ಬಿಜೆಪಿಯಿಂದ ಸ್ಪರ್ಧಿಸಲು ಆಂದೋಲಾ ಶ್ರೀ ಪ್ರಯತ್ನ
Team Udayavani, Jan 26, 2018, 9:00 AM IST
ಜೇವರ್ಗಿ: ಮಠಾಧೀಶರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಈಗ ಅದಕ್ಕೆ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಕೂಡ ಸೇರ್ಪಡೆಯಾಗಿದ್ದಾರೆ. ಕೆಲವು ದಿನಗಳಿಂದ ಆಂದೋಲಾ ಶ್ರೀ ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಈ ಕುರಿತು “ಉದಯವಾಣಿ’ ಯೊಂದಿಗೆ ಶ್ರೀಗಳು ಮಾತನಾಡಿ, ಜೇವರ್ಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವಂತೆ ಭಕ್ತರು ಹಾಗೂ ಅಭಿಮಾನಿಗಳು ಒತ್ತಡ ಹಾಕುತ್ತಿದ್ದು, ಅವರ ಒತ್ತಾಸೆಗೆ ಸ್ಪರ್ಧಿಸಲು ಇಚ್ಛಿಸಿದ್ದೇನೆ.
ನಮಗೆ ಟಿಕೆಟ್ ಕೊಡಿಸುವ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಹಾಗೂ ಕೇಂದ್ರದ ಕೆಲ ನಾಯಕರು ಪ್ರಯತ್ನ
ನಡೆಸುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದರೆ ಶಿವಸೇನೆಯಿಂದ ಸ್ಪರ್ಧಿಸುವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕ್ಷೇತ್ರದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಡಾ.ಅಜಯ್‌ಸಿಂಗ್ ಮುಂದಿನ ಅಭ್ಯರ್ಥಿಯಾಗಿದ್ದು, ಮತ್ತೂಮ್ಮೆ ಅವರನ್ನು
ಗೆಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಬೆಂಬಲಿಸಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಅದರಂತೆ ಕುಮಾರ ಪರ್ವ
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕೇದಾರಲಿಂಗಯ್ಯ ಹಿರೇಮಠ ನನ್ನ ಅಣ್ಣನಿದ್ದಂತೆ. ಅವರನ್ನು ಗೆಲ್ಲಿಸಿದ್ದೇ ಆದಲ್ಲಿ ಜೆಡಿಎಸ್ ಅ ಧಿಕಾರಕ್ಕೆ ಬಂದರೆ ಅವರನ್ನು ಸಚಿವರನ್ನಾಗಿಸುವೆ ಎಂದು ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ಪರಿವರ್ತನಾ
ಯಾತ್ರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅಧಿಕೃತ ಅಭ್ಯರ್ಥಿಯ ಬಗ್ಗೆ ಮಾತನಾಡದೇ ಕೇವಲ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರಲ್ಲದೇ ಹಿಂದುಳಿದ ವರ್ಗದ ಹಿರಿಯ ಮುಖಂಡ
ಧರ್ಮಣ್ಣ ದೊಡ್ಮನಿ, ಜಿಪಂ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ಶಿವರಾಜ ಪಾಟೀಲಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗ
ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಪ್ರಬಲ ಆಕಾಂಕ್ಷಿಯಾಗಿರುವ ವಿಷಯ ಗುಟ್ಟಾಗಿ ಉಳಿದಿಲ್ಲ.
ಈಗಾಗಲೇ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ-ಕಾಂಗ್ರೆಸ್‌ನ ಹಲವರನ್ನು ಜೆಡಿಎಸ್‌ನತ್ತ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಶಾಸಕ ಡಾ.ಅಜಯ್‌ಸಿಂಗ್ ನಾಲ್ಕು ವರ್ಷದ ಸರ್ಕಾರದ ಸಾಧನೆ ಜತೆಗೆ ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸುತ್ತಾ ಮತ್ತೂಮ್ಮೆ ಬೆಂಬಲಿಸುವಂತೆ ಕೋರುತ್ತಿದ್ದಾರೆ.
ಈ ಎರಡೂ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಟಿಕೆಟ್ ನೀಡುವಿಕೆಯಲ್ಲಿ ಗೊಂದಲದಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಟಿಕೆಟ್ ಪಕ್ಕಾ ಆದರೆ ಬಿಜೆಪಿ ಅಭ್ಯರ್ಥಿ ಘೋಷಿಸುವುದರಲ್ಲಿ ಇನ್ನೂ ಗೊಂದಲದಲ್ಲಿರುವುದು ಹಲವು ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದೆ.
ಜೇವರ್ಗಿ ಕ್ಷೇತ್ರದಲ್ಲಿ ಅಪ್ಪನ ಹೆಸರು ಹೇಳಿ ಮತ ಕೇಳುವ ಜನರೇ ಹೆಚ್ಚಾಗಿದ್ದಾರೆ. ಇದರ ಅವಶ್ಯಕತೆ ನನಗಿಲ್ಲ. ಈ ಕ್ಷೇತ್ರದಲ್ಲಿ ಕಠೊರ ಹಿಂದೂವಾದಿಗೆ ಬಿಜೆಪಿ ಟಿಕೆಟ್ ಸಿಕ್ಕರೆ ಮಾತ್ರ ಕಾಂಗ್ರೆಸ್ ಸೋಲಿಸಲು ಹಾಗೂ ಹಿಂದೂಗಳನ್ನು ಒಗ್ಗೂಡಿಸಲು ಸಾಧ್ಯ
●ಸಿದ್ದಲಿಂಗ ಸ್ವಾಮೀಜಿ, ಕರುಣೇಶ್ವರ ಮಠ, ಆಂದೋಲಾ
ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಡುಬಿದ್ರಿ,ಮಲ್ಪೆ,ಕುಂದಾಪುರ,ಹಂಗಾರಕಟ್ಟೆ ಸಹಿತ ರಾಜ್ಯದ 12 ಬಂದರುಗಳಿಗೆ ಹೈಟೆಕ್ ಸ್ಪರ್ಶ?
“ಕರಾಳ’ ಎಂಇಎಸ್‌ಗೆ ಹೈಕೋರ್ಟ್ ನೋಟಿಸ್; ನಿಲುವು ಸ್ಪಷ್ಟಪಡಿಸಲು ಎಂಇಎಸ್‌ಗೆ ಸೂಚನೆ
BJP: ವಿಜಯೇಂದ್ರ ವಿರುದ್ಧ ಈಗ ತಟಸ್ಥ ಬಣವೂ ಬಂಡಾಯ
ಸಿದ್ದು ಮುಂದೆ ಯಾರನ್ನೋ “ಸಿಎಂ’ ಅನ್ನೋದು ಅಪಮಾನ: ಸಿ.ಟಿ. ರವಿ
ವಿಟಿಯುನಲ್ಲಿ ಇಂಟರ್ನ್ ಶಿಪ್ ಬದಲು ಕೌಶಲಾಭಿವೃದ್ಧಿ ಕೋರ್ಸ್!
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್