ಮಂತ್ರದ ಉಂಗುರ ಗಾಳಿಯಲಿ ತೇಲಿತು!

Team Udayavani, Jan 25, 2018, 2:59 PM IST

1000.jpg

ಮೇಲಕ್ಕೆಸೆದ ಎಲ್ಲ ವಸ್ತುಗಳು ಕೆಳಕ್ಕೆ ಬೀಳಲು ಏನು ಕಾರಣ ಹೇಳಿ?…ಹಾಂ, ಭೂಮಿಯ ಗುರುತ್ವಾಕರ್ಷಣಾ ಶಕ್ತಿಯೇ ಅದಕ್ಕೆ ಕಾರಣ. ಆ ಶಕ್ತಿಗೇ ಚಾಲೆಂಜ್‌ ಹಾಕಿ, ವಸ್ತುವನ್ನು ಗಾಳಿಯಲ್ಲಿ ಚಲಿಸುವಂತೆ ಮಾಡೋ ಜಾದು ಗೊತ್ತಿದೆಯಾ ನಿಮಗೆ?

ಬೇಕಾಗುವ ವಸ್ತುಗಳು: ರಬ್ಬರ್‌ ಪೆನ್ಸಿಲ್‌, ಉಂಗುರ, ಪ್ಲಾಸ್ಟಿಕ್‌ ಗಮ್‌ ಟೇಪ್‌, ಕಪ್ಪು ನೂಲು

ಪ್ರದರ್ಶನ: ಜಾದೂಗಾರ ಕೈಯಲ್ಲಿ ಒಂದು ಪೆನ್ಸಿಲ್‌ ಹಿಡಿದಿರುತ್ತಾನೆ. ಅದರೊಳಗೆ ಉಂಗುರವಿರುತ್ತದೆ. ಯಾವುದೋ ಮಂತ್ರವನ್ನು ಜಪಿಸುತ್ತಾನೆ. ಆಗ ಪೆನ್ಸಿಲ್‌ನೊಳಗಿದ್ದ ಉಂಗುರ ಮೇಲಕ್ಕೆ ತೇಲುತ್ತದೆ. 

ತಯಾರಿ: ಈ ಮ್ಯಾಜಿಕ್‌ನ ರಹಸ್ಯ ಅಡಗಿರುವುದು ಕಪ್ಪು ನೂಲಿನಲ್ಲಿ. ಪ್ಲಾಸ್ಟಿಕ್‌ ಟೇಪ್‌ನ ಸಹಾಯದಿಂದ ಕಪ್ಪು ನೂಲಿನ ಒಂದು ತುದಿಯನ್ನು ಪೆನ್ಸಿಲ್‌ನ ರಬ್ಬರ್‌ ಇರುವ ಜಾಗದ ತುಸು ಕೆಳಗೆ ಅಂಟಿಸಿ. ಆ ನೂಲಿನ ಇನ್ನೊಂದು ತುದಿಯನ್ನು ಅಂಗಿಯ ಬಟನ್‌ ಅಥವಾ ಬೆಲ್ಟ್ನ ತೂತಿಗೆ ನಾಜೂಕಾಗಿ ಸಿಕ್ಕಿಸಿಕೊಳ್ಳಿ. ನೂಲು ತೀರಾ ಉದ್ದ ಇರುವುದು ಬೇಡ. ಪೆನ್ಸಿಲ್‌ಅನ್ನು ಚಿತ್ರದಲ್ಲಿ ತೋರಿಸಿದಂತೆ ಉದ್ದಕ್ಕೆ ಹಿಡಿದು, ಕೈಯನ್ನು ಮುಂಚಾಚಿದಾಗ ಸಿಗುವ ಅಂತರದಷ್ಟೆ ಉದ್ದವಿರಲಿ ನೂಲು. 

ಈಗ ಉಂಗುರವನ್ನು ಪೆನ್ಸಿಲ್‌ ಮತ್ತು ನೂಲಿನ ನಡುವಿಂದ ತೂರಿಸಿ. ಈಗ ಇನ್ನೊಂದು ಕೈಯಿಂದ ನೂಲನ್ನು ಕೆಳಗಿನಿಂದ ಎಳೆದರೆ, ನೂಲು ಬಿಗಿಯಾಗಿ ಉಂಗುರ ಮೇಲಕ್ಕೆ ಚಲಿಸುತ್ತಿದೆಯೆಂದು ಖಾತರಿಪಡಿಸಿಕೊಳ್ಳಿ. ಈಗ ಪ್ರದರ್ಶನ ನೀಡುವ ಸಮಯದಲ್ಲಿ ನೂಲಿನ ಕೆಳತುದಿಯನ್ನು ಬೆಲ್ಟ್ ಅಥವಾ ಅಂಗಿಯ ಗುಂಡಿಗೆ ಕಟ್ಟಿರುವುದರಿಂದ ಯಾವ ಕೈಯಲ್ಲಿ ಪೆನ್ಸಿಲ್‌ ಹಿಡಿದಿದ್ದೀರೋ, ಅದೇ ಕೈಯನ್ನು ಮುಂದಕ್ಕೆ ಚಾಚಿದಾಗ, ನೂಲು ಬಿಗಿಗೊಂಡು ಉಂಗುರ ಮೇಲಕ್ಕೆ ಏರುತ್ತೆ. ದೂರದಿಂದ ನೋಡಿದಾಗ ಉಂಗುರವು ಗಾಳಿಯಲ್ಲಿ ತೇಲಿದಂತೆ ಕಾಣಿಸುತ್ತದೆ.

ನೂಲು ಕಾಣಿಸದಿರಲೆಂದೇ ಕಪ್ಪು ನೂಲನ್ನು ಬಳಸಬೇಕು. ಗಾಢ ಬಣ್ಣದ ಬಟ್ಟೆ ಧರಿಸುವುದೂ ಮ್ಯಾಜಿಕ್‌ಗೆ ಸಹಾಯಕ. ಜೊತೆಗೆ ಪ್ರದರ್ಶನದ ವೇಳೆ ಬೆಳಕು ಆದಷ್ಟು ಮಂದವಿದ್ದರೆ ಒಳ್ಳೆಯದು. ಪ್ರದರ್ಶನಕ್ಕೂ ಮುನ್ನ ಈ ಜಾದೂವನ್ನು ಅಭ್ಯಾಸ ಮಾಡಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.