ಅಲ್ಲಿನ ರಕ್ಷಣಾ ಪಡೆಗಳಿಗೆ ಭಾರತ 50 ಪ್ಯಾರಾಚೂಟ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಅಲ್ಲಿ ಭಾರತವು ಸೂರ್ಯ ಕಿರಣ್ ಏರ್‌ಶೋ ಕೂಡ ಆಯೋಜಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಸಿಗಬೇಕೆಂಬ ಭಾರತದ ಪ್ರಯತ್ನಕ್ಕೆ ಲಾವೋಸ್ ಬೆಂಬಲ ನೀಡುತ್ತಲೇ ಬಂದಿದೆ. ಬೌನ್‌ಹ್ಯಾಂಗ್ ವೊರಾಚಿತ್ ಅವರು ಲಾವೋಸ್‌ನ ಸದ್ಯದ ಅಧ್ಯಕ್ಷ.
ಹಲೀಮತ್ ಸಅದಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.