ಸುಳ್ಳು ದಾಖಲೆ ನೀಡಿ ಐಟಿ ರಿಟರ್ನ್ಸ್: ಸಿಎ ಸೆರೆ
Team Udayavani, Jan 26, 2018, 8:35 AM IST
ಬೆಂಗಳೂರು: ಸುಳ್ಳು ದಾಖಲೆ ನೀಡಿ ಬೃಹತ್ ಕಂಪನಿಗಳ ಉದ್ಯೋಗಿಗಳ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುತ್ತಿದ್ದ ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಒಬ್ಬರನ್ನು ಬಂಧಿಸಿದೆ. ಸುಳ್ಳು ದಾಖಲೆಗಳನ್ನು
ಆದಾಯ ತೆರಿಗೆ ಇಲಾಖೆಗಳಿಗೆ ಸಲ್ಲಿಸಿ, ಕಡಿತಗೊಂಡ ಆದಾಯ ತೆರಿಗೆಯ ರಿಫಂಡ್ಗಳನ್ನು ಕಂಪನಿ ಉದ್ಯೋಗಿಗಳಿಗೆ ಒದಗಿಸುವ
ಚಾರ್ಟರ್ಡ್ ಅಕೌಂಟೆಂಟ್ಗಳ ಜಾಲವೇ ಇದೆ ಎಂದು ಆದಾಯ ತೆರಿಗೆ ಇಲಾಖೆ ಶಂಕಿಸಿದೆ. ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಸಿಎ ಕಚೇರಿಯಲ್ಲಿ ಹಲವು ಬೋಗಸ್ ದಾಖಲೆಗಳು ಸಿಕ್ಕಿವೆ. ಅಷ್ಟೇ ಅಲ್ಲ, ಇದಕ್ಕೆ ಪೂರಕವಾಗಿ ವಾಟ್ಸ್ಆ್ಯಪ್ ಚಾಟ್ ಸಂದೇಶ ಕೂಡ ಲಭ್ಯವಾಗಿವೆ.
50ಕ್ಕೂ ಹೆಚ್ಚು ಕಂಪನಿಗಳು ಈ ಸಿಎ ಕ್ಲೈಂಟ್ಗಳಾಗಿದ್ದು, ಈಗಾಗಲೇ ಸಾವಿರಾರು ರಿಟರ್ನ್ಸ್ ಅನ್ನು ಸುಳ್ಳು ದಾಖಲೆ ನೀಡಿ ಈತ ಸಲ್ಲಿಸಿದ್ದಾನೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಚಾರ್ಟರ್ಡ್ ಅಕೌಂಟೆಂಟ್ನ ಹೆಸರು ಮತ್ತಿತರ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿಲ್ಲ.
ಹೇಗೆ ನಡೀತಿತ್ತು ಮೋಸ?: ಕಂಪನಿಯ ಉದ್ಯೋಗಿಗಳಿಗೆ ಕಡಿತಗೊಂಡ ಆದಾಯ ತೆರಿಗೆಯನ್ನು ವಾಪಸ್ ಪಡೆಯಲು, ಮನೆ ಸ್ವತ್ತಿನಲ್ಲಿ ನಷ್ಟವಾಗಿದೆ ಎಂದು ಸಿಎ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ರಿಫಂಡ್ ಮೊತ್ತದ ಮೇಲೆ ಶೇ. 10ರಷ್ಟು ಕಮಿಷನ್ ಪಡೆಯುತ್ತಿದ್ದ. ಸ್ವತ್ತಿನಲ್ಲಿ ನಷ್ಟವಾಗಿದೆ ಎಂಬ ಕಾರಣವೊಂದನ್ನೇ ನೀಡಿ 1000 ಕ್ಲೇಮ್ ಮಾಡಿದ್ದು, ಇದರಿಂದ 18 ಕೋಟಿ ರೂ. ರಿಫಂಡ್ ಪಡೆಯಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಒಂದೇ ಚಾರ್ಟರ್ಡ್ ಅಕೌಂಟೆಂಟ್ನಿಂದ ಒಂದೇ
ರೀತಿಯ ಹಲವು ಕ್ಲೇಮ್ಗಳು ಬಂದಾಗ ಆದಾಯ ತೆರಿಗೆ ಇಲಾಖೆ ಎಚ್ಚೆತ್ತುಕೊಂಡಿತು. ಈ ಚಾರ್ಟರ್ಡ್ ಅಕೌಂಟೆಂಟ್
ನ ಕ್ಲೈಂಟ್ಗಳನ್ನು, ಅಂದರೆ ಸಿಎ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸಿದ ವಿವಿಧ ಕಂಪನಿಯ ಉದ್ಯೋಗಿಗಳನ್ನು ಸಂಪರ್ಕಿಸಿದಾಗ ಸ್ವತ್ತಿನಲ್ಲಿ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಾನು ಹೇಗಾದರೂ ದಾಖಲೆ ಮೂಲಕ ರಿಫಂಡ್ ಕೊಡಿಸುತ್ತೇನೆ ಎಂದಿದ್ದ ಎಂದು ಉದ್ಯೋಗಿಗಳು ಹೇಳಿದ್ದಾರೆ. ಸಿಎ ಕಚೇರಿಯ ಮೇಲೆ ದಾಳಿ ನಡೆಸಿದ ನಂತರದಲ್ಲಿ ಹಲವು ಉದ್ಯೋಗಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಐಟಿ ಇಲಾಖೆ ವಿವರಿಸಿದೆ. ಆದರೆ ಸ್ವತ್ತಿನಲ್ಲಿ ನಷ್ಟದ ದಾಖಲೆ ಸೃಷ್ಟಿಸಿ ರಿಟರ್ನ್ಸ್
ಸಲ್ಲಿಸುವಂತೆ ಉದ್ಯೋಗಿಗಳೇ ನನಗೆ ಹೇಳಿದ್ದರು ಎಂದು ಸಿಎ ಹೇಳಿದ್ದಾರೆ. ಆದರೆ ಉದ್ಯೋಗಿಗಳ ಜತೆಗಿನ ವಾಟ್ಸ್ಆ್ಯಪ್ ಸಂಭಾಷಣೆಯು ಐಟಿ ಇಲಾಖೆಗೆ ಲಭ್ಯವಾಗಿದೆ. ಜೊತೆಗೆ ಹಲವು ದಾಖಲೆಗಳನ್ನೂ ಐಟಿ ಇಲಾಖೆ ವಶಪಡಿಸಿಕೊಂಡಿದೆ.
ಯಾವ ಕಂಪನಿಗಳ ಉದ್ಯೋಗಿಗಳು?
ಐಬಿಎಂ
ವೊಡಾಫೋನ್
ಸ್ಯಾಪ್ಲ್ಯಾಬ್ಸ್
ಬಯೋಕಾನ್
ಇನ್ಫೋಸಿಸ್
ಐಸಿಐಸಿಐ ಬ್ಯಾಂಕ್
ಸಿಸ್ಕೋ
ಥಾಮ್ಸನ್ ರಾಯrರ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.