ರಾಮನಗರದಲ್ಲಿ “ಕೈ’ ಅಭ್ಯರ್ಥಿಗೆ ಹುಡುಕಾಟ
Team Udayavani, Jan 25, 2018, 5:36 PM IST
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟ ಇನ್ನೂ ಮುಂದುವರಿದಿದೆ! ಕ್ಷೇತ್ರದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಎಂದು ಸ್ಥಳೀಯ ಕಾರ್ಯಕರ್ತರು ಪಕ್ಷದ ವರಿಷ್ಠರನ್ನು
ಒತ್ತಾಯಿಸುತ್ತಿದ್ದಾರೆ.
ಕಳೆದ ಚುನಾವಣೆ ವೇಳೆ ಸರ್ಕಾರಿ ಕೆಲಸ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮರಿದೇವರು ಸ್ಪರ್ಧಿಸಿದ್ದರು. ಆದರೆ ಮರಿದೇವರು ಅವರ ಅಕಾಲಿಕ ಮರಣದಿಂದಾಗಿ ಅವರ ಸ್ಥಾನ ಶೂನ್ಯವಾಗಿದೆ. ಮರಿದೇವರು ನಿಧನದಿಂದಾಗಿ ಸ್ಥಳೀಯ ಕಾಂಗ್ರೆಸ್ ನೇಪಥ್ಯಕ್ಕೆ ಸರಿಯುವ ಸಾಧ್ಯತೆ ನಿಚ್ಚಳವಾಗಿತ್ತು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ಎಂಎಲ್‌ಸಿ ಸ್ಥಾನವನ್ನು, ಮುಖಂಡ ಕೆ.ಶೇಷಾದ್ರಿ ಅವರಿಗೆ ಮೈಸೂರು ಎಲೆಕ್ಟ್ರಿಕಲ್
ಇಂಡಸ್ಟ್ರೀಸ್ ಲಿಮಿಟಡ್‌ನ ಅಧ್ಯಕ್ಷ ಸ್ಥಾನವನ್ನು, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾರಿಗೆ ಕೆಪಿಸಿಸಿ ಕಾರ್ಯದರ್ಶಿ ಸ್ಥಾನ ಮತ್ತು ಸ್ಥಳೀಯ ಇನ್ನು ಹಲವರಿಗೆ ನಿಗಮ, ಮಂಡಳಿಗಳಲ್ಲಿ ಮತ್ತು ಪಕ್ಷದಲ್ಲಿ ನಿರ್ದೇಶಕ, ಸದಸ್ಯ ಸ್ಥಾನಗಳನ್ನು ಕೊಟ್ಟು ರಾಮನಗರದಲ್ಲಿ ಕಾಂಗ್ರೆಸ್ ತನ್ನ ಬಲ ಚದುರಿ ಹೋಗದಂತೆ ಕಾಯ್ದುಕೊಂಡಿದೆ.
ಜೆಡಿಎಸ್ ಭದ್ರಕೋಟೆ: ರಾಮನಗರ ರಾಜಕರಣದಲ್ಲಿ ಎಚ್.ಡಿ.ದೇವೇಗೌಡರ ಪ್ರವೇಶಾನಂತರ ರಾಮನಗರ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಜೆಡಿಎಸ್ ಪ್ರಭಾವ ಕುಗ್ಗಿಸಿ ಕಾಂಗ್ರೆಸ್ ಬಾವುಟ ಹಾರಿಸುವ ಪ್ರಯತ್ನಗಳು ಪಕ್ಷದ ಹೈಕಮಾಂಡ್ ಮಾಡಿರಲೇ ಇಲ್ಲ! ಹೊರಗಿನ ವ್ಯಕ್ತಿಗಳಿಗೆ ಮಣೆ ಹಾಕಿ ಪಕ್ಷದ ಅಧೋಗತಿಗೆ ಸ್ವಯಂ ಹೈಕಮಾಂಡ್ ಕಾರಣವಾಗಿತ್ತು ಎಂಬುದು ಸ್ಥಳೀಯ ಕಾಂಗ್ರೆಸ್ಸಿಗರ ಮನದಾಳದ ಮಾತು.
ಕಳೆದ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಮರಿದೇವರು ಅವರನ್ನು ಕಣಕ್ಕಿಳಿಸಿದ್ದರಿಂದ ಕಾಂಗ್ರೆಸ್ ಇಲ್ಲಿ ಪುನಃಶ್ಚೇತನಗೊಂಡಿದೆ. ಹೀಗಾಗಿಯೇ ನಗರಸಭೆಯಲ್ಲಿಯೂ ಕಾಂಗ್ರೆಸ್ ಆಡಳಿತ ಸ್ಥಾಪಿಸಲು ಸಾಧ್ಯವಾಗಿದೆ ಎಂದು ಕಾಂಗ್ರೆಸ್ಸಿಗರ ವಿಶ್ಲೇಷಣೆ.
ಕ್ಷೇತ್ರದಲ್ಲೇ ಅರ್ಹ ಅಭ್ಯರ್ಥಿಗಳಿದ್ದಾರೆ: ಮುಂಬರುವ ಚುನಾವಣೆಗೆ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕುವುದು ಬೇಡ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಮನಗರ
ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕ್ಷೇತ್ರದಲ್ಲಿ ಮುಖಂಡರ ಕೊರತೆ ಏನಿಲ್ಲ. ಸೈಯದ್ ಜಿಯಾವುಲ್ಲಾ (ನಗರಸಭೆ ಮಾಜಿ ಅಧ್ಯಕ್ಷ) , ಕೆ.ಶೇಷಾದ್ರಿ (ರಾ-ಚ ಪ್ರಾಧಿಕಾರದ ಮಾಜಿ ಅಧ್ಯಕ್ಷ) ಶಾಸಕ ಸ್ಥಾನಕ್ಕೆ ಅರ್ಹರಿದ್ದಾರೆ ಎಂದು ಮುಖಂಡರ ಗಮನ ಸೆಳೆದಿದ್ದಾರೆ. ಆದರೆ ಈ ಇಬ್ಬರು ನಾಯಕರು ಇಲ್ಲಿಯವರೆಗೂ ತಾವು ಆಕಾಂಕ್ಷಿಗಳು ಎಂದು ಹೇಳಿಕೊಂಡಿಲ್ಲ. ಅವರ ಅಭಿಮಾನಿಗಳು ಅವರನ್ನು ಪ್ರೊಪೋಸ್ ಮಾಡುತ್ತಿದ್ದಾರೆ.
ನಾವು ಆಕಾಂಕ್ಷಿಗಳು…: ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್.ಚಂದ್ರಶೇಖರ್ ಮತ್ತು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ
ಆಕಾಂಕ್ಷಿಗಳು ಎಂದು ಪಕ್ಷಕ್ಕೆ ಭಿನ್ನವಿಸಿಕೊಂಡಿದ್ದಾರೆ.
ಇವರಿಬ್ಬರು ರಾಮನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಲ್ಲ! ಆದರೆ ಇಬ್ಬರೂ ಕೈಗೆಟುಕುವ ಅಭ್ಯರ್ಥಿಗಳು
ಎಂಬುದೇ ಸಮಾಧಾನ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ಎರಡು ಹೆಸರು ರೇಸ್‌ನಲ್ಲಿವೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿರುವ ಡಿಕೆ ಬ್ರದರ್ ಯಾರಿಗೆ ಟಿಕೆಟ್ ಕೊಡ್ತಾರೋ ಕಾದು
ನೋಡಬೇಕಾಗಿದೆ.
ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಮುಖರಗೌಪ್ಯ ಸಭೆ: ಅಭ್ಯರ್ಥಿಯ ಬಗ್ಗೆ ಚರ್ಚೆ
ರಾಮನಗರ: ಇಲ್ಲಿನ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ಸೋಮವಾರ ಬಿಡದಿ ಬಳಿಯ ಐಕಾನ್ ನರ್ಸಿಂಗ್ ಕಾಲೇಜಿನಲ್ಲಿ ರಹಸ್ಯ ಸಭೆ ನಡೆದಿತ್ತು ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ. ಕ್ಷೇತ್ರಾದ್ಯಂತ ನೂರು ಪ್ರಮುಖ ಕಾರ್ಯ ಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಆಗಿರುವ ಸಚಿವ ಡಿ.ಕೆ. ಶಿವಕುಮಾರ್ ಖುದ್ದು ಹಾಜರಿದ್ದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಬಹುತೇಕ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಎಂದು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಎಂದು
ಗೊತ್ತಾಗಿದೆ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್. ಚಂದ್ರಶೇಖರ್ ಮತ್ತು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ತಾವು ಟಿಕೆಟ್ ಆಕಾಂಕ್ಷಿಗಳು ಎಂದು ಮುಂದೆ ಬಂದಿದ್ದಾರೆ. ಎಲ್. ಚಂದ್ರಶೇಖರ್ ರಾಮನಗರ ತಾಲೂಕು ಮೂಲದವರು, ರಾಜಕೀಯ ಹಿನ್ನೆಲೆ ಉಳ್ಳವರು ಆಗಿರುವುದರಿಂದ ಇವರ ಹೆಸರನ್ನೇ ಪರಿಗಣಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಇಕ್ಬಾಲ್ ಹುಸೇನ್ ಕನಕಪುರ ತಾಲೂಕಿನವರಾದರು, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಂತಾಗುತ್ತದೆ ಮತ್ತು ಜಿಪಂ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಡಿ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಕೊನೆಗೆ ಇಬ್ಬರ ಪೈಕಿ ಒಬ್ಬರ ಹೆಸರನ್ನು ಅಖೈರು ಮಾಡುವ ಹೊಣೆಯನ್ನು ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ಕಾಂಗ್ರೆಸ್ ಮುಖಂಡರು ಹೊರೆಸಿದ್ದಾರೆ. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಕೆಪಿಸಿಸಿ ಕಾರ್ಯದರ್ಶಿ
ಸೈಯದ್ ಜಿಯಾವುಲ್ಲಾ ಅವರ ಸಹಕಾರ ಪಡೆಯುವಂತೆಯೂ ಕಾರ್ಯಕರ್ತರು ಸಲಹೆ ನೀಡಿದ್ದಾರೆ. ಸದ್ಯದಲ್ಲೇ ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿ.ವಿ.ಸೂರ್ಯ ಪ್ರಕಾಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.